ADVERTISEMENT

ಹಕ್ಕುಸ್ವಾಮ್ಯ: ಒರಾಕಲ್‌ ವಿರುದ್ಧ ಗೂಗಲ್‌ಗೆ ಜಯ

ಏಜೆನ್ಸೀಸ್
Published 5 ಏಪ್ರಿಲ್ 2021, 22:07 IST
Last Updated 5 ಏಪ್ರಿಲ್ 2021, 22:07 IST
ಒರಾಕಲ್‌
ಒರಾಕಲ್‌   

ವಾಷಿಂಗ್ಟನ್: ಆಂಡ್ರ್ಯಾಯ್ಡ್ ಮೊಬೈಲ್‌ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಜಾವಾ ಪ್ರೋಗ್ರಾಮಿಂಗ್‌ ಭಾಷೆ ಬಳಕೆ ಕುರಿತು ಒರಾಕಲ್‌ ಕಂಪನಿ ಜೊತೆಗೆ ನಡೆದ ದೀರ್ಘಕಾಲದ ಕಾನೂನು ಹೋರಾಟದಲ್ಲಿ ಗೂಗಲ್‌ ಸಂಸ್ಥೆ ಜಯ ಗಳಿಸಿದೆ.

ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ 6–2ರ ಬಹುಮತದೊಂದಿಗೆ ಗೂಗಲ್‌ ಸಂಸ್ಥೆಯ ಪರವಾಗಿ ತೀರ್ಪು ಹೊರಬಿತ್ತು. ಈ ಮೂಲಕ ತನ್ನ ಎದುರಾಳಿಗೆ ಕೋಟ್ಯಂತರ ದಂಡ ಪಾವತಿಸುವುದರಿಂದ ಗೂಗಲ್‌ ಪಾರಾಯಿತು.

‘ಗೂಗಲ್‌ ಸಂಸ್ಥೆಯು ಹಕ್ಕುಸ್ವಾಮ್ಯ ಕಾನೂನನ್ನು ಉಲ್ಲಂಘಿಸಿಲ್ಲ. ಹಕ್ಕುಸ್ವಾಮ್ಯಕ್ಕೆ ಒಳಗಾಗಬಹುದಾದ ವಸ್ತುವನ್ನೇ ಬಳಸಿಕೊಂಡಿದ್ದರೂ, ಅದು ‘ನ್ಯಾಯೋಚಿತ ಬಳಕೆ’ಯಷ್ಟೇ ಆಗಿದೆ’ ಎಂದು ತೀರ್ಪು ಬರೆದ ನ್ಯಾಯಮೂರ್ತಿ ಸ್ಟೀಫನ್‌ ಬ್ರೇಯರ್‌ ಅವರು ಉಲ್ಲೇಖಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.