ADVERTISEMENT

ಪಿಂಟೊ ಕಾವ್ಯಾನಂದ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2017, 19:30 IST
Last Updated 8 ಏಪ್ರಿಲ್ 2017, 19:30 IST
ಪಿಂಟೊ ಕಾವ್ಯಾನಂದ
ಪಿಂಟೊ ಕಾವ್ಯಾನಂದ   
ಮುಂಬೈನ ಲೇಖಕ, ಕವಿ ಜೆರ್ರಿ ಪಿಂಟೊ ಅವರ ಬರಹಗಳು ಮುಂಜಾನೆ ಪತ್ರಿಕೆ ಓದುವ ಅಭ್ಯಾಸವಿರುವ ಅನೇಕರಿಗೆ ಪರಿಚಿತ. 2016ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ 24 ಸಾಹಿತಿಗಳಲ್ಲಿ ಜೆರ್ರಿ ಕೂಡ ಒಬ್ಬರು.
 
ಪತ್ರಿಕೆಗಳಿಗೆ ಬರಹಗಳನ್ನು ಕಳುಹಿಸುವ ಮೂಲಕ ಅವರು ಲೇಖಕರಾಗಿ ಗುರ್ತಿಸಿಕೊಂಡರು. ಗಣಿತ ಬೋಧನೆ ಅವರ ಹವ್ಯಾಸ. ಟಿ.ವಿ ಸ್ಕ್ರಿಪ್ಟ್‌ಗಳನ್ನೂ ಬರೆದ ಅವರು ಕಾನೂನು ಪದವಿಯನ್ನೂ ಪಡೆದರು.
 
ಪುರುಷರಿಗಾಗಿಯೇ ಇರುವ ಐಷಾರಾಮಿ ಲೈಫ್‌ಸ್ಟೈಲ್‌ ನಿಯತಕಾಲಿಕ ‘ಮ್ಯಾನ್ಸ್ ವರ್ಲ್ಡ್’ನ ಸಂಪಾದಕರಾಗಿ ಕೆಲಸ ಮಾಡಿದರು. ಪತ್ರಿಕೆಗಳಿಗೆ ಹಾಗೂ ನಿಯತಕಾಲಿಕೆಗಳಿಗೆ ಲೇಖನ ಬರೆಯುವುದನ್ನು ಈಗಲೂ ಅವರು ಮುಂದುವರಿಸಿದ್ದಾರೆ. ಲಘು ಹಾಸ್ಯ ಅವರ ಬರಹದ ಸಾಮರ್ಥ್ಯ. 
 
ಹಲವು ಪ್ರಕಾರಗಳ ಪುಸ್ತಕಗಳನ್ನೂ ಪಿಂಟೊ ಬರೆದಿದ್ದಾರೆ. ‘ಸರ್ವೈವಿಂಗ್ ವಿಮೆನ್’ 2000ದಲ್ಲಿ ಪ್ರಕಟಗೊಂಡ ಅವರ ಮೊದಲ ಕೃತಿ. ಭಾರತದ ಮಹಿಳೆಯರು ಅಂದಾಜಿಗೇ ಸಿಗದ ಪುರುಷರ ಜತೆ ಏಗುವ ಪರಿಯನ್ನೇ ವಸ್ತುವಾಗಿಸಿ, ವ್ಯಂಗ್ಯದ ಧಾಟಿಯಲ್ಲಿ ಈ ಪುಸ್ತಕ ಬರೆದಿದ್ದರು.
 
‘ಹೆಲೆನ್: ದಿ ಲೈಫ್ ಅಂಡ್ ಟೈಮ್ಸ್ ಆಫ್ ಎನ್ ಎಚ್-ಬಾಂಬ್’ ಅವರ ಜನಪ್ರಿಯ ಕೃತಿ. ನಟಿ ಹೆಲೆನ್ ಆತ್ಮಕಥೆಯನ್ನು ಒಳಗೊಂಡ ಈ ಕೃತಿಗೆ ಪ್ರಶಸ್ತಿಗಳೂ ಸಂದವು.
 
‘ಎಂ ಅಂಡ್ ದಿ ಬಿಗ್ ಹೂಮ್’ ಅವರಿಗೆ ಹೆಸರು ತಂದುಕೊಂಡ ಕಾದಂಬರಿ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರ ಕುಟುಂಬಗಳ ತಾಕಲಾಟಗಳನ್ನು ಒಳಗೊಂಡ ಲೇಖನಗಳ ಸಂಗ್ರಹ ‘ಎ ಬುಕ್ ಆಫ್ ಲೈಟ್’ ಕಳೆದ ವರ್ಷ ಬಿಡುಗಡೆಯಾಯಿತು. 
 
‘ಅಸಿಲಿಮ್’ ಹಾಗೂ ‘ಕನ್‌ಫ್ರಟಿಂಗ್ ಲವ್’ ಅವರ ಕವನ ಸಂಕಲನಗಳು. ಅನೇಕ ಕಾವ್ಯ ಮಾಲಿಕೆಗಳಲ್ಲಿಯೂ ಅವರ ಕವನಗಳು ಪ್ರಕಟಗೊಂಡಿವೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.