ADVERTISEMENT

ಅಪ್ಪ-ಮಗನ ಸಾವು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 19:30 IST
Last Updated 9 ಸೆಪ್ಟೆಂಬರ್ 2017, 19:30 IST
ಅಪ್ಪ-ಮಗನ ಸಾವು
ಅಪ್ಪ-ಮಗನ ಸಾವು   

ಅಪ್ಪ-ಮಗನ ಸಾವು

ಹೂವರ್ ಅಣೆಕಟ್ಟು ನಿರ್ಮಾಣದ ಹಂತದಲ್ಲಿ, 1922ರ ಡಿಸೆಂಬರ್ 22ರಂದು ಜೆ.ಜಿ.ಟಿಯರ್ನಿ ಎಂಬುವರು ಅಕಸ್ಮಾತ್ತಾಗಿ ಕೊಲರಾಡೊ ನದಿಗೆ ಬಿದ್ದು ಮೃತಪಟ್ಟರು. ಸರಿಯಾಗಿ 15 ವರ್ಷಗಳ ನಂತರ ಅದೇ ದಿನ ಅವರ ಮಗ ಪ್ಯಾಟ್ರಿಕ್ ಕೂಡ ನದಿಗೆ ಅಕಸ್ಮಾತ್ತಾಗಿ ಬಿದ್ದು ಸಾವನ್ನಪ್ಪಿದ.

**

ADVERTISEMENT

ಗೂಡು ಸೆಳಕು

ಗಂಡು ಬೋವರ್ ಬರ್ಡ್ ಅತ್ಯಾಕರ್ಷಕ ಗೂಡು ಕಟ್ಟುತ್ತದೆ. ಪ್ಲಾಸ್ಟಿಕ್ ತುಂಡುಗಳಿಂದ ಹಿಡಿದು ಟಿನ್ ಫಾಯಿಲ್ ವರೆಗೆ ಹಲವು ವಸ್ತುಗಳನ್ನು ಅದು ಬಳಸುತ್ತದೆ.  ಅಷ್ಟೆ ಏಕೆ, ಬಸವನಹುಳುವಿನ ಚಿಪ್ಪುಗಳನ್ನೂ ಹೆಕ್ಕಿ ತರುತ್ತದೆ. ಗೂಡು ಎಷ್ಟು ಚೆಂದವೋ ಹೆಣ್ಣು ಹಕ್ಕಿ ಅದನ್ನು ನೋಡಿಯೇ ಹುಡುಕಿ ಬರುತ್ತದೆ ಎಂದು ಅದು ನಂಬಿದೆ. ಸಂಗಾತಿ ತನ್ನ ಗೂಡು ಬಿಟ್ಟು ಪಕ್ಕದ ಹಕ್ಕಿ ಕಟ್ಟಿದ ಗೂಡಿಗೆ ಎಲ್ಲಿ ಹೋಗುವುದೋ ಎಂದು ಆ ಗೂಡನ್ನು ನಾಶಪಡಿಸಲೂ ಈ ಗಂಡು ಹಕ್ಕಿ ಹೇಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.