ADVERTISEMENT

ಸಹೃದಯರ ಸ್ಪಂದನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2017, 19:30 IST
Last Updated 8 ಏಪ್ರಿಲ್ 2017, 19:30 IST
ಉಪಯುಕ್ತ ಪ್ರವಾಸಿ ಕಥನಗಳು
ವಿದೇಶ ಪ್ರವಾಸದಲ್ಲಿ ‘ನದಿ ನೋಡಲು ಹೋಗಿ ದಾರಿ ತಪ್ಪಿ’ ಕತ್ತಲಲ್ಲಿ ತಡವರಿಸಿದ ವಿಜಯಾ ಗುರುರಾಜ್ ಮತ್ತು ಅವರ ಸ್ನೇಹಿತೆಯ ಪಡಿಪಾಟಲು (ಏ. 2), ಪ್ರವಾಸಿಗರಿಗೆ ಒಂದು ಹಿತನುಡಿಯಂತಿದೆ.

ಬಿಂಡಿಗನವಿಲೆ ಭಗಾವಾನ್ ಅವರು, ಟೆಕ್ಸಾಸ್ ರಾಜ್ಯದ ಒಂದು ಗವಿಯ ಕುರಿತ ಬರಹಕ್ಕೆ – ‘ಗವಿಯಲ್ಲ ಇದು ಕಲೆಯ ಬಲೆಯು’ ಎಂದು ಆಹ್ವಾನಿಸುವ ನೈಸರ್ಗಿಕ ಚಮತ್ಕಾರವನ್ನು ಅನಾವರಣಗೊಳಿಸುವ ರಮ್ಯತೆ ಇದೆ. ಈ ಬರಹವೂ ಅಮೆರಿಕಕ್ಕೆ ಹೋಗುವವರಿಗೆ ಒಂದು ಉಪಯುಕ್ತ ಟಿಪ್ಪಣಿಯಂತಿದೆ. 
–ಸತ್ಯಬೋಧ, ಬೆಂಗಳೂರು
 
ಕುತೂಹಲಕಾರಿ ಲೇಖನ
ಕಳೆದ ವಾರ (ಏ. 02)ರ ಮುಕ್ತಛಂದ ಪುರವಣಿಯಲ್ಲಿ ಪ್ರಕಟವಾದ ‘ಇದೀಗ ಟ್ರೀ ಟೈಮ್‌!’ ಲೇಖನ ಕುತೂಹಲಕಾರಿಯಾಗಿತ್ತು. ಸುಮನಾ ರಾಯ್‌ ಅವರ ‘ಹೌ ಐ ಬಿಕೇಮ್‌ ಎ ಟ್ರೀ’ ಪುಸ್ತಕವನ್ನು ಪೂರ್ತಿಯಾಗಿ ಓದಲು ಈ ಲೇಖನ ನನ್ನನ್ನು ಪ್ರೇರೇಪಿಸಿದೆ. ಪರಿಣಾಮಕಾರಿಯಾಗಿ ಅನುವಾದಿಸಿದ ನರೇಂದ್ರ ಪೈ ಅಭಿನಂದನಾರ್ಹರು. ಹೆಣ್ಣು ಮತ್ತು ಮರಗಳ ನಡುವಿನ ಸಾದೃಶ್ಯ ನಿಜಕ್ಕೂ ಅಚ್ಚರಿ ಹುಟ್ಟಿಸುವಷ್ಟು ಸೂಕ್ಷ್ಮವಾಗಿ ಲೇಖಕಿ ಗಮನಿಸಿದ್ದಾರೆ.  
–ಗೌರಿ ಸಿದ್ಧಿ, ಶಿರಸಿ
 
ಹೊಸ ಜಗದ ದರ್ಶನ
‘ಮುಕ್ತಛಂದ’ ಪುರವಣಿಯಲ್ಲಿ ಪ್ರಕಟವಾಗುವ ಕೃಪಾಕರ ಸೇನಾನಿ ಅವರ ‘ಅವ್ಯಕ್ತ ಭಾರತ’ ಅಂಕಣವು ಅಕ್ಷರಶಃ ನಾವಿನ್ನೂ ಕಾಣದ ಭಾರತವನ್ನು ನಮ್ಮೆದುರು ತೆರೆದಿಡುತ್ತದೆ. 
 
ಕಳೆದ ವಾರ (ಏಪ್ರಿಲ್ 2) ಪ್ರಕಟವಾದ ‘ಕತ್ತೆ ಎಂಬ ಹರಿಕಾರನ ಕ್ರಾಂತಿ’ ಬರಹವು, ನಾವು ಎಷ್ಟೇ ಮುಂದುವರೆದಿದ್ದೇವೆ ಎಂದುಕೊಂಡಿದ್ದರೂ ಇನ್ನೂ ಒಳಗೊಳಗೇ ಕೆಲಸ ಮಾಡುವ ಜಾತಿ ವ್ಯವಸ್ಥೆಯ ಎಳೆಯನ್ನು ತೀರಾ ಸರಳವಾಗಿ ಬಿಚ್ಚಿಟ್ಟಿದೆ. ಇದು ನನ್ನ ಮೆಚ್ಚಿನ ಅಂಕಣ.
–ವಿಶ್ವಾಸ್, ಶಿಕಾರಿಪುರ
 
ನಿಮ್ಮ ಪ್ರತಿಕ್ರಿಯೆಗಳು ಮತ್ತು ಲೇಖನಗಳನ್ನು ‘ಮುಕ್ತಛಂದ’ಕ್ಕೆ ಕಳುಹಿಸಿಕೊಡಬಹುದು.

ನಮ್ಮ ವಿಳಾಸ:
ಸಂಪಾದಕರು, ಮುಕ್ತಛಂದ ಪುರವಣಿ ವಿಭಾಗ, ಪ್ರಜಾವಾಣಿ, ನಂ.75, ಎಂ.ಜಿ.ರಸ್ತೆ, ಬೆಂಗಳೂರು– 560 001.
ಇ–ಮೇಲ್‌: mukthachanda@prajavani.co.in
ವಾಟ್ಸ್‌ಆ್ಯಪ್ ಸಂಖ್ಯೆ: 9620 250 284

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.