ADVERTISEMENT

ಚಿಂತನೆಗೆ ಇಂಬು ಕೊಡುವ ಲೇಖನ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2017, 19:30 IST
Last Updated 26 ಆಗಸ್ಟ್ 2017, 19:30 IST

ಆ. 13ರ ಮುಕ್ತಛಂದದಲ್ಲಿ ಮೂಡಿಬಂದ ಕರಾಚಿಯ ಮಸೂದುನ್ನೀಸಾ ಇವರ ಲೇಖನ (ಭಟ್ಕಳದಿಂದ ಕರಾಚಿಯವರೆಗೆ ಬಹೂಯಾನ) ಓದಿ ಆಶ್ವರ್ಯದ ಜೊತೆ ಸಂತೋಷವೂ ಆಯ್ತು.

ಪಾಕಿಸ್ತಾನವೆಂದರೆ ಅರಾಜಕತೆಯ ನಾಡು, ಭಾರತವನ್ನೂ ಭಾರತೀಯರನ್ನು ದ್ವೇಷಿಸುವ, ಭಯೋತ್ಪಾದಕರನ್ನು ಸಜ್ಜುಗೊಳಿಸುವ ಕಾರ್ಖಾನೆ ಎಂದೆ ತಿಳಿದಿದ್ದ ನನಗೆ, ಅಲ್ಲಿನ ಜನಸಾಮಾನ್ಯರಲ್ಲಿ ಭಾರತದ ಬಗ್ಗೆ, ಭಾರತೀಯರ ಬಗ್ಗೆ, ಪ್ರೀತಿ, ಗೌರವ, ಭಾವನೆ ಇದೆ ಎಂದು ತಿಳಿದು, ನನ್ನ ಅನಿಸಿಕೆ ಪೂರ್ವಾಗ್ರಹ ಪೀಡಿತವೆನಿಸಿತು.

ಸರ್ಕಾರದ ಮಟ್ಟದಲ್ಲಿ ಏನೇ ಇರಲಿ, ಭಾರತವನ್ನು ಪ್ರೀತಿಸುವ, ಸೌಹಾರ್ದವನ್ನು ಬಯಸುವ ಮನಸ್ಸುಗಳು ಅಲ್ಲಿರುವುದನ್ನು ಕಂಡು ಸಂತೋಷವಾಯ್ತು. ನಮ್ಮ ದೇಶದ ಯಾವುದೇ ನಗರಗಳಿಗಿಂತ ಕರಾಚಿ ನಗರ ಭಿನ್ನವಲ್ಲವೆನಿಸಿತು.

ADVERTISEMENT

ಭಾರತದೊಂದಿಗೆ ಕೊಡು ಕೊಳ್ಳುವ ಸಂಬಂಧ, ಅಲ್ಲದೆ ಕರ್ನಾಟಕದ ಕೊಪ್ಪ, ಭಟ್ಕಳದಿಂದ ಮದವೆಯಾಗಿ ಹೋದ ಕನ್ನಡತಿಯರ ಕನ್ನಡ ಕಲರವ ಕೇಳಿ ಆನಂದವಾಯ್ತು.

ಕೆಲವು ತಿಂಗಳ ಹಿಂದೆ ಮಾಜಿ ಸಂಸದೆ, ಚಿತ್ರನಟಿ ರಮ್ಯಾರವರು ‘ಪಾಕಿಸ್ತಾನವೆಂದರೆ ನರಕವಲ್ಲ’ ಎಂದು ಪತ್ರಿಕಾ ಹೇಳಿಕೆ ನೀಡದ್ದು ಇದೆ ಹಿನ್ನೆಲೆಯಲ್ಲಿ ಇರಬೇಕು. ಒಂದಂತೂ ಸ್ಪಷ್ಟವಾಯ್ತು ನೆಲ, ಜಲ, ಗಡಿ ಸಮಸ್ಯೆಗಳು ಅಧಿಕಾರಸ್ತರು, ಪಟ್ಟಭದ್ರರು ಜೀವಂತವಾಗಿಟ್ಟ ಹುನ್ನಾರವೆ ಹೊರತು, ಜನಸಾಮಾನ್ಯರಿಗೆ ಅದು ಬೇಕಿಲ್ಲದ ಸರಕು.
–ಎಸ್‌. ಚೆನ್ನಬಸವ ಶಾಸ್ತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.