ADVERTISEMENT

ಇಂಗ್ಲಿಷ್ ರಾಜ್ಯದಲ್ಲಿ

ನಿರ್ಮಲಾ ಸುರತ್ಕಲ್
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST
ಇಂಗ್ಲಿಷ್ ರಾಜ್ಯದಲ್ಲಿ
ಇಂಗ್ಲಿಷ್ ರಾಜ್ಯದಲ್ಲಿ   

ಮೂನುಗಳ, ಸನ್ನುಗಳ, ಸ್ಟಾರುಗಳ ರಾಜ್ಯದಲಿ

ಎಲ್ಹೋದ ಚಂದ ಮಾಮ?

ತಾರೆಗಳು, ಸೂರ್ಯ ಮಾಮ?

ADVERTISEMENT

ಸ್ಟಡಿಯ ಸಾಮ್ರಾಜ್ಯದಲ್ಲಿ, ಬುಕ್ಕುಗಳ ರಾಶಿಯಲ್ಲಿ

ಪುಸ್ತಕಗಳೆಲ್ಲಿ ಹೇಳು?

ಹಿಡಿದಿದೆಯೇ ದಪ್ಪ ದೂಳು?

ಸ್ಕೂಲಂತೆ, ಕ್ಲಾಸಂತೆ, ಸರ್, ಮಿಸ್ಸುಗಳಂತೆ

ಎಲ್ಲುಂಟು ನಮ್ಮ ಶಾಲೆ?

ಗುರುಗಳು ಎಲ್ಲಿ ಹೇಳೇ?

ಮಮ್ಮಿಗಳು, ಡ್ಯಾಡಿಗಳು, ಅಂಕಲ್ಲು–ಆಂಟಿಗಳು

ಬೇಕೆಮಗೆ ಅಪ್ಪ ಅಮ್ಮ

ಬರಬೇಕು ಅತ್ತೆ–ಮಾಮ!

ಲವ್ವುಂಟು, ಲೈಕುಂಟು, ‘ಡಿಯರ್’ ಲೇಪನವುಂಟು

ಪ್ರೀತಿಯೇ ಇಲ್ಲವಲ್ಲ?

ಒಳಗಲ್ಲಿ ತಿರುಳಿದೆಯೆ? ಇಲ್ಲವಲ್ಲ?

ಗಾಡ್, ಗಾಡೆಸ್ಸುಗಳ ಪ್ರೇ ಮಾಡು ಟೆಂಪಲಲಿ

ಎಲ್ಲಿಹುದು ದೇವಾಲಯ?

ಒಳಗಲ್ಲಿ ಭಕ್ತಿ ಮಾಯ!

ಮಿಸ್ಟರ್‍ರು, ಮಿಸೆಸ್ಸು, ಬೇಬಿಗಳ ಜಗದಲ್ಲಿ

‘ಮಗು’ ‘ಪಾಪು’ ಎಲ್ಲಿ ಹೋಯ್ತು?

ನಮ್ಮತನ ಇಲ್ಲವಾಯ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.