ADVERTISEMENT

ಮನೆಯಲ್ಲೇ ಲಿಂಬು, ಕಿತ್ತಳೆ, ಮೋಸಂಬಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2017, 19:30 IST
Last Updated 3 ಏಪ್ರಿಲ್ 2017, 19:30 IST
ಮನೆಯಲ್ಲೇ ಲಿಂಬು, ಕಿತ್ತಳೆ, ಮೋಸಂಬಿ
ಮನೆಯಲ್ಲೇ ಲಿಂಬು, ಕಿತ್ತಳೆ, ಮೋಸಂಬಿ   

ಬೀಜಗಳಿಗೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಚಾಕುವಿನ ಸಹಾಯದಿಂದ ಹಣ್ಣುಗಳಲ್ಲಿರುವ ಬೀಜವನ್ನು ನಾಜೂಕಾಗಿ ತೆಗೆಯಬೇಕು. ಹಾನಿಯಾಗದಿರುವ ಬೀಜವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.

**

ತುಂಬಾ ಸೂಕ್ಷ್ಮವಾಗಿ ಬೀಜಕ್ಕೆ ಹಾನಿಯಾಗದಂತೆ ಅದರ ಮೇಲಿರುವ ಸಿಪ್ಪೆಯನ್ನು ತೆಗೆಯಿರಿ. ಒಂದು ಟಿಶ್ಯು ಪೇಪರ್‌ ಮೇಲೆ ನೀರನ್ನು ಸಿಂಪಡಿಸಿ ಒದ್ದೆ ಮಾಡಿ. ಅದರಲ್ಲಿ ಬೀಜ ಹಾಕಿ ಸರಿಯಾಗಿ ಮಡಚಿ. ಮೇಲಿನಿಂದ ಪುನಃ ಸ್ಪ್ರೇ ಮಾಡಿ.

ADVERTISEMENT

**

ಒಂದು ಪ್ಲಾಸ್ಟಿಕ್‌ ಕವರಿನಲ್ಲಿ ಅದನ್ನು ಹಾಕಿ, ಕವರನ್ನು ಗಾಳಿಯಾಡದಂತೆ ಕಟ್ಟಬೇಕು. ಇದನ್ನು ಮನೆಯಲ್ಲಿ ಯಾವುದಾದರೂ ಬೆಚ್ಚನೆಯ ಕತ್ತಲು ಇರುವ ಜಾಗದಲ್ಲಿ ಇಡಬೇಕು.

**

10 ದಿನ ಆದ ಮೇಲೆ ಅದನ್ನು ತೆಗೆದಾಗ ಸಣ್ಣನೆ ಚಿಗುರು ಬಿಟ್ಟಿರುತ್ತದೆ. ಒಂದು ಪ್ಲಾಸ್ಟಿಕ್‌ ಬಾಟಲ್‌ ಅನ್ನು ಅರ್ಧ ಕಟ್‌ ಮಾಡಿ. ಬಾಟಲಿಯ ಕೆಳಗಡೆ ಕೆಲವು ರಂಧ್ರ ಮಾಡಿ. ಅದಕ್ಕೆ ಗೊಬ್ಬರಯುಕ್ತ ಮಣ್ಣು ಸೇರಿಸಿ.

**

ಒಂದು ಟೂತ್‌ಪಿಕ್‌ ತೆಗೆದುಕೊಂಡು ಮಣ್ಣಿನ ಮೇಲೆ ರಂಧ್ರ ಮಾಡಿ, ಬೀಜದ ಚಿಗುರು ಕೆಳಮುಖ ಆಗಿರುವಂತೆ ಮಾಡಿ ಚಿಗುರನ್ನು ಮಾತ್ರ ಮಣ್ಣಿನಲ್ಲಿ ಹುಗಿಯಿರಿ. ಬೀಜ ಮೇಲ್ಭಾಗದಲ್ಲಿ ಕಾಣುತ್ತಿರಬೇಕು. ಅದರ ಮೇಲೆ ನೀರನ್ನು ಸ್ಪ್ರೇ ಮಾಡಿ.

**

ಅದನ್ನು ಬೆಚ್ಚಗಿನ ಜಾಗದಲ್ಲಿ ಇಡಬೇಕು. ಸೂರ್ಯನ ಕಿರಣ ನೇರವಾಗಿ ಬೀಳದಂತೆ ನೋಡಿಕೊಳ್ಳಬೇಕು. ಎರಡು ವಾರದ ನಂತರ ಸಸಿ ಮೊಳಕೆಯೊಡೆದಿರುತ್ತದೆ.

**

3–4 ತಿಂಗಳಿನಲ್ಲಿ ಸಸಿ ಬೆಳೆದ ಮೇಲೆ ಒಂದು ಕುಂಡವನ್ನು ತೆಗೆದುಕೊಳ್ಳಿ. ಅದರಲ್ಲಿ ಗೊಬ್ಬರ ಮಿಶ್ರಿತ ಮಣ್ಣನ್ನು ಮುಕ್ಕಾಲು ಭಾಗ ತುಂಬಿ. ಸಸಿ ಬಿಟ್ಟ ಪ್ಲಾಸ್ಟಿಕ್‌ ಕುಂಡವನ್ನು ಕತ್ತರಿಸಿ, ಸಸಿಯನ್ನು ಹೊರಕ್ಕೆ ತೆಗೆಯಿರಿ. ನಿಧಾನವಾಗಿ ಬೇರು ಸಹಿತ ಕಿತ್ತು ಕುಂಡದಲ್ಲಿ ಹಾಕಿ ಮಣ್ಣನ್ನು ಸೇರಿಸಿ. ಚೆನ್ನಾಗಿ ನೀರು ಹಾಕಿ. ಮಣ್ಣು ಒಂದೂವರೆ ಇಂಚು ಒಳಗೆ ಹೋಗುವಷ್ಟು ನೀರು ಹಾಕಿ. ಸಸಿ ನಿಧಾನವಾಗಿ ಗಿಡವಾಗಿ ಹಣ್ಣು ನೀಡಲು ಆರಂಭಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.