ADVERTISEMENT

ಸಮೃದ್ಧ ಮಜ್ಜಿಗೆ ಹುಲ್ಲು ಬೆಳೆಗೆ...

ಎಣಿಕೆ ಗಳಿಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2016, 19:30 IST
Last Updated 28 ನವೆಂಬರ್ 2016, 19:30 IST
ಗ್ರಾಫಿಕ್ಸ್‌  ಭಾವು ಪತ್ತಾರ್
ಗ್ರಾಫಿಕ್ಸ್‌ ಭಾವು ಪತ್ತಾರ್   
‘ಸಿಂಬೊಪೋಗನ್- ಸಿಟ್ರೇಟಸ್’ ಎಂಬ ಸಸ್ಯ ಶಾಸ್ತ್ರೀಯ ಹೆಸರಿನ ನಿಂಬೆಹುಲ್ಲಿಗೆ, ಮಜ್ಜಿಗೆ ಹುಲ್ಲು ಎಂದು ಕನ್ನಡದಲ್ಲಿಯೂ ‘ಲೆಮನ್‌ ಗ್ರಾಸ್’ ಎಂದು ಇಂಗ್ಲಿಷ್‌ನಲ್ಲಿಯೂ ಕರೆಯಲಾಗುವುದು
 
**
ನಾಟಿ ವಿಧಾನ
ಗಿಡದ ಬೆಳವಣಿಗೆಯನ್ನು ಅನುಸರಿಸಿ, ವರ್ಷದಲ್ಲಿ 2–3 ಬಾರಿ ಕಟಾವು ಮಾಡಬಹುದು
 
*
ನಾಲ್ಕು ತಿಂಗಳಿಗೊಮ್ಮೆ  ಸಾವಯವ ಗೊಬ್ಬರ ಕೊಡಬೇಕು. ಒಂದು ಕಿಲೊ ಸೆಗಣಿ, 200 ಗ್ರಾಂ ಹಿಂಡಿ (ಬೇವು ಅಥವಾ ಹೊಂಗೆ ಹಿಂಡಿ) 200ಗ್ರಾಂ ಬೆಲ್ಲ, 20ಗ್ರಾಂ ಅರಿಶಿಣ, 100 ಗ್ರಾಂ ದ್ವಿದಳ ಧಾನ್ಯದ ಹಿಟ್ಟು. ಎಲ್ಲವನ್ನೂ ಐದು ಲೀಟರ್ ನೀರಿನಲ್ಲಿ ಹಾಕಿ ಬೆರೆಸಿ ಭದ್ರವಾಗಿ ಮುಚ್ಚಿಡಿ. ಪ್ರತಿದಿನ ಒಮ್ಮೆ ತೊಳೆಸುತ್ತಿರಿ. ಒಂದು ವಾರದ ನಂತರ ಒಂದು ಲೀಟರ್ ದ್ರಾವಣಕ್ಕೆ, ಒಂಬತ್ತು ಲೀಟರ್ ಬೇರೆ ನೀರು ಸೇರಿಸಿ, ಪ್ರತಿ ಗಿಡಕ್ಕೂ 200 ಮಿಲಿ ಲೀಟರ್‌ನಷ್ಟು ಹಾಕಿ. ಹದಿನೈದು ದಿನಕ್ಕೊಮ್ಮೆ ಪುನರಾವರ್ತಿಸ ಬಹುದು
 
*
(ಕುಂಡದಲ್ಲಿ ಬೆಳೆಯುವುದಾದರೆ ಒಂದು ಗಡ್ಡೆ ಸಾಕು)
ನೆಲದಿಂದ 10 ಸೆಂ.ಮೀ. ಬಿಟ್ಟು ಎಲೆ ಕತ್ತರಿಸಬೇಕು. ಪ್ರತಿ ಬಾರಿ ಕಟಾವು ಮಾಡಿದಾಗಲೂ, ಗಿಡಕ್ಕೆ ಪೋಷಕಾಂಶ ಪೂರೈಸಬೇಕು. ಮುಂದಿನ ಬೆಳೆ ಚೆನ್ನಾಗಿ ಬರ ಬೇಕಾದರೆ ಇದು ಅತ್ಯಂತ ಅವಶ್ಯಕ
 
*
ಸಾಲಿನಿಂದ ಸಾಲಿಗೆ 45 ಸೆಂ.ಮೀ. ಗಿಡದಿಂದ ಗಿಡಕ್ಕೆ 60 ಸೆಂ.ಮೀ. ಹಾಗೂ 15 ಸೆಂ.ಮೀ. ಆಳದಲ್ಲಿ ನಾಟಿ ಮಾಡಬೇಕು
 
*
ಬರ ತಡೆಯುವ ಶಕ್ತಿ ಇರುವ ಗಿಡವಾದರೂ, ನೀರು ಒದಗಿಸಿದಾಗ, ಗಿಡ ಬಹಳ ಸೊಂಪಾಗಿ ಬೆಳೆಯುತ್ತದೆ. ತೋಟಗಳಲ್ಲಿ  ನಡೆಯುವ ಕಾಲುದಾರಿಯ ಇಕ್ಕೆಲಗಳಲ್ಲೂ ಬೆಳೆಯಬಹುದು
 
*
ಎಣ್ಣೆ ತೆಗೆಯುವುದಕ್ಕಾಗಿಯೇ ಗಿಡ ಬೆಳೆಯುವುದಾದಲ್ಲಿ, ಆರು ವರ್ಷಗಳವರೆಗೆ ಲಾಭದಾಯಕವಾಗಿ ಬೆಳೆಯಬಹುದು. ನಂತರದಲ್ಲಿ ಹೊಸ ಗಿಡಗಳನ್ನು ಹಾಕಬೇಕು. ಎಣ್ಣೆಯನ್ನು ತೆಗೆಯಲು ಯಂತ್ರೋಪಕರಣಗಳಿವೆಯಾದರೂ, ವೈಯಕ್ತಿಕ ಬಳಕೆ ದುಬಾರಿ ಆಗಬಹುದು. ಹತ್ತಾರು ಜನ ಸೇರಿ ಒಟ್ಟಾಗಿ ಬೆಳೆದು, ಸಹಕಾರಿ ಸಂಸ್ಕರಣಾ ಘಟಕ ಸ್ಥಾಪಿಸಿದರೆ ಈ ಕೃಷಿ ಲಾಭದಾಯಕ.  ‘ಬಾಷ್ಪೀಕರಣ’ ಪದ್ಧತಿಯಿಂದ ತೆಗೆದ ಎಣ್ಣೆಯ ಗುಣಮಟ್ಟ ಚೆನ್ನಾಗಿರುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.