ADVERTISEMENT

ವಿಜ್ಞಾನ ಜಗತ್ತು– ಎಷ್ಟು ಗೊತ್ತು?

ಎನ್.ವಾಸುದೇವ್
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ವಿಜ್ಞಾನ ಜಗತ್ತು–  ಎಷ್ಟು ಗೊತ್ತು?
ವಿಜ್ಞಾನ ಜಗತ್ತು– ಎಷ್ಟು ಗೊತ್ತು?   

1. ಪ್ರಕೃತಿಯಲ್ಲಿ ಪಕ್ಷಿಗಳಿಂದ ಒದಗುತ್ತಿರುವ ಪ್ರಯೋಜನಗಳು ಹಲವಾರು  ಹೌದಲ್ಲ? ಅಂತಹ ಎರಡು ಪ್ರಯೋಜಗಳು ಚಿತ್ರ– 1 ಮತ್ತು ಚಿತ್ರ – 2ರಲ್ಲಿ ಸ್ಪಷ್ಟವಾಗುವಂತಿವೆ. ಆ ಉಪಯೋಗಗಳು ಏನೇನು ಗುರುತಿಸಬಲ್ಲಿರಾ?
ಅ. ಪಿಡುಗಿನ ಕೀಟಗಳ ಸಂಖ್ಯಾ ನಿಯಂತ್ರಣ
ಬ. ಬೀಜ ಪ್ರಸಾರ
ಕ. ಪರಿಸರ ನಿರ್ಮಲೀಕರಣ
ಡ. ಪರಾಗಸ್ಪರ್ಶ
ಇ. ಇತರ ಜೀವಿಗಳಿಗೆ ಆಹಾರ

2. ವಿಶ್ವಪ್ರಸಿದ್ಧ ಪ್ರಾಣಿ ‘ಹುಲಿ’ ಚಿತ್ರ– 3ರಲ್ಲಿದೆ. ಹುಲಿಗಳಲ್ಲಿ ಹಲವು ಉಪಪ್ರಭೇದಗಳಿವೆ; ಅವುಗಳಲ್ಲಿ ಕೆಲವು ಅಳಿದು ಹೋಗಿವೆ ಕೂಡ. ಈ ಕೆಳಗೆ ಹುಲಿಗಳ ಕೆಲ ಉಪಪ್ರಭೇದಗಳನ್ನು ಅವುಗಳ ಒಂದೊಂದು ವೈಶಿಷ್ಟ್ಯಗಳನ್ನೂ ಪಟ್ಟಿ ಮಾಡಿದೆ. ಸರಿ ಹೊಂದಿಸುವುದು ಸಾಧ್ಯವೆ?
1. ರಾಯಲ್ ಬೆಂಗಾಲ್
2. ಸೈಬೀರಿಯನ್ ಹುಲಿಶ
3. ಸುಮಾತ್ರನ್ ಹುಲಿ
4. ಕ್ಯಾಸ್ಪಿಯನ್ ಹುಲಿ

ಅ. ಅಳಿದು ಹೋಗಿರುವ ವಿಧ
ಬ. ಅತ್ಯಂತ ಚಿಕ್ಕ ಗಾತ್ರ
ಕ. ಅತ್ಯಧಿಕ ಸಂಖ್ಯೆ
ಡ. ಅತ್ಯಂತ ದೊಡ್ಡ ಗಾತ್ರ

3. ಸುಪ್ರಸಿದ್ಧ ಪ್ರಾಚೀನ ನಾಗರಿಕತೆಯೊಂದಕ್ಕೆ ಸಂಬಂಧಿಸಿದ ಬಹುಪರಿಚಿತ ನಗರಾವಶೇಷದ ದೃಶ್ಯವೊಂದು
ಚಿತ್ರ– 4ರಲ್ಲಿದೆ.
ಅ. ಈ ಅವಶೇಷ ಯಾವ ಭೂಖಂಡದ ಯಾವ ದೇಶದಲ್ಲಿದೆ?
ಬ. ಈ ನಗರಾವಶೇಷದ ಹೆಸರೇನು?
ಕ. ಇದನ್ನು ನಿರ್ಮಿಸಿದ ‘ನಾಗರಿಕತೆ’ ಯಾವುದು?

4. ಒಂದು ಬೃಹತ್ ಗ್ಯಾಲಕ್ಸಿ; ಅದನ್ನು ಪರಿಭ್ರಮಿಸುತ್ತಿರುವ ಕೆಲವಾರು ಕುಬ್ಜ ಉಪಗ್ರಹ ಗ್ಯಾಲಕ್ಸಿಗಳು – ಈ ದೃಶ್ಯ ಚಿತ್ರ – 5ರಲ್ಲಿದೆ. ನಮ್ಮ ಗ್ಯಾಲಕ್ಸಿಯಾದ ‘ಕ್ಷೀರಪಥ’ ಕ್ಕೂ ಉಪಗ್ರಹ ಗ್ಯಾಲಕ್ಸಿಗಳಿವೆ. ಕೆಳಗೆ ಹೆಸರಿಸಿರುವ ಗ್ಯಾಲಕ್ಸಿಗಳಲ್ಲಿ ಯಾವುವು ಉಪಗ್ರಹ ಗ್ಯಾಲಕ್ಸಿಗಳಾಗಿವೆ ಗೊತ್ತೇ?
ಅ.  ಸಾಂಬ್ರೆರೋ ಗ್ಯಾಲಕ್ಸಿ
ಬ. ಮ್ಯಾಜಲಾನಿಕ್ ಮೋಡಗಳು
ಕ. ಆ್ಯಂಡ್ರೊಮೇಡಾ ಗ್ಯಾಲಕ್ಸಿ
ಡ. ಹರ್ಕ್ಯುಲಿನ್ ಗ್ಯಾಲಕ್ಸಿ
ಇ. ಸಾಜಿಟೇರಿಯಸ್ ಕುಬ್ಞ ಗ್ಯಾಲಕ್ಸಿ

5. ನೀಲವರ್ಣದ ರತ್ನಮಣಿಗಳು ಚಿತ್ರ– 6ರಲ್ಲಿವೆ. ಈ ಕೆಳಗಿನ ಪಟ್ಟಿಯಲ್ಲಿ ಯಾವುವು ರತ್ನಮೂಲ ಖನಿಜಗಳಲ್ಲ?
ಅ. ಟಾಲ್ಕ್  ಉ. ಟೋಪಾಜ್
ಕ. ಗಾರ್ನೆಟ್  ಡ. ಓಪಾಲ್
ಇ. ಮ್ಯಾಲಕೈಟ್  ಈ. ಅಗೇಟ್
ಬ. ಆಂಥ್ರಾಸೈಟ್

6. ಗಿಣಿಗಳ ಒಂದು ಸುಂದರ ಪ್ರಭೇದ ಚಿತ್ರ– 7ರಲ್ಲಿದೆ. ಗಿಣಿಗಳನ್ನು ಕುರಿತ ಈ ಪ್ರಶ್ನೆಗಳಿಗೆ ಉತ್ತರಿಸಬಲ್ಲಿರಾ?
ಅ. ಗಿಣಿಗಳಲ್ಲಿ ಸುಮಾರು ಎಷ್ಟು ವಿಧಗಳಿವೆ?
ಬ. ಅತ್ಯಂತ ದೊಡ್ಡ ಶರೀರದ ಗಿಣಿ ಯಾವುದು?
ಕ. ಹಾರಾಟ ಸಾಮರ್ಥ್ಯ ಇಲ್ಲದ ಗಿಣಿ ಯಾವುದು?

7. ಮಂಗಳ ಗ್ರಹ ಅದರದೇ ಒಂದು ಚಂದ್ರದ ಮೇಲೆ ನಿಂತು ನೋಡಿದಾಗ– ಕಾಣುವ ದೃಶ್ಯ ಚಿತ್ರ–8ರಲ್ಲಿದೆ. ಮಂಗಳ ಗ್ರಹದ ಎರಡೂ ಚಂದ್ರರನ್ನು ಈ ಪಟ್ಟಿಯಲ್ಲಿ ಗುರುತಿಸಿ:
ಅ. ಅಯೋ  ಬ. ಅಯಾಪಿಟಸ್
ಕ. ಫೋಬೋಸ್  ಡ. ಟೈಟಾನ್

ಇ. ಮಿರಾಂಡಾ  ಈ. ಟೈಟಾನ್
ಬ. ಡೀಮಾಸ್  ಟ. ಯೂರೋಪಾ

8. ಚಿತ್ರ–9ರಲ್ಲಿರುವ ವಾಹನವನ್ನು ಗಮನಿಸಿ. ‘ಭೂ ಸೇನೆಯ ಬೆನ್ನೆಲುಬು’ ಎಂದೇ ಪ್ರಸಿದ್ಧವಾಗಿರುವ ಈ ಮಿಲಿಟರಿ ವಾಹನವನ್ನು ಗುರುತಿಸಬಲ್ಲಿರಾ?
ಅ. ಮಾರ್ಟರ್  ಬ. ಟ್ಯಾಂಕ್
ಕ. ಕ್ಷಿಪಣಿ ವಾಹಕ  ಡ. ಹಾವರ್ ಕ್ರಾಫ್ಟ್

9. ಬಿಲಿಯಾಂತರ ವರ್ಷಗಳ ಹಿಂದೆ ನಮ್ಮ ಸೌರವ್ಯೂಹದ್ದೇ ಭೂಮ್ಯೇತರ ಗ್ರಹವೊಂದು ಜಲಭರಿತ ಜೀವಿ ವಿಹಿತ ಪರಿಸರ ಹೊಂದಿದ್ದರ ದೃಶ್ಯ ಚಿತ್ರ– 10ರಲ್ಲಿದೆ. ಪ್ರಸುತ ಇಡೀ ಸೌರವ್ಯೂಹದ ಅತ್ಯಂತ ಬಿಸಿಯ ನರಕ ಸದೃಶ ಪರಿಸರ ಪಡೆದಿರುವ ಆ ಗ್ರಹ ಯಾವುದು?
ಅ. ಮಂಗಳ ಬ. ಬುಧ
ಕ. ಶುಕ್ರ  ಡ. ಗುರು

10. ನಮ್ಮ ಸೌರವ್ಯೂಹದ ಅತ್ಯಂತ ಪ್ರಸಿದ್ಧ ಕುಬ್ಞಗ್ರಹ ಪ್ಲೂಟೋದ ಅಧ್ಯನಕ್ಕೆಂದೇ ತೆರಳಿರುವ ವಿಶೇಷ ವ್ಯೋಮನೌಕೆಯ ಹೆಸರೇನು?
ಅ. ನ್ಯೂ ಹೊರೈಜನ್ಸ್   ಬ. ಮೆಸೆಂಜರ್
ಕ. ಜ್ಯೂನೋ  ಡ. ರೊಸೆಟ್ಟಾ

11. ಅತ್ಯಂತ ಸೋಜಿಗದ, ಸುಧೀರ್ಘವೂ ಆದ ವಲಸೆ ಪಯಣ ಕೈಗೊಳ್ಳುವ ವಿಶ್ವ ಪ್ರಸಿದ್ಧ ಪತರಗಿತ್ತಿ ಪ್ರಭೇದ ಚಿತ್ರ– 12ರಲ್ಲಿದೆ.
ಅ. ಈ ಚಿಟ್ಟೆಯ ಹೆಸರೇನು?
ಬ. ಈ ಚಿಟ್ಟೆಯ ನೈಸರ್ಗಿಕ ನೆಲೆ ಯಾವ ಭೂಖಂಡ?

12. ಪಚ್ಚೆ ಪಚ್ಚೆ ರೂಪದ ವಿವಿಧ ವರ್ಣಾಲಂಕಾರ ಪಡೆದಿರುವ ಬಂಡೆಯೊಂದು ಚಿತ್ರ–13ರಲ್ಲಿದೆ. ಈ ಶಿಲೆಯ ಕೆಂಪು ಬಣ್ಣದ ಪಚ್ಚೆಗಳಿಗೆ ಕಾರಣವಾಗಿರುವ ವಸ್ತು ಯಾವುದು?
ಅ. ಸಿಲಿಕಾನ್ ಡೈ ಆಕ್ಸೈಡ್      ಬ. ಕಬ್ಬಿಣದ ಆಕ್ಸೈಡ್
      ಕ. ಇಂಗಾಲ       ಡ. ಸೋಡಿಯಂ
      ಇ. ಕ್ಯಾಲ್ಸಿಯಂ ಕಾರ್ಬನೇಟ್

13. ವಿಶ್ವಪ್ರಸಿದ್ಧ ಅದ್ಭುತ ಜಲಪತ ‘ಇಗುವಾಜು’ ಚಿತ್ರ– 14ರಲ್ಲಿದೆ. ಇದು ಯಾವ ಭೂಖಂಡದಲ್ಲಿದೆ?
ಅ. ಆಫ್ರಿಕ  ಬ. ಆಸ್ಟ್ರೇಲಿಯಾ
ಕ. ದಕ್ಷಿಣ ಅಮೆರಿಕ  ಡ. ಯೂರೋಪ್

ಉತ್ತರಗಳು

ADVERTISEMENT

1. ಚಿತ್ರ.1.ಡ– ಪರಾಗಸ್ಪರ್ಶ; ಚಿತ್ರ.2 ಬ– ಬೀಜ ಪ್ರಸಾರ
2. 1–ಕ; 2–ಡ, 3–ಬ; 4–ಅ.
3. ಅ– ದಕ್ಷಿಣ ಅಮೆರಿಕ–ಪೆರು; ಬ– ಮಚ್ಚುಪಿಚ್ಚು;
ಕ– ಇಂಕಾ ನಾಗರಿಕತೆ
4. ಬ, ಡ ಮತ್ತು ಇ
5. ಅ ಮತ್ತು ಉ
6. ಆ– ನಾಲ್ಕು ನೂರು; ಬ– ಮಕಾ; ಕ. ಕಕಾಪೋ
7. ಕ ಮತ್ತು ಬ
8. ಬ– ಟ್ಯಾಂಕ್
9. ಕ– ಶುಕ್ರ
10. ಅ. ನ್ಯೂ ಹೊರೆಜನ್ಸ್
11. ಅ. ಮೋನಾರ್ಕ್; ಬ– ಉತ್ತರ ಅಮೆರಿಕ.
12. ಬ. ಕಬ್ಬಿಣದ ಆಕ್ಸೈಡ್
13. ಕ. ದಕ್ಷಿಣ ಅಮೆರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.