ADVERTISEMENT

ಬರ್ಲಿನ್: ಮಾಸ್ಕ್ ಹಾಕಿಕೊಳ್ಳಲು ಹೇಳಿದ್ದಕ್ಕೆ ವಿದ್ಯಾರ್ಥಿ ಹತ್ಯೆ

ಗ್ಯಾಸ್ ಸ್ಟೇಷನ್‌ನಲ್ಲಿ ನಡೆದ ಘಟನೆ

ಕೃಪೆ: ದಿ ನ್ಯೂಯಾರ್ಕ್‌ ಟೈಮ್ಸ್‌
Published 21 ಸೆಪ್ಟೆಂಬರ್ 2021, 14:29 IST
Last Updated 21 ಸೆಪ್ಟೆಂಬರ್ 2021, 14:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬರ್ಲಿನ್: ಮಾಸ್ಕ್ ಹಾಕದ ಗ್ರಾಹಕರೊಬ್ಬರಿಗೆ ಬಿಯರ್ ಮಾರಾಟ ಮಾಡಲು ನಿರಾಕರಿಸಿದ 20 ವರ್ಷದ ವಿದ್ಯಾರ್ಥಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನೈರುತ್ಯ ಜರ್ಮಿನಿಯ ಗ್ಯಾಸ್ ಸ್ಟೇಷನ್‌ವೊಂದರಲ್ಲಿ ನಡೆದಿದೆ ಎಂದು ಸ್ಥಳೀಯ ವಕೀಲರೊಬ್ಬರು ತಿಳಿಸಿದ್ದಾರೆ.

ಶನಿವಾರ ರಾತ್ರಿ ನೈರುತ್ಯ ಜರ್ಮನಿಯ ಗ್ಯಾಸ್ ಸ್ಟೇಷನ್‌ಗೆ ಬಂದಿದ್ದ ವ್ಯಕ್ತಿಯೊಬ್ಬರು ಆರು ಪ್ಯಾಕ್ ಬಿಯರ್‌ ನೀಡುವಂತೆ ಕೋರಿದರು. 2 ಪ್ಯಾಕ್ ಬಿಯರ್ ಕೌಂಟರ್‌ನಲ್ಲಿ ಇಡುವ ವೇಳೆ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ವಿದ್ಯಾರ್ಥಿ ಮಾಸ್ಕ್ ಹಾಕಲು ತಿಳಿಸಿದ್ದಾರೆ. ಅಲ್ಲಿಂದ ಹಿಂತಿರುಗಿದ್ದ ಗ್ರಾಹಕ ಒಂದು ತಾಸಿನ ಬಳಿಕ ಮರಳಿ ಸ್ಟೇಷನ್‌ಗೆ ಬಂದಿದ್ದಾನೆ. ಆಗಲೂ ಅವರಿಗೆ ಮಾಸ್ಕ್ ಧರಿಸುವಂತೆ ವಿದ್ಯಾರ್ಥಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಗ್ರಾಹಕ ವಿದ್ಯಾರ್ಥಿಯ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಕೋವಿಡ್‌–19 ಶುರುವಾದ ಬಳಿಕ ಜರ್ಮನಿಯ ಅಂಗಡಿಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.