ADVERTISEMENT

ಉಲ್ಕೆ ಮಾಡಿದ ಗಾಯ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 19:30 IST
Last Updated 11 ಮಾರ್ಚ್ 2017, 19:30 IST
ಉಲ್ಕೆ ಮಾಡಿದ ಗಾಯ
ಉಲ್ಕೆ ಮಾಡಿದ ಗಾಯ   

ಬಹುತೇಕ ಉಲ್ಕೆಗಳು ಭೂಮಿ ತಲುಪುವ ಮೊದಲೇ ಆವಿಯಾಗಿ ಹೋಗುತ್ತವೆ. ಅಪರೂಪಕ್ಕೆ ಅವು ಭೂಮಿ ತಲುಪಿರುವುದೂ ಉಂಟು. 1994ರ ಜೂನ್ 21ರಂದು ಮ್ಯಾಡ್ರಿಡ್‌ನಲ್ಲಿ ಜೋ ಮಾರ್ಟಿನ್ ಎನ್ನುವವರು ಕಾರು ಓಡಿಸಿಕೊಂಡು ಹೋಗುತ್ತಿದ್ದರು.

ಆಗ ಕಾರಿನ ವಿಂಡ್‌ಷೀಲ್ಡ್‌ಗೆ ಉಲ್ಕೆಯೊಂದು ಅಪ್ಪಳಿಸಿತು. 1.4 ಕೆ.ಜಿ. ತೂಕವಿದ್ದ ಆ ಉಲ್ಕೆ ಗಾಜನ್ನು ಸೀಳಿ, ಒಳನುಗ್ಗಿ ಹಿಂದಿನ ಸೀಟಿನ ಮೇಲೆ ಬಿತ್ತು. ಜೋ ಬೆರಳಿಗೆ ಆಗ ದೊಡ್ಡ ಪೆಟ್ಟಾಗಿತ್ತು.

*

ADVERTISEMENT


ಸುದ್ದಿಯೇ ಇಲ್ಲ
ಈಗ ಮುಖ್ಯವಾದ ಹಾಗೂ ಮುಖ್ಯವಲ್ಲದ ಸುದ್ದಿಗಳು ದಿನದ ಇಪ್ಪತ್ತನಾಲ್ಕು ತಾಸು ಪ್ರಸಾರವಾಗುತ್ತವೆ. 1930ರ ಏಪ್ರಿಲ್ 18ರಂದು ‘ಬಿಬಿಸಿ’ ಸಂಜೆ ಸುದ್ದಿ ಕೇಳಿಸುವಾಗ, ‘ಈ ದಿನ ಯಾವ ’ಸುದ್ದಿಯೂ ಇಲ್ಲ’ ಎಂದು ಪ್ರಕಟಿಸಿತ್ತು. ಸುದ್ದಿ ಕಾರ್ಯಕ್ರಮದ ಸಮಯದಲ್ಲಿ ಪಿಯಾನೊ ಸಂಗೀತ ಕೇಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.