ADVERTISEMENT

ಗಜಲ್

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 19:30 IST
Last Updated 11 ಫೆಬ್ರುವರಿ 2017, 19:30 IST
-ಶರೀಫ್ ಹಸಮಕಲ್
 
**
ಭೂಮಿ ಹದಗೂಳ್ಳುವಂತೆ ಮೋಡ ನಾಲ್ಕು ಹನಿ ಸುರಿಯುವುದು ಯಾವುದರ ಸಲುವಾಗಿ
ಏಕಾಂತದಲ್ಲೂ ಗಾಳಿ ಬೆಳಕು ಆ ರಾತ್ರಿಗಳೆಲ್ಲಾ ನಿನ್ನ ನೆನಪಿಸುವುದು ಯಾವುದರ ಸಲುವಾಗಿ
ಬೆಟ್ಟದಷ್ಟಿದ್ದ ದ್ವೇಷ ನೀನು ನಕ್ಕಾಗ ಕರಗಿ ನೀರಾಗುವುದು ಯಾವುದರ ಸಲುವಾಗಿ
ಅವಳು ಕುಂತ ಜಾಗದಲ್ಲಿ ಹೂ ಅರಳಿ ಪರಿಮಳ ಬೀರುವುದು ಯಾವುದರ ಸಲುವಾಗಿ
ಮಾತುಮಾತಿನ ಮಧ್ಯ ದಿಢೀರನೆ ಮೌನ ತಾಳುವುದು ಯಾವುದರ ಸಲುವಾಗಿ
ನೂರು ತುಟಿಗಳಿದ್ದರೂ ನಾನು ಆ ಒಂದು ನಗುವಿಗೆ ಹಂಬಲಿಸುವುದು ಯಾವುದರ ಸಲುವಾಗಿ
ಹಾದಿ ಬೀದಿಯಲಿ ಮುತ್ತುಗಳೆಲ್ಲಾ ಮೈಬಿಚ್ಚಿ ನಿಂತಿರುವುದು ಯಾವುದರ ಸಲುವಾಗಿ
ಕಾಡ ಕಗ್ಗತ್ತಲಲ್ಲಿ ಕಂದೀಲು ಹಚ್ಚಿ ಹೊರಟ ಆ ಹೆಜ್ಜೆಗಳು ಯಾವುದರ ಸಲುವಾಗಿ
ನಾನು ಅತ್ತಾಗ ಬಿದ್ದ ಕಣ್ಣೀರಲ್ಲಿ ಅವಳ ಚಿತ್ರ ಮೂಡುವುದು ಯಾವುದರ ಸಲುವಾಗಿ
ಆಕೆ ಬೇಡವೆಂದರೂ ಶರೀಫ ಗಜಲ್ ಬರೆದು ಹಾಡುವುದು ಯಾವುದರ ಸಲುವಾಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.