ADVERTISEMENT

ಹೊಸ ತಂತ್ರ

ಮಕ್ಕಳ ಕಥೆ

ಸಂಪಟೂರು ವಿಶ್ವನಾಥ್
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST
ಸಂಪಟೂರು ವಿಶ್ವನಾಥ್‌
ಸಂಪಟೂರು ವಿಶ್ವನಾಥ್‌   
ರಾಜಧಾನಿಯ ಮುಖ್ಯ ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳಿದ್ದವು. ಪ್ರತಿ ವರ್ಷವೂ ಹೊಸ ಪುಸ್ತಕಗಳ ಸೇರ್ಪಡೆಯಿಂದ ಸರಿಯಾಗಿ ಜೋಡಿಸಿ ಇಡಲು ಸ್ಥಳವೇ ಸಾಕಾಗುತ್ತಿರಲಿಲ್ಲ. ಆ ಊರಿಗೆ ವರ್ಗವಾಗಿ ಬಂದ ಗ್ರಂಥಪಾಲಕಿ, ಮುಖ್ಯ ಗ್ರಂಥಪಾಲಕರಿಗೆ ಹೇಳಿದಳು.
 
‘ನಮ್ಮಲ್ಲಿ ತುಂಬಾ ಉಪಯುಕ್ತವಾದ ನೂರಾರು ಹೊತ್ತಗೆಗಳಿವೆ. ಅವುಗಳನ್ನು ಯಾರೂ ಎರವಲು ಪಡೆದದ್ದೇ ಇಲ್ಲ. ಇದಕ್ಕೆ ಏನಾದರೂ ಮಾಡಬೇಕಲ್ಲಾ ಸರ್‌’, ಅಂದಳು ಯುವ ಗ್ರಂಥಪಾಲಕಿ.
 
‘ಏನು ಮಾಡಬಹುದು, ನೀನೇ ಹೇಳಮ್ಮ’ ಅಂದರು ಮುಖ್ಯ ಗ್ರಂಥಪಾಲಕರು.
 
ಯುವ ಗ್ರಂಥಪಾಲಕಿ ಒಂದು ಹೊಸ ತಂತ್ರವನ್ನು ಹೇಳಿದಳು. ಅದನ್ನು ಮಾಡಿದರು. ಮೌಲಿಕ ಪುಸ್ತಕಗಳ ವಿನಿಮಯ ಆರಂಭವಾಯಿತು. ಅವರು ಹೂಡಿದ ಹೊಸ ತಂತ್ರ ಏನು ಗೊತ್ತಾ?
 
ಹಳೆಯ ಪುಸ್ತಕಗಳನ್ನು ದೊಡ್ಡ ಮೇಜಿನ ಮೇಲೆ ಹರಡಿದರು. ಮೇಜಿನ ಅಂಚಿಗೆ ‘ರಿಬ್ಬನ್‌ ಕಟ್ಟಿದರು. ಬಿಳಿಯ ಕಾಗದದ ಮೇಲೆ ಸ್ಪಷ್ಟವಾಗಿ ಕಾಣುವಂತೆ ಹೀಗೆ ಬರೆದರು, ‘ಬುದ್ಧಿವಂತರಿಗೆ ಮಾತ್ರ ಅರ್ಥವಾಗುವ ಪುಸ್ತಕಗಳು. ಸಾಧಾರಣ ಓದುಗರಿಗಲ್ಲ.’
 
ಈ ಶೀರ್ಷಿಕೆ ಅನೇಕ ಓದುಗರನ್ನು ಪ್ರಚೋದಿಸಿತು. ಮೂಲೆ ಗುಂಪಾಗಿದ್ದ ಮೌಲಿಕ ಕೃತಿಗಳು ಪ್ರಚಾರ ಪಡೆದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.