ADVERTISEMENT

ಹೂ ಮತ್ತು ದುಂಬಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2017, 19:30 IST
Last Updated 4 ಫೆಬ್ರುವರಿ 2017, 19:30 IST
ಹೂ ಮತ್ತು ದುಂಬಿ
ಹೂ ಮತ್ತು ದುಂಬಿ   

ಚಂದ್ರೇಗೌಡ ನಾರಮ್ನಳ್ಳಿ

ಚಿಟ್ಟೆ ಚಿಟ್ಟೆ
ಪುಟ್ಟ ಚಿಟ್ಟೆ
ಎಲ್ಲಿಗೆ ನೀನು ಹೊರಟೆ?
ಹೂವಿಂದ ಹೂವಿಗೆ
ಹಾರುತಾ ಹಾಡುತಾ
ಹೀರಲು ಸಿಹಿ ಒರತೆ!

ಚಪ್ಪಾಳೆ ತಟ್ಟಿ
ಕೇಕೆ ಹಾಕಿ
ಗೆಳೆಯರನ್ನೆಲ್ಲಾ ಕರೆವೆ
ಹೇಳು ಒಂದೇ
ಗುಟ್ಟು ನನಗೆ
ಬಣ್ಣವು ಬಂದುದು ಹೇಗೆ?

ಅಮ್ಮನಿಗೊಂದು
ಕಾರಣ ಹೇಳಿ
ನಾನೂ ಜೊತೆಗೆ ಬರುವೆ
ಅಂದ ಚಂದದ
ಹೂಗಳ ನೋಡುತ
ನಿನ್ನ ಹಿಂದೆಯೇ ಅಲೆವೆ
   
ಹೂವು–ದುಂಬಿಯು
ಜೊತೆ ಜೊತೆಯಲಿ
ಮಾಡಿವೆ ಜಗಕೆ ಮೋಡಿ
ಮಕ್ಕಳ ಹೂಮನ
ತಿಳಿಯದ ಹಿರಿಬಗೆ
ಶಾಲೆಗೆ ನಮ್ಮನು ದೂಡಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.