ADVERTISEMENT

ಬೆಣ್ಣೆ ಹಣ್ಣು ಬೆಳೆಯಿರಿ ಹೀಗೆ

ಎಣಿಕೆ ಗಳಿಕೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2017, 19:30 IST
Last Updated 27 ಫೆಬ್ರುವರಿ 2017, 19:30 IST
ಬೆಣ್ಣೆ ಹಣ್ಣು ಬೆಳೆಯಿರಿ ಹೀಗೆ
ಬೆಣ್ಣೆ ಹಣ್ಣು ಬೆಳೆಯಿರಿ ಹೀಗೆ   

ಬೆಣ್ಣೆ ಹಣ್ಣಿನ ಗಿಡವನ್ನು ಎಲ್ಲ ತರಹದ ವಾತಾವರಣದಲ್ಲೂ ಬೆಳೆಯಬಹುದು. ಹೆಚ್ಚಿನ ನೀರು, ಗೊಬ್ಬರ ಬೇಡದೇ ಬೆಳೆಯುವ ಗಿಡವಿದು. ಅಲ್ಲದೆ ವರ್ಷದಲ್ಲಿ ಎರಡು ಬಾರಿ ಫಲ ನೀಡುವ, ಯಾವುದೇ ರೋಗರುಜಿನ ಇಲ್ಲದ, ನೋಡಲು ಆಕರ್ಷಕವಾದ ಗಿಡ.

**
ಬಲಿತ ಹಣ್ಣುಗಳ ಬೀಜ ತೆಗೆದು ಮಣ್ಣು ಮರಳು ಗೊಬ್ಬರದ ಮಿಶ್ರಣ ತುಂಬಿರುವ ಪ್ಲಾಸ್ಟಿಕ್ ಚೀಲದಲ್ಲಿ ನಾಟಿ ಮಾಡಿ. ಕೆಲವೇ ದಿನಗಳಲ್ಲಿ ಮೊಳಕೆಯೊಡೆದು ಹೊಸ ಎಲೆಗಳು ಬರುತ್ತವೆ
 
**
ಇದರ ಬೀಜದಿಂದ ಸಸ್ಯಾಭಿವೃದ್ಧಿ ಸಾಧ್ಯ. ಕಸಿ ಮಾಡಿದ ಸಸಿಗಳಿಂದಲೂ ಗಿಡ ಮಾಡಬಹುದು.
 
**
ಗಿಡ ಒಂದರಿಂದ ಒಂದೂವರೆ ಅಡಿ ಎತ್ತರ ಬೆಳೆದ ಮೇಲೆ, ಮುಂಗಾರಿನ ಸಮಯದಲ್ಲಿ ನಾಟಿ ಮಾಡಬಹುದು. ಗಿಡ ದೊಡ್ಡದಾಗಲು ನಾಲ್ಕೈದು ವರ್ಷಗಳಾದರೂ ಬೇಕು. ಐದಾರು ವರ್ಷದಲ್ಲಿ ಗಿಡ ಫಲ ಕೊಡಲಾರಂಭಿಸುತ್ತದೆ.
**
ಗಿಡ ದೊಡ್ಡದಾಗುವವರೆಗೆ ದ್ವಿದಳ ಧಾನ್ಯಗಳನ್ನೋ, ಹಸಿರೆಲೆ ಗೊಬ್ಬರಗಳನ್ನೋ ಬೆಳೆದುಕೊಳ್ಳಬಹುದು. ಇದರಲ್ಲಿ ಅತಿ ಹೆಚ್ಚಿನ ಬಯೋಮಾಸ್ ಇದ್ದು, ಸದಾ ಹಸಿರಾಗಿರುತ್ತದೆ.
 
**
ನವೆಂಬರ್ ಡಿಸೆಂಬರ್‌ನಲ್ಲಿ ಒಣಗಿದ ಎಲೆಗಳನ್ನೆಲ್ಲ ಉದುರಿಸಿಕೊಂಡು ಭೂಮಿ ಫಲವತ್ತತೆಗೆ ದಾರಿ ತೋರಿಸುತ್ತದೆ. ಹೊಸ ಚಿಗುರು, ಮೊಗ್ಗು ಹೂವುಗಳಿಂದ ಗಿಡ ಸಂಭ್ರಮಿಸುತ್ತದೆ
 
**
ಒಂದು ದೊಡ್ಡ ಗಿಡ ನೂರರಿಂದ ನೂರ ಇಪ್ಪತ್ತು ಹಣ್ಣು ಬಿಡಬಲ್ಲದು. ಮೊದಲ ವರ್ಷ ಹೆಚ್ಚು ಹಣ್ಣು ಬಿಟ್ಟರೆ, ಎರಡನೆಯ ವರ್ಷ ಕಮ್ಮಿಯಾಗುವ ಸಂಭವ ಉಂಟು.
 
**
ಸಮೃದ್ಧವಾಗಿ ಬಿಡುವ ಹೂಗಳು ಅತಿ ಹೆಚ್ಚು ಜೇನು ಹುಳುಗಳನ್ನು ಆಕರ್ಷಿಸುತ್ತದೆ. ಪರೋಕ್ಷವಾಗಿ ಪರಾಗಸ್ಪರ್ಶಕ್ಕೆ ಸಹಕರಿಸಿ ಇಳುವರಿ ಹೆಚ್ಚಳಕ್ಕೆ ಕಾರಣವಾಗುತ್ತದೆ. 
 
**
ಹೆಚ್ಚಿನ ಜೇನು ಉತ್ಪಾದನೆಗೂ ಸಹಕರಿಸುತ್ತದೆ. ಕಾಯಿಗಳು ಎಷ್ಟೇ ಬಲಿತರೂ, ಗಿಡದ ಮೇಲೆ ಹಣ್ಣಾಗುವುದಿಲ್ಲ. ಬೇಕೆಂದಾಗ, ಬೇಕಿದ್ದಷ್ಟು ಕಾಯಿಗಳನ್ನು ಮಾತ್ರ ಕಿತ್ತು ಮಾರಾಟ ಮಾಡಬಹುದು. ಕಿತ್ತ ಮೇಲೂ ಹಣ್ಣಾಗಲು ಎರಡು ದಿನ ಬೇಕು 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.