ADVERTISEMENT

ಸಿಲಿಂಡರ್ ನಿಮಗಿದು ತಿಳಿದಿರಲಿ

ಎಂ.ಎಸ್.ಧರ್ಮೇಂದ್ರ
Published 2 ಆಗಸ್ಟ್ 2013, 19:59 IST
Last Updated 2 ಆಗಸ್ಟ್ 2013, 19:59 IST

ಏನಪ್ಪಾ ಇದು, ದಿನನಿತ್ಯ ಬಳಸುವ ಅಡುಗೆ ಅನಿಲ ಸಿಲಿಂಡರ್ ಬಗ್ಗೆ ತಿಳಿಯುವಂತಹ ವಿಶೇಷವೇನಿದೆ ಅಂದುಕೊಳ್ಳುತ್ತಿದ್ದೀರಾ? ಇದರ ಬಗ್ಗೆ  ತಿಳಿದುಕೊಳ್ಳಬೇಕಾದ ಅನೇಕ ವಿಷಯಗಳಿವೆ. ಅದರಲ್ಲಿ ಒಂದು ಮುಖ್ಯವಾದ ವಿಷಯ ಸಿಲಿಂಡರ್‌ನ ಸಮಾಪ್ತಿ (ಎಕ್ಸ್‌ಪೈರಿ ಡೇಟ್) ದಿನಾಂಕ.

ಈ ದಿನಾಂಕದ ಬಗ್ಗೆ ಪ್ರತಿ ಬಳಕೆದಾರರೂ ಕಡ್ಡಾಯವಾಗಿ ಅರಿತಿರಲೇಬೇಕು. ಸಮಾಪ್ತಿ ದಿನಾಂಕವಾದ ನಂತರ ಅನಿಲ ಸಿಲಿಂಡರ್‌ಗಳು ಬಳಕೆಗೆ ಯೋಗ್ಯವಾಗಿರುವುದಿಲ್ಲ. ಅಲ್ಲದೆ ಅವು ಅವಘಡಗಳನ್ನೂ ಆಹ್ವಾನಿಸುತ್ತವೆ.

ಸಮಾಪ್ತಿ ದಿನಾಂಕವನ್ನು ಸಿಲಿಂಡರ್‌ನ ಯಾವುದಾದರೂ ಒಂದು ಭಾಗದಲ್ಲಿ ಆಂಗ್ಲ ಅಕ್ಷರ ಮತ್ತು ಅಂಕಿಗಳ ಜೊತೆಗೆ ಸಂಕೇತದ ರೂಪದಲ್ಲಿ ನಮೂದಿಸಿರುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳುವ ವಿಧಾನವೆಂದರೆ, 12 ತಿಂಗಳುಗಳ ವರ್ಷವನ್ನು ನಾಲ್ಕು ತ್ರೈಮಾಸಿಕಗಳಾಗಿ ವಿಂಗಡಿಸಲಾಗಿರುತ್ತದೆ.

ಮೊದಲನೆಯ ತ್ರೈಮಾಸಿಕದ ಕೊನೆ ತಿಂಗಳಾದ ಮಾರ್ಚಿಯನ್ನು `ಎ' ಅಂತಲೂ, ಎರಡನೆಯ ತ್ರೈಮಾಸಿಕದ ಕೊನೆ ತಿಂಗಳಾದ ಜೂನ್ ಅನ್ನು `ಬಿ' ಅಂತಲೂ, ಮೂರನೆಯ ತ್ರೈಮಾಸಿಕದ ಕೊನೆ ತಿಂಗಳಾದ ಸೆಪ್ಟೆಂಬರ್‌ನ್ನು `ಸಿ' ಅಂತಲೂ, ನಾಲ್ಕನೆಯ ತ್ರೈಮಾಸಿಕದ ಕೊನೆ ತಿಂಗಳಾದ ಡಿಸೆಂಬರ್‌ನ್ನು `ಡಿ' ಅಂತಲೂ ನಮೂದಿಸಿರುತ್ತಾರೆ.

ಉದಾಹರಣೆಗೆ: ನಿಮ್ಮ ಸಿಲಿಂಡರ್‌ಸ್ಟೆಮ್‌ನ ಮೇಲೆ ಸಿ17 ಎಂದು ನಮೂದಿಸಿದ್ದರೆ, ಆ ಸಿಲಿಂಡರ್‌ನ ಸಮಾಪ್ತಿ ದಿನಾಂಕ 31 ಮಾರ್ಚ್ 2017 ಎಂದು ಅರ್ಥ.

ಸಿಲಿಂಡರ್‌ನ ಬಗ್ಗೆ ತಿಳಿದುಕೊಳ್ಳಬೇಕಾದ ಇತರ ವಿಷಯವೆಂದರೆ 15.4 ಅನ್ನುವುದು ಅದರಲ್ಲಿ ತುಂಬಿಸಿರುವ ಅಡುಗೆ ಅನಿಲದ ಪ್ರಮಾಣವನ್ನು ಕಿಲೊ ಗ್ರಾಂಗಳಲ್ಲಿ ಸೂಚಿಸುತ್ತದೆ. 14.2 ಅನ್ನುವುದು ಖಾಲಿ ಸಿಲಿಂಡರ್‌ನ ತೂಕವನ್ನು ಕೆ.ಜಿ.ಗಳಲ್ಲಿ ಸೂಚಿಸಿದರೆ, 29.6 ಎನ್ನುವುದು ತುಂಬಿದ ಸಿಲಿಂಡರ್‌ನ ಒಟ್ಟು ತೂಕವನ್ನು ಸೂಚಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.