ADVERTISEMENT

ಕಿರು ಬೆರಳ ಹುಡುಗ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 19:30 IST
Last Updated 30 ಡಿಸೆಂಬರ್ 2017, 19:30 IST
ಚಿತ್ರ: ಎಂ.ಎಸ್. ಶ್ರೀಕಂಠಮೂರ್ತಿ
ಚಿತ್ರ: ಎಂ.ಎಸ್. ಶ್ರೀಕಂಠಮೂರ್ತಿ   

ಒಂದು ಹಳ್ಳಿಯಲ್ಲಿ ಗಂಡ ಮತ್ತು ಹೆಂಡತಿ ವಾಸಿಸುತ್ತಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಒಂದು ದಿನ ಹೆಂಡತಿ ಎಲೆಕೋಸನ್ನು ಹೆಚ್ಚುತ್ತಿರುವಾಗ ಅಚಾನಕ್ಕಾಗಿ ತನ್ನ ಬೆರಳನ್ನು ಕತ್ತರಿಸಿಕೊಂಡಳು. ಆಗ ಆ ಬೆರಳು ಪಾತ್ರೆಯ ಹಿಂದೆ ಹೋಯಿತು. ಅವಳಿಗೆ ತುಂಬಾ ನೋವಾಗುತ್ತಿರುವಾಗ ‘ಅಮ್ಮಾ, ನಾನು ನಿನಗೆ ಸಹಾಯ ಮಾಡಬಹುದೇ’ ಎಂಬ ಮಗುವಿನ ಧ್ವನಿಯೊಂದು ಕೇಳಿಬಂತು.

ಮನೆಯಾಕೆ ‘ಯಾರು? ಯಾರದ್ದು ಮಗುವಿನ ಧ್ವನಿ? ನನಗ್ಯಾರೂ ಮಕ್ಕಳಿಲ್ಲವಲ್ಲ’ ಎಂದು ಹೇಳಿದಳು. ಆಗ ‘ನಾನು ನಿನ್ನ ಕತ್ತರಿಸಿದ ಬೆರಳು. ಮಗುವಾಗಿ ಹುಟ್ಟಿದ್ದೇನೆ’ ಎಂದು ಹೇಳಿತು ಆ ಧ್ವನಿ. ತಾಯಿಗೆ ತುಂಬಾ ಆಶ್ಚರ್ಯ ಹಾಗೂ ತುಂಬಾ ಖುಷಿಯಾಯ್ತು. ಈ ವಿಚಾರ ತಿಳಿಸಲು ಅಪ್ಪನ ಹತ್ತಿರ ಇಬ್ಬರೂ ಹೋದರು.

ಅಪ್ಪ ಹೊಲದಲ್ಲಿ ಕೆಲಸ ಮಾಡುತ್ತಿದ್ದ. ಆಗ ಮಗು ಬೆರಳು ‘ಅಪ್ಪ ನಾನು ನಿನಗೆ ಸಹಾಯ ಮಾಡಲೇ’ ಎಂದು ಕೇಳಿತು. ತಂದೆ ಸಹ ‘ಯಾರದು? ನನಗ್ಯಾರೂ ಮಕ್ಕಳಿಲ್ಲವಲ್ಲ’ ಎಂದು ತಾಯಿ ಕೇಳಿದ ಪ್ರಶ್ನೆಯನ್ನೇ ಕೇಳಿದನು. ಆಗ ತಾಯಿ ಅವನಿಗೆ ಎಲ್ಲವನ್ನೂ ವಿವರವಾಗಿ ಹೇಳಿದಳು.

ADVERTISEMENT

ಒಂದು ದಿನ ಬೆರಳು ರಸ್ತೆಯಲ್ಲಿ ಹೋಗುತ್ತಿರುವಾಗ ಒಂದು ಹಸಿದ ತೋಳ ಅದನ್ನು ಗುಳುಂ ಎಂದು ನುಂಗಿತು.

***
ಈ ಕಥೆ ಇಲ್ಲಿಗೇ ಮುಗಿದಿದೆ ಎಂದು ಭಾವಿಸಬೇಡಿ.
ಕಥೆ ಇನ್ನೂ ಇದೆ... ಮುಂದುವರೆಯುತ್ತದೆ...

ಆ ಬೆರಳನ್ನು ತಿಂದರೂ ತೋಳಕ್ಕೆ ಹಸಿವು ನೀಗಲಿಲ್ಲ. ಹಸಿವು ಇನ್ನೂ ಹೆಚ್ಚಾಯಿತು. ಅಲ್ಲಿಯೇ ಕುರಿಗಳ ಮಂದೆಯೊಂದು ರಸ್ತೆ ದಾಟುತ್ತಿದ್ದುದನ್ನು ತೋಳ ನೋಡಿತು. ಮೆಲ್ಲಗೆ ಹೋಗಿ ಇನ್ನೇನು ಕುರಿಯೊಂದನ್ನು ತಿನ್ನಬೇಕು ಎನ್ನುವಷ್ಟರಲ್ಲಿ ‘ಕುರಿಗಳೇ, ಬೇಗ ಓಡಿ, ಈ ತೋಳ ನಿಮ್ಮನ್ನು ತಿನ್ನಬೇಕೆಂದು ಬರುತ್ತಿದೆ’ ಎಂದು ತೋಳದ ಹೊಟ್ಟೆಯೊಳಗಿನಿಂದ ಬೆರಳು ಜೋರಾಗಿ ಕೂಗಿತು.

ಧ್ವನಿ ಕೇಳಿದ ಕುರಿಗಳು ಓಡಿಹೋದವು. ತೋಳಕ್ಕೆ ಕೋಪ ಬಂದು ಅದನ್ನು ಆಚೆ ಹಾಕಿತು. ಆಗ ಬೆರಳು ಖುಷಿಯಾಗಿ ಅಪ್ಪ ಅಮ್ಮನನ್ನು ನೋಡಲು ಮನೆಗೆ ಓಡಿಹೋಯಿತು. ಇಲ್ಲಿಗೆ ಕಥೆ ಮುಗಿಯಿತು.

(ಸ್ನೇಹಾ ಕಪ್ಪಣ್ಣ ಆಯೋಜಿಸಿದ್ದ ‘Katha Corner’ನಲ್ಲಿ ಕೇಳಿದ್ದ ‘The Tiny Boy’ ಎಂಬ ರಷ್ಯನ್ ಕಥೆಯ ಅನುವಾದ)
–ಅಮೃತಾ ಎಸ್.
4ನೇ ತರಗತಿ, ರಮಣಶ್ರೀ ಆಂಗ್ಲ ಶಾಲೆ
ವಿಜಯನಗರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.