ADVERTISEMENT

ಆಸ್ಟ್ರೇಲಿಯಾ ಭೇಟಿ: ಭಾರತೀಯ ಪ್ರವಾಸಿಗರ ಸಂಖ್ಯೆ ಹೆಚ್ಚಳ, ಕರ್ನಾಟಕಕ್ಕೆ 3ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 19:29 IST
Last Updated 16 ನವೆಂಬರ್ 2017, 19:29 IST
ಆಸ್ಟ್ರೇಲಿಯಾ ಭೇಟಿ: ಭಾರತೀಯ ಪ್ರವಾಸಿಗರ ಸಂಖ್ಯೆ ಹೆಚ್ಚಳ, ಕರ್ನಾಟಕಕ್ಕೆ 3ನೇ ಸ್ಥಾನ
ಆಸ್ಟ್ರೇಲಿಯಾ ಭೇಟಿ: ಭಾರತೀಯ ಪ್ರವಾಸಿಗರ ಸಂಖ್ಯೆ ಹೆಚ್ಚಳ, ಕರ್ನಾಟಕಕ್ಕೆ 3ನೇ ಸ್ಥಾನ   

ನವದೆಹಲಿ: ಕಾಂಗರೂಗಳ ನಾಡು ಆಸ್ಟ್ರೇಲಿಯಾ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ಭಾರತದ ವಿವಿಧ ರಾಜ್ಯಗಳಿಂದ ಆಸ್ಟ್ರೇಲಿಯಾಗೆ ತೆರಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

2016ರ ಜೂನ್‌ನಿಂದ 2017ರ ಜೂನ್‌ ಅಂತ್ಯಕ್ಕೆ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿರುವ ಭಾರತೀಯರ ಸಂಖ್ಯೆ 2.77 ಲಕ್ಷ ಮೀರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 15ರಷ್ಟು ಬೆಳವಣಿಗೆ ಕಂಡುಬಂದಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಭಾರತವು ಜಾಗತಿಕವಾಗಿ 9ನೇ ಸ್ಥಾನ ಪಡೆದಿದೆ ಎಂದು ಟೂರಿಸಂ ಆಸ್ಟ್ರೇಲಿಯಾ ತಿಳಿಸಿದೆ.

ಭಾರತದ ಪ್ರವಾಸಿಗರಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ  30,000 ಕನ್ನಡಿಗರು ಆಸ್ಟ್ರೇಲಿಯಾದ ವಿವಿಧೆಡೆ ಭೇಟಿ ನೀಡಿದ್ದಾರೆ.

ADVERTISEMENT

ನೈಸರ್ಗಿಕ ತಾಣಗಳು, ಕಡಲ ಕಿನಾರೆಗಳನ್ನು ಇಷ್ಟಪಡುತ್ತಿರುವ ಕನ್ನಡಿಗರು, ಸಾಹಸಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಉತ್ಸಾಹ ತೋರುತ್ತಿದ್ದಾರೆ. ಆಸ್ಟ್ರೇಲಿಯಾಗೆ ಭೇಟಿ ನೀಡುವ ರಾಜ್ಯದ ಪ್ರವಾಸಿಗರ ಸುರಕ್ಷತೆ ಮತ್ತು ಮನರಂಜನೆಗೆ ಆದ್ಯತೆ ನೀಡಲಾಗುತ್ತಿದೆ. ಭಾರತೀಯ ಪ್ರವಾಸಿಗರ ಬಗ್ಗೆ ಸ್ಥಳೀಯರಿಗೆ ಅರಿವು ಮೂಡಿಸಲೂ ಕ್ರಮ ಕೈಗೊಳ್ಳಲಾಗುತ್ತಿದೆ.

‘ಕಲರ್ಸ್‌ ಕನ್ನಡ’ ಚಾನಲ್‌ನಲ್ಲಿ ಪ್ರಸಾರವಾಗುತ್ತಿರುವ ‘ರಾಧಾರಮಣ’ ಧಾರಾವಾಹಿ ತಂಡವೂ ಇತ್ತೀಚೆಗೆ ಪ್ರವಾಸಿ ಮಂಡಳಿಯ ಸಹಕಾರದೊಂದಿಗೆ ಅಲ್ಲಿನ ಪ್ರಮುಖ ನಗರಗಳಿಗೆ ತೆರಳಿ ಚಿತ್ರೀಕರಣ ನಡೆಸಿತ್ತು.

2020ರ ವೇಳೆಗೆ ಆಸ್ಟ್ರೇಲಿಯಾವನ್ನು ಅಭಿವೃದ್ಧಿಪಡಿಸಿ, ವಿಶ್ವದ ಪ್ರಮುಖ ಪ್ರವಾಸಿ ಕೇಂದ್ರವನ್ನಾಗಿಸಲು ಅನೇಕ ಯೋಜನೆ ರೂಪಿಸಲಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ಬಾಲಿವುಡ್‌ ನಟಿ ಪರಿಣಿತಿ ಛೋಪ್ರಾ ಅವರನ್ನು ಟೂರಿಸಂ ಆಸ್ಟ್ರೇಲಿಯಾ ಭಾರತದ ರಾಯಭಾರಿಯನ್ನಾಗಿ ನೇಮಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.