ADVERTISEMENT

ಜೀವ ಜಗತ್ತು: ಎಷ್ಟು ಗೊತ್ತು?

ವಿಜ್ಞಾನ ವಿಶೇಷ

ಎನ್.ವಾಸುದೇವ್
Published 14 ಜನವರಿ 2017, 19:30 IST
Last Updated 14 ಜನವರಿ 2017, 19:30 IST
ಜೀವ ಜಗತ್ತು: ಎಷ್ಟು ಗೊತ್ತು?
ಜೀವ ಜಗತ್ತು: ಎಷ್ಟು ಗೊತ್ತು?   
1. ಅತ್ಯುತ್ಕೃಷ್ಟ ಅಡವಿ ವಿಧ ಆಗಿರುವ ‘ವೃಷ್ಟಿವನ’ದ ಒಂದು ದೃಶ್ಯ ಚಿತ್ರ–1ರಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿರುವ ಯಾವ ರಾಷ್ಟ್ರಗಳಲ್ಲಿ ಕಿಂಚಿತ್ತೂ ಇಲ್ಲ?
ಅ. ಭಾರತ ಬ.  ಪೇರು
ಕ. ಕೆನಡ ಡ. ರಷಿಯ
ಇ. ಆಸ್ಟ್ರೇಲಿಯಾ ಈ. ಈಜಿಪ್‌್ಟ
ಉ. ಬ್ರೆಜಿಲ್‌ ಟ. ಕಾಂಗೋ
ಣ. ಮಲೇಶೀಯಾ
 
**
2. ಅಗ್ನಿ ಪರ್ವತಗಳ ಸುತ್ತಮುತ್ತ ಅಗ್ನಿ ಪರ್ವತಗಳಿಂದ ಚಿಮ್ಮುವ ಧೂಳು–ಬೂದಿ ಬೆರೆತ ಮಣ್ಣು ಸಸ್ಯಗಳ ಮತ್ತು ಕೃಷಿ ಬೆಳೆಗಳ ಸಮೃದ್ಧ ಬೆಳವಣಿಗೆಗೆ ತುಂಬ ಪ್ರಶಸ್ತ (ಚಿತ್ರ–2) ಅಗ್ನಿಪರ್ವತಗಳಿಂದ ಒದಗುವ ಯಾವ ಅಂಶ ಅದಕ್ಕೆ–ಕಾರಣ?
ಅ. ಸಾರಜನಕ
ಬ. ತೇವಾಂಶ
ಕ. ಖನಿಜಾಂಶಗಳು
ಡ. ಲವಣಾಂಶಗಳು
 
**
3. ನೀರಿನಲ್ಲಿ, ನದಿ ಅಳಿವೆ ಪ್ರದೇಶಗಳಲ್ಲಿ ಊರುಗೋಲುಗಳಂತಹ ಬೇರುಗಳ ಮೇಲೆ ನಿಂತು, ಹರಡಿ, ಕಡಲಂಚಿನಲ್ಲಿ ಅಡವಿಗಳನ್ನೇ ರೂಪಿಸುವ ವಿಶಿಷ್ಟ ಸಸ್ಯ ಚಿತ್ರ–3ರಲ್ಲಿದೆ.
ಅ. ಈ ಸಸ್ಯದ ಹೆಸರೇನು?
ಬ. ಭಾರತದಲ್ಲಿರುವ ಇದೇ ಸಸ್ಯಗಳ ಅತ್ಯಂತ ಪ್ರಸಿದ್ಧವಾದ ವಿಶ್ವ ಪರಂಪರೆಯ ತಾಣವೂ ಆಗಿರುವ ಅಭಯಾರಣ್ಯ ಯಾವುದು?
 
**
4. ಉನ್ನತವಾಗಿ ತಲೆ ಎತ್ತಿ ನಿಂತಿರುವ ವೃಕ್ಷವೊಂದು ಚಿತ್ರ–4ರಲ್ಲಿದೆ. ಈ ಕೆಳಗೆ ಹೆಸರಿಸಿರುವ ವೃಕ್ಷ ವಿಧಗಳ ಅತಿ ವಿಶಿಷ್ಟ ವಿಶ್ವ ದಾಖಲೆಗಳು ಗೊತ್ತೇ?
ಅ. ಪೈನ್‌ ವೃಕ್ಷ
ಬ. ಸೆಕ್ಟೋಯಾ ಜೈಗಾಂಟಿಯಾ
ಕ. ಸೆಕ್ಟೋಯಾ ಸೂಪರ್‌ವೈರೆನ್‌್ಸ
ಡ. ಆಲದ ಮರ
 
**
5. ಸಸ್ಯ ಸಾಮ್ರಾಜ್ಯದ ಒಂದು ವಿಶೇಷ ವರ್ಗವಾದ ‘ಕಳ್ಳಿಗಿಡ’ಗಳ ಒಂದು ವಿಧ ಚಿತ್ರ–5ರಲ್ಲಿದೆ. ಕಳ್ಳಿಗಿಡಗಳ ಬಗೆಗಿನ ಈ ಹೇಳಿಕೆಗಳಲ್ಲಿ ಯಾವುವು ಸರಿಯಲ್ಲ?
ಅ. ಕಳ್ಳಿಗಿಡ ಮರುಭೂಮಿ ಸಸ್ಯ
ಬ. ಕಳ್ಳಿಗಿಡಗಳಿಗೆ ನೀರಿನ ಅಗತ್ಯವೇ ಇಲ್ಲ
ಕ. ಇವು ಹೂ ಬಿಡುವ ಸಸ್ಯಗಳ ಗುಂಪಿಗೇ ಸೇರಿದೆ.
ಡ. ಈ ಸಸ್ಯಗಳ ಕಾಂಡವೇ ಎಲೆಗಳ ಕಾರ್ಯ ನಿರ್ವಹಿಸುತ್ತದೆ.
ಇ. ನೂರಾರು ವರ್ಷ ಬದುಕಬಲ್ಲ ಕಳ್ಳಿಗಿಡ ಪ್ರಭೇದಗಳೂ ಇವೆ.
ಈ. ಕಳ್ಳಿಗಿಡಗಳು ವಿಷಕರ ಸಸ್ಯಗಳಾಗಿವೆ.
 
**
6. ಮಾನವ ಮೂಲ ಅರಣ್ಯ ನಾಶದ ಒಂದು ದೃಶ್ಯ ಚಿತ್ರ–6ರಲ್ಲಿದೆ. ಅರಣ್ಯ ನಾಶದಿಂದ ಉಂಟಾಗುವ ಗಂಭೀರ ಅಪಾಯಗಳನ್ನು ಈ ಪಟ್ಟಿಯಲ್ಲಿ ಗುರುತಿಸಬಲ್ಲಿರಾ?
ಅ. ಜೀವಿ ಆವಾಸ ನಾಶ
ಬ. ಭೂ ಸವೆಯ–ಮಣ್ಣಿನ ನಷ್ಟ
ಕ. ಮರುಭೂಮಿ ವಿಸ್ತರಣೆ
ಡ. ಮಳೆ ಚಕ್ರದ ಏರುಪೇರು
ಇ. ಭೂ ತಾಪ ಏರಿಕೆ
ಈ. ವಾಯುಮಾಲಿನ್ಯ ಹೆಚ್ಚಳ
ಉ. ಅಂತರ್ಜಲ ಕುಸಿತ
 
**
7. ಸುಪ್ರಸಿದ್ಧ ವನ್ಯಪ್ರಾಣಿ ‘ಜಿರಾಫೆ’ ಚಿತ್ರ–7ರಲ್ಲಿದೆ. ಜಿರಾಫೆಗಳ ಕುಟುಂಬಕ್ಕೇ ಸೇರಿದ, ಜಿರಾಫೆಯ ಏಕೈಕ ಅತ್ಯಂತ ನಿಕಟ ಸಂಬಂಧಿಯಾದ ಪ್ರಾಣಿ ಇವುಗಳಲ್ಲಿ ಯಾವುದು?
ಅ. ವಿಕ್ಯೂನಾ
ಬ. ವೈಲ್ಡ್‌ ಬೀಸ್‌್ಟ
ಕ. ಲಾಮಾ
ಡ. ಒಕಾಪಿ
ಇ. ಗೆಜೆಲ್‌
 
**
8. ಚಿತ್ರ–8ರಲ್ಲಿರುವ  ಖಗಸಂಸಾರವನ್ನು ಗಮನಿಸಿ. ಈ ಹಕ್ಕಿ ಯಾವುದು ಗುರುತಿಸಿ:
ಅ. ಬಿಳಿ ಬಾತು
ಬ. ಹಂಸ
ಕ. ಫೆಮಿಂಗೋ
ಡ. ಈಗ್ರೆಟ್‌
ಇ. ಬಿಳಿಕೊಕ್ಕರೆ
 
**
9. ಆನೆಯ ಅತ್ಯಂತ ಮಹತ್ವದ, ಅತ್ಯುಪಯುಕ್ತವಾದ, ಬಹು ವಿಧ ಸಾಮರ್ಥ್ಯಗಳ ಅಂಗ ಅದರ ಸೊಂಡಿಲು ತಾನೇ? (ಚಿತ್ರ–9). ಆನೆ ಸೊಂಡಿಲು ಸುಮಾರು ಎಷ್ಟು ‘ಸ್ನಾಯು’ಗಳಿಂದ ರಚನೆಗೊಂಡಿದೆ?
ಅ. 10,500
ಬ. 23,000
ಕ. 40,000  
ಡ. 52,000
ಇ. 86,000
 
**
10. ಪ್ರೈಮೇಟ್‌ ವರ್ಗಕ್ಕೆ ಸೇರಿದ, ಎಂದರೆ ಮನುಷ್ಯರ ಹತ್ತಿರದ ಸಂಬಂಧಿಯಾದ ಪ್ರಸಿದ್ಧ ವಾನರ ‘ಗಿಬ್ಬನ್‌’ನ ಒಂದು ಪ್ರಭೇದ ಚಿತ್ರ–10ರಲ್ಲಿದೆ.
ಅ. ಈ ವಾನರದ ನೈಸರ್ಗಿಕ ನೆಲೆ ಯಾವ ಭೂಖಂಡಕ್ಕೆ ಸೀಮಿತ?
ಬ. ಅದೇ ಭೂಖಂಡದಲ್ಲಿರುವ ಮತ್ತೊಂದು ವಾನರ ವಿಧ ಯಾವುದು?
 
**
11. ಹವಳ ಲೋಕದ ಸುಂದರ ಮತ್ಸ್ಯ ಜೋಡಿ ಚಿತ್ತ–11ರಲ್ಲಿದೆ. ಧರೆಯ ಜೀವೇತಿಹಾಸದಲ್ಲಿ ಮತ್ಸ್ಯಗಳು ಅವತರಿಸಿದ ಹಾಗಾಗಿ ‘ಮತ್ಸ್ಯಗಳ ಯುಗ’ ಎಂದೇ ಹೆಸರಾಗಿರುವ ಭೂ ಯುಗ ಯಾವುದು?
ಅ. ಜ್ಯೂರಾಸಿಕ್‌ ಯುಗ
ಬ. ಸೈಲೂರಿಯನ್‌ ಯುಗ
ಕ. ಕ್ರಿಟೇಶಿಯಸ್‌ ಯುಗ
ಡ. ಡಿವೋನಿಯನ್‌ ಯುಗ
 
**
12. ಅಭಾವದ ಕಾಲದಲ್ಲಿ ಕುಟುಂಬದ ಸದಸ್ಯರಿಗೆ ಒದಗಿಸಲೆಂದು ಶರೀರದಲ್ಲೇ ಆಹಾರ ಶೇಖರಿಸಿ ಉಬ್ಬಿದ ಬಲೂನಿನಂತಾಗಿರುವ ವಿಶಿಷ್ಟ ‘ಕೀಟ’ ಚಿತ್ರ–12ರಲ್ಲಿದೆ. ‘ಜೇನು ಕುಡಿಕೆ’ (ಹನೀ ಪಾಟ್‌) ಎಂದೇ ಹೆಸರಾಗಿರುವ ಈ ಕೀಟ ಯಾವ ಗುಂಪಿಗೆ ಸೇರಿದೆ?
ಅ. ಜೇನ್ನೊಣ
ಬ. ಇರುವೆ
ಕ. ಗೆದ್ದಲು
ಡ. ದುಂಬಿ
 
**
13. ‘ಮರಳುಗಾಡಿನ ಹಡಗು’ ಎಂದೇ ಹೆಸರಾಗಿರುವ ಪ್ರಾಣಿ ಒಂಟೆ ಚಿತ್ರ–13ರಲ್ಲಿದೆ. ಈ ಕೆಳಗೆ ಹೆಸರಿಸಿರುವ ಯಾವ ಮರುಭೂಮಿಗಳಲ್ಲಿ ಒಂಟೆಗಳಿವೆ?
ಅ. ಸಹರಾ ಮರುಭೂಮಿ
ಬ. ಕಲಹಾರೀ ಮರುಭೂಮಿ
ಕ. ಅಟಕಾಮಾ ಮರುಭೂಮಿ
ಡ. ಗೋಬಿ ಮರುಭೂಮಿ
ಇ. ಥಾರ್‌ ಮರುಭೂಮಿ
ಈ. ಅರೇಬಿಯನ್‌ ಮರುಭೂಮಿ
ಉ. ನಾಮಿಬ್‌ ಮರುಭೂಮಿ
 
**
14. ಚಿತ್ರ–14ರಲ್ಲಿರುವ, ಮಾರುವೇಷ ಧರಿಸಿರುವ ಪ್ರಾಣಿ ಇವುಗಳಲ್ಲಿ ಯಾವುದು–ಗುರುತಿಸಬಲ್ಲಿರಾ?
ಅ. ಗೋಸುಂಬೆ
ಬ. ಹಸಿರು ಮಿಡತೆ
ಕ. ಎಲೆ ಕೀಟ
ಡ. ಹಸಿರು ಕಪ್ಪೆ.
 
**
ಉತ್ತರಗಳು
1. ಕ,ಡ,ಈ
2. ಕ. ಖನಿಜಾಂಶಗಳು
3. ಅ. ಮ್ಯಾಂಗ್ರೂವ್‌; ಬ. ಸುಂದರಬನ
4. ಅ. ಅತ್ಯಂತ ದೀರ್ಘ ಆಯುಷ್ಯ; 
    ಬ. ಅತ್ಯಧಿಕ ಕಾಂಡದ ಸುತ್ತಳತೆ; 
    ಕ. ಅತ್ಯಧಿಕ ಎತ್ತರ;
    ಡ. ಅತ್ಯಧಿಕ ಚಾವಣೆ ವಿಸ್ತಾರ.
5. ತಪ್ಪು ಹೇಳಿಕೆಗಳು: ‘ಬ ಮತ್ತು ಈ’
6. ಎಲ್ಲವೂ
7. ಡ. ಒಕಾಪಿ
8. ಬ. ಹಂಸ
9. ಕ. 40,000
10. ಅ. ಏಷಿಯ;  ಬ. ಒರಾಂಗೋಟಾನ್‌
11. ಡ. ಡಿವೋನಿಯನ್‌ ಯುಗ
12. ಬ. ಇರುವೆ
13. ಅ,ಡ,ಇ ಮತ್ತು ಈ
14. ಕ. ಎಲೆ ಕೀಟ
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.