ADVERTISEMENT

ಇರುವುದಿಷ್ಟೇ ಮಾತು

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 19:30 IST
Last Updated 22 ಜುಲೈ 2017, 19:30 IST
ಇರುವುದಿಷ್ಟೇ ಮಾತು
ಇರುವುದಿಷ್ಟೇ ಮಾತು   

ನಿನ್ನ ಪಾಡಿಗೆ ನೀನು ಹೊರಟುಹೋದ ಮೇಲೆ ಹೆಚ್ಚೆಂದರೆ ನಾನು ಅಲ್ಲೆಲ್ಲೋ ತುಂಬಿದ ರಸ್ತೆಗಳ ನಡುವೆ ನಿಂತು ನಾನಿಲ್ಲಿ ಒಂಟಿ ಎನ್ನುತ್ತ ಸಾಕೆನ್ನುವಷ್ಟೂ ಚೀರಿ ಬರಬಹುದಿತ್ತು

ಬರೆದ ಪದ್ಯಗಳನ್ನು ಒಂದೊಂದಾಗಿ ಹರಿದುಹಾಕುತ್ತ ಈ ಹಿಂದೆ

ಒಳಗಾದ ಪಾಪಕೃತ್ಯಗಳನ್ನು ನಿಧಾನವಾಗಿ ಸಡಿಲಗೊಳಿಸಿಕೊಳ್ಳುತ್ತ ಒಂದಿಷ್ಟು ಹಗುರಾಗಬಹುದಿತ್ತು

ADVERTISEMENT

ವಿಶಾಲವಾದ ಬದುಕನ್ನು ಹಿಂಜಿ ಹೀರಿ ನಲುಗಿಸಿ

ವಿಷಣ್ಣನಾಗಿ ಕ್ರಮೇಣ ಕಿಡಿತಾಕಿದ ಕರ್ಪೂರದಂತೆ ಕರಗಿ ಕಡೆಗೆ ನೆಲಕ್ಕಂಟುವ ಕಪ್ಪುಮಸಿಯಾಗಬಹುದಿತ್ತು

ಹಿಂದೆಂದೋ ನಿನ್ನ ಸ್ನಿಗ್ಧ ಮೊಲೆಗಳ ಮೇಲೆ ಬೆರಳಾಡಿಸಿದ ನನ್ನ ಮೊದಲ ರಸಿಕತನದ ಕಿಡಿಗೇಡಿ ಗಳಿಗೆಯನ್ನು ಮರಳಿ ನೆನೆಯುತ್ತಲೇ ನನ್ನನ್ನು ಶಪಿಸಿಕೊಳ್ಳಬಹುದಿತ್ತು ವಿಮೋಚನೆಗೊಳ್ಳಬಹುದಿತ್ತು.

ಸಂದೀಪ್ ಈಶಾನ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.