ADVERTISEMENT

ಕೆಂಪು ಪಾಂಡಾ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 19:30 IST
Last Updated 28 ಜನವರಿ 2017, 19:30 IST
ಕೆಂಪು ಪಾಂಡಾ
ಕೆಂಪು ಪಾಂಡಾ   

ಕೆಂಪು ಪಾಂಡಾಗಳು ತಮ್ಮ ಪ್ರಭೇದದಲ್ಲೇ ಬದುಕುಳಿದಿರುವ ಅತಿ ಪುರಾತನ ಪ್ರಾಣಿಗಳೆನಿಸಿವೆ. ಅವುಗಳ ಹಿಂದಿನ ಬಂಧುಗಳು ಈಗ ಬದುಕಿಲ್ಲ. ನಲವತ್ತು ಐವತ್ತು ಲಕ್ಷ ವರ್ಷಗಳ ಹಿಂದೆ ಬದುಕಿದ್ದ ‘ಪ್ಯಾರೈಲ್ಯುರಸ್’ ಪಾಂಡಾಗಳನ್ನು ಇವುಗಳ ಹಿಂದಿನ ಕಾಲದವು ಎನ್ನಬಹುದು.

*
ಧ್ರುವ ಪ್ರಭೆ
ಉತ್ತರ ಹಾಗೂ ದಕ್ಷಿಣ ಧ್ರುವಗಳಲ್ಲಿ ಆಗಾಗ ಬೆಳಕಿನ ಪ್ರಭೆ ಮೂಡುತ್ತದೆ. ಆರ್ಕ್ಟಿಕ್‌ ಭಾಗದಲ್ಲಿ ಉತ್ತರ ಪ್ರಭೆ ಮೂಡಿದರೆ, ಅಂಟಾರ್ಟಿಕ್‌ನಲ್ಲಿ ದಕ್ಷಿಣ ಪ್ರಭೆ ಚಿತ್ತಾಪಹರಿಸುತ್ತದೆ. ಆರ್ಕ್ಟಿಕ್‌ ಭಾಗದಲ್ಲೇ ಹೆಚ್ಚು ಸಂದರ್ಭಗಳಲ್ಲಿ ಪ್ರಭೆ ಕಾಣಬಹುದು. ಸೂರ್ಯರಶ್ಮಿಯ ಅಯಾನ್ ಕಣಗಳು ಭೂಮಿಯ ಅಯಸ್ಕಾಂತ ಕ್ಷೇತ್ರಕ್ಕೆ ಸಿಲುಕಿದಾಗ ಈ ರೀತಿ ಬಣ್ಣದ ಪ್ರಭೆ ಉಂಟಾಗುತ್ತದೆ. ಭೂಮಂಡಲದ ಅನಿಲಗಳ ಜತೆಗಿನ ರಾಸಾಯನಿಕ ಕ್ರಿಯೆಯ ಫಲವಿದು. ಭೂಮಿ ರಮಣೀಯ ಎನ್ನುವುದು ಇದಕ್ಕೇ ಇರಬೇಕು.

*
ಚೌಕಾಕಾರದ ಕಲ್ಲಂಗಡಿ
ಕಲ್ಲಂಗಡಿ ಚೌಕಾಕಾರದಲ್ಲಿಯೂ ಬೆಳೆಯುತ್ತವೆ. ಜಪಾನ್‌ನಲ್ಲಿ ಈ ಆಕಾರದ ಕಲ್ಲಂಗಡಿಗಳು ಜನಪ್ರಿಯ. ಹೊತ್ತೊಯ್ಯಲು ಹಾಗೂ ಸಣ್ಣ ರೆಫ್ರಿಜರೇಟರ್‌ನಲ್ಲಿ ಇಡಲು ಇದು ಈ ಆಕಾರದಿಂದ ಅನುಕೂಲ. ವಿಶೇಷ ಚೌಕಾಕಾರದ ಅಚ್ಚಿನಲ್ಲಿ ಈ ಕಲ್ಲಂಗಡಿಗಳನ್ನು ಬೆಳೆಸುತ್ತಾರೆ. ಮಾಮೂಲಿ ಕಲ್ಲಂಗಡಿಗಳಿಗೆ ಹೋಲಿಸಿದರೆ ಇವುಗಳ ಬೆಲೆ ದುಬಾರಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.