ADVERTISEMENT

‘ರಾಧಾರಮಣ’ ಚಿತ್ರಕಲಾ ಪ್ರದರ್ಶನ

ಕ–ಕಲಾಪ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2013, 19:30 IST
Last Updated 20 ಅಕ್ಟೋಬರ್ 2013, 19:30 IST
‘ರಾಧಾರಮಣ’ ಚಿತ್ರಕಲಾ ಪ್ರದರ್ಶನ
‘ರಾಧಾರಮಣ’ ಚಿತ್ರಕಲಾ ಪ್ರದರ್ಶನ   

ರಿತು ಗುಪ್ತಾ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ‘ರಾಧಾ ರಮಣ’ ನಗರದ ಚಿತ್ರಕಲಾ ಪರಿಷತ್‌ನ ಗ್ಯಾಲರಿಯಲ್ಲಿ ಅ.21ರಿಂದ 26ರವರೆಗೆ ಆಯೋಜಿಸಲಾಗಿದೆ.

ರಾಧಾ ಕೃಷ್ಣರ ವಿವಿಧ ಭಾವ ಭಂಗಿಯ ಚಿತ್ರಗಳು ಪ್ರದರ್ಶನದ ಮುಖ್ಯ ಆಕರ್ಷಣೆಯಾಗಿದೆ. ರಿತು ಅವರ ಕಲಾಕೃತಿಗಳು ಸಾಂಪ್ರದಾಯಿಕ ಕಲೆಯಿಂದ ಪ್ರೇರಣೆ ಪಡೆದಿವೆ. ಈ ನೆಲದ ಸಂಸ್ಕೃತಿಯನ್ನು ಅಳವಡಿಸಿಕೊಂಡು ಸ್ವಂತ ಕಲ್ಪನೆಗೆ ರೂಪ ನೀಡುವುದರಲ್ಲಿ ರಿತು ಆಸಕ್ತರು. ಹಾಗಾಗಿ ರಿತು ಅವರ ಕಲಾಕೃತಿಗಳನ್ನು ಭಾರತದ ಸಂಪ್ರದಾಯಗಳ ಪ್ರತಿಬಿಂಬದಂತಿವೆ.

ಈ ಪ್ರದರ್ಶನದಲ್ಲಿರುವ ರಾಧಾ ರಮಣ ಸರಣಿಯಲ್ಲಿ ರಾಧೆ ಮತ್ತು ಕೃಷ್ಣರ ಪ್ರಣಯ ಪ್ರಸಂಗಗಳನ್ನು ಆಕರ್ಷಕವಾಗಿ ಚಿತ್ರಿಸಲಾಗಿದೆ. ಹುಣ್ಣಿಮೆಯ ಬೆಳಕಿನಲ್ಲಿ ಪ್ರೇಮ ಸಲ್ಲಾಪದಲ್ಲಿ ತೊಡಗಿರುವ ರಾಧಾಕೃಷ್ಣರ ಕಲಾಕೃತಿಗಳು ನೋಡುಗರನ್ನು ಪ್ರೀತಿಯ ಲೋಕಕ್ಕೆ ಕೊಂಡೊಯ್ಯುತ್ತವೆ. ಪ್ರದರ್ಶನ ಬೆಳಿಗ್ಗೆ 11ರಿಂದ ಸಂಜೆ 7.30ರವರೆಗೆ ತೆರೆದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.