ADVERTISEMENT

ಸೀಬೆ ಬೆಳೆಯಿರಿ ಹೀಗೆ...

ಎಣಿಕೆ ಗಳಿಕೆ-10

​ಪ್ರಜಾವಾಣಿ ವಾರ್ತೆ
Published 27 ಜೂನ್ 2016, 19:30 IST
Last Updated 27 ಜೂನ್ 2016, 19:30 IST
ಸೀಬೆ ಬೆಳೆಯಿರಿ ಹೀಗೆ...
ಸೀಬೆ ಬೆಳೆಯಿರಿ ಹೀಗೆ...   

ಸೀಬೆ ಉಷ್ಣವಲಯದ ಸಸ್ಯ. ಇದರಲ್ಲಿ ಸುಮಾರು 100 ಉಪಜಾತಿಗಳಿವೆ. ಇದನ್ನು ಮೆಕ್ಸಿಕೊ, ಮಧ್ಯ ಅಮೆರಿಕ ಮತ್ತು ದಕ್ಷಿಣ ಅಮೆರಿಕದಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ. ಭಾರತದ ಬಹುತೇಕ ಎಲ್ಲಾ ಭಾಗಗಳಿಗೂ ಒಗ್ಗಿಕೊಳ್ಳುವ ಸಾಮರ್ಥ್ಯವನ್ನು ಸೀಬೆ ಗಿಡ ಹೊಂದಿದೆ.

ಸೀಬೆ ಗಿಡ ಚೆನ್ನಾಗಿ ಬೆಳೆಯಲು ಸಾಕಷ್ಟು ಬಿಸಿಲು ಬೀಳಬೇಕು. ಯಾವುದೇ ಹಣ್ಣಿನ ಹೀಚು ಕಂಡಾಗಿನಿಂದಲೇ
10 ದಿನಕ್ಕೊಮ್ಮೆ ಬೇವಿನ ಬೀಜದ ಕಷಾಯವನ್ನು ಗೋಮೂತ್ರದಲ್ಲಿ (ಒಂದು ಲೀಟರ್ ಗೋಮೂತ್ರಕ್ಕೆ 4 ಲೀಟರ್ ನೀರು) ಬೆರೆಸಿ ಸಿಂಪಡಿಸಿ.

ಸೀಬೆ ಗಿಡ ಸಮೃದ್ಧವಾಗಿ ಫಸಲು ನೀಡಲು ಸರಿಯಾದ ತೇವ ಕಾಪಾಡಿಕೊಳ್ಳಿ. ಸಾಧ್ಯವಾದರೆ ಗುಂಡಿಯಲ್ಲಿ 1–2 ಹಿಪ್ಪಲಿ (ಪಿಪ್ಪಲಿ) ಬಳ್ಳಿ ಬೆಳೆಸಿ.

ಸೀಬೆ ಹೀಚುಗಳಿದ್ದಾಗ ಒಂದು ಜಾತಿಯ ಸೊಳ್ಳೆ ಚುಚ್ಚಿ ಅನೇಕ ರಂಧ್ರಗಳನ್ನು ಮಾಡಿ ರಸ ಹೀರುತ್ತವೆ. ಇವು ಒಣಗಿದ ನಂತರ ಕಜ್ಜಿಯಂತೆ ಮಚ್ಚೆಗಳಾಗುತ್ತವೆ. ಹಣ್ಣಿನ ಮೇಲೆ ಹುಳು ಮೊಟ್ಟೆ ಇಟ್ಟು ಅವು ಮರಿಗಳಾಗಿ ಹಣ್ಣಿನಲ್ಲಿ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಬೇವಿನ ಬೀಜದ ಕಷಾಯ ಸಿಂಪಡಿಸಿ.

1ಕೆ.ಜಿ. ಬೇವಿನ ಬೀಜ ಕುಟ್ಟಿ 2 ಲೀಟರ್ ಗಂಜಲದಲ್ಲಿ 2 ದಿನ ನೆನೆಸಿ. ನಂತರ 15 ಲೀಟರ್  ನೀರಿನಲ್ಲಿ ಇದನ್ನು ಕಲೆಸಿ ಬಟ್ಟೆಯಲ್ಲಿ ಶೋಧಿಸಿ. ಇದನ್ನು 15 ದಿನಕ್ಕೊಮ್ಮೆ ಸಿಂಪಡಿಸಿ ಕೀಟಬಾಧೆ ತಪ್ಪಿಸಬಹುದು.

ಕರ್ನಾಟಕದಲ್ಲಿ ಬೆಳೆಯಬಹುದಾದ ತಳಿಗಳು ರೆಡ್ ಸೀಬೆ, ವೈಟ್ ಅಲಹಾಬಾದ್, ಸರ್ದಾರ್, ಸರ್ದಾರ್ ಗೋಲಾ ಮತ್ತು ನವಲೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.