ADVERTISEMENT

ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2014

ಓದುಗರ ವೇದಿಕೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2014, 19:30 IST
Last Updated 28 ಜೂನ್ 2014, 19:30 IST

ಇಮೇಲ್‌ ಜಾನಪದ
ಅನಾಮಿಕನೊಬ್ಬ ಬರೆದ ಹೃದಯ ತಟ್ಟುವ ಪುಟ್ಟಕಥೆ, ಯಾವುದೋ ಸ್ಥಳದಲ್ಲಿ ನಡೆದ ಮನಸ್ಸನ್ನು ಕಲಕುವ ಪ್ರಸಂಗ, ಸಾವಿರ ಕಥೆಗಳನ್ನು

ಹುದುಗಿಸಿಕೊಂಡ ಅದ್ಭುತ ಛಾಯಾಚಿತ್ರ, ನವಿಲುಗರಿಯಂಥ ಕವಿತೆಯ ಸಾಲುಗಳು– ಹೀಗೆ, ಒಬ್ಬರಿಂದ ಇನ್ನೊಬ್ಬರ ಇನ್‌ಬಾಕ್ಸ್‌ಗಳಲ್ಲಿ ಸರಿದಾಡುವ ಇ–ಮೇಲ್‌ಗಳಿಗೆ ಲೆಕ್ಕವಿದೆಯೇ? ನಾಲಿಗೆಗಳ ಮೇಲೆ ಬೆಳೆಯುತ್ತಾ ಹೋಗುವ ಜಾನಪದ ಕಥೆ, ಕವಿತೆಗಳ ಸ್ವರೂಪ ಈ ಇ–ಮೇಲ್‌ಗಳಿಗೂ ಇದೆ. ಇಂಥ ವಿಶಿಷ್ಟ ಬರಹಗಳ ಇ–ಮೇಲ್‌ಗಳು ನಿಮ್ಮ ಇನ್‌ಬಾಕ್ಸ್‌ನಲ್ಲೂ ಇರಬಹುದು. ತಡಮಾಡದೆ ಅವುಗಳನ್ನು ಬರಹಕ್ಕಿಳಿಸಿ, ನಮಗೆ ಕಳಿಸಿಕೊಡಿ.

ಓದಿದ್ದು ಒಂದು, ಆದದ್ದು ಇನ್ನೊಂದು!
ಅನೇಕರ ಓದಿಗೂ ವೃತ್ತಿಗೂ ಸಂಬಂಧವೇ ಇರುವುದಿಲ್ಲ. ನಿರ್ದಿಷ್ಟವಾದ ನೌಕರಿ ಮಾಡಬೇಕೆಂದು ಓದಿದವರು, ನಂತರದಲ್ಲಿ ತಮ್ಮ ಓದಿಗೆ ಸಂಬಂಧಪಡದ ನೌಕರಿಯನ್ನು ಮಾಡುವ ಅನಿವಾರ್ಯತೆ ಎದುರಾಗಬಹುದು. ಇಂಥ ಅನುಭವ ನಿಮ್ಮದೂ ಆಗಿದೆಯೇ? ಓದು–ನೌಕರಿಯ ಈ ವಿರೋಧಾಭಾಸವನ್ನು ನೀವು ಎದುರಿಸಿದ್ದು ಹೇಗೆ?

ಗಮನಿಸಿ
ನಿಮ್ಮ ಬರಹಗಳು ಬ್ಲಾಗ್‌ ಸೇರಿದಂತೆ ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗಿರಬಾರದು. 250 ಪದಗಳನ್ನು ಮೀರದಿರಲಿ. ಬರಹದೊಂದಿಗೆ ಹೆಸರು, ವಿಳಾಸ ಸ್ಪಷ್ಟವಾಗಿ ಬರೆಯಿರಿ. ನುಡಿ / ಬರಹ ತಂತ್ರಾಂಶದಲ್ಲಿ ಬರಹವನ್ನು ಇ–ಮೇಲ್‌ ಕೂಡ ಮಾಡಬಹುದು. ಬರಹಗಳು ತಲುಪಲು ಕೊನೆಯ ದಿನ ಜುಲೈ 15. ವಿಳಾಸ: ಸಂಪಾದಕರು, ದೀಪಾವಳಿ ವಿಶೇಷಾಂಕ, ಪ್ರಜಾವಾಣಿ, ನಂ. 75. ಎಂ.ಜಿ. ರಸ್ತೆ, ಬೆಂಗಳೂರು– 560 001.

ಇ–ಮೇಲ್‌: pvdeep2014@prajavani.co.in

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.