ADVERTISEMENT

ವಿಶ್ವದ ಅತಿ ಉದ್ದನೆಯ ರೈಲು ಮಾರ್ಗ

​ಪ್ರಜಾವಾಣಿ ವಾರ್ತೆ
Published 7 ಜನವರಿ 2017, 19:30 IST
Last Updated 7 ಜನವರಿ 2017, 19:30 IST
ವಿಶ್ವದ ಅತಿ ಉದ್ದನೆಯ ರೈಲು ಮಾರ್ಗ
ವಿಶ್ವದ ಅತಿ ಉದ್ದನೆಯ ರೈಲು ಮಾರ್ಗ   

ರಷ್ಯಾದ ‘ಟ್ರಾನ್ಸ್ ಸೈಬೀರಿಯನ್ ರೈಲ್ವೆ’ ವಿಶ್ವದ ಅತ್ಯಂತ ಉದ್ದನೆಯ ರೈಲು ಮಾರ್ಗವಾಗಿದೆ. ಸುಮಾರು ಒಂಬತ್ತು ಸಾವಿರ ಕಿಲೋಮೀಟರ್ ಉದ್ದದ ಈ ಮಾರ್ಗವನ್ನು ಕ್ರಮಿಸಲು ಏಳು ದಿನ ಬೇಕಾಗುತ್ತದೆ.

ಮಾಸ್ಕೊಂದಿಂದ ಆರಂಭವಾಗುವ ಈ ಮಾರ್ಗದ  ಪ್ರಯಾಣ, ಯುರೋಪಿಯನ್ ರಷ್ಯಾ ಮಾರ್ಗವಾಗಿ ಉರಲ್ ಪರ್ವತ ಶ್ರೇಣಿ (ಯುರೋಪ್ ಮತ್ತು ಏಷ್ಯಾವನ್ನು ಪ್ರತ್ಯೇಕಿಸುವ) ದಾಟಿ ಸೈಬೀರಿಯಾ ಮೂಲಕ ಫೆಸಿಪಿಕ್ ಸಾಗರದಂಚಿನಲ್ಲಿರುವ ರಷ್ಯಾದ ಗಡಿಭಾಗದ ಬಂದರು ಪ್ರದೇಶ ವ್ಲಾಡಿವೊಟೊಕ್‌ ಎಂಬಲ್ಲಿ ಅಂತ್ಯಗೊಳ್ಳುತ್ತದೆ. ಪ್ರಯಾಣದ ವೇಳೆ ರಷ್ಯಾದ ಪ್ರಾಕೃತಿಕ ಸೌಂದರ್ಯವನ್ನು ಸವಿಯಬಹುದಾಗಿರುವುದಂದ ಈ ಮಾರ್ಗದಲ್ಲಿ ಪ್ರಯಾಣಿಸಲು ಪ್ರವಾಸಿಗರು ಹೆಚ್ಚು ಇಷ್ಟಪಡುತ್ತಾರೆ.

1891– 1916ರ ಅವಧಿಯಲ್ಲಿ ‘ಟ್ರಾನ್ಸ್ ಸೈಬೀರಿಯನ್ ರೈಲ್ವೆ’ ಮಾರ್ಗವನ್ನು ನಿರ್ಮಿಸಲಾಯಿತು. ಸೈಬೀರಿಯಾದ ಗಡಿಯಂಚಿನ ಭಾಗಗಳ ಅಭಿವೃದ್ಧಿಗೂ ಇದು ನೆರವಾಯಿತು. ಅಲ್ಲದೆ ಚೀನಾ, ಜಪಾನ್ ಹಾಗೂ ಯೂರೋಪ್‌ ದೇಶಗಳಿಗೆ ಸರಕು ಸಾಗಾಟ ಮಾಡುವುದಕ್ಕೂ ಸಹಕಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.