ADVERTISEMENT

ಆ್ಯಪ್‌

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 19:30 IST
Last Updated 3 ಅಕ್ಟೋಬರ್ 2017, 19:30 IST
ಆ್ಯಪ್‌
ಆ್ಯಪ್‌   

ಕ್ಲೌಡ್ ಮ್ಯಾನೇಜ್‌ಮೆಂಟ್‌ಗೆ ಆನ್‌ ಆ್ಯಪ್‌
ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಹಾಗೂ ನವೋದ್ಯಮಗಳನ್ನು ನಡೆಸುವವರಿಗೆ ಕ್ಲೌಡ್ ಮ್ಯಾನೇಜ್‌ಮೆಂಟ್‌ ವ್ಯವಸ್ಥೆ ಕಲ್ಪಿಸುವುದಾಗಿ ಆನ್ ಆ್ಯಪ್ ಕಂಪೆನಿ ತಿಳಿಸಿದೆ. ದತ್ತಾಂಶಗಳ ಸಂಗ್ರಹಕ್ಕಾಗಿ ಆನ್ ಆ್ಯಪ್ ಒಂದು ಅತ್ಯುತ್ತಮ ಕ್ಲೌಡ್ ಮ್ಯಾನೇಜ್‌ಮೆಂಟ್‌ ವ್ಯವಸ್ಥೆಯಾಗಿದೆ. ಬಳಕೆದಾರರು ನೂರಾರು ಟೆರಾಬೈಟ್‌ವರೆಗಿನ ಮಾಹಿತಿ ಅಥವಾ ದತ್ತಾಂಶವನ್ನು ಶೇಖರಿಸಿಟ್ಟುಕೊಳ್ಳಬಹುದು.

ಈ ಆ್ಯಪ್ ವೇದಿಕೆಯ ಮೂಲಕವೇ ಇ-ಮೇಲ್, ಹಣ ವರ್ಗಾವಣೆ, ಚಾಟಿಂಗ್, ವಿಡಿಯೊ ಕಾಲಿಂಗ್, ಶಾಪಿಂಗ್, ಸಾಮಾಜಿಕ ಜಾಲತಾಣಗಳ ಬಳಕೆ, ಟಿಕೆಟ್ ಬುಕ್ಕಿಂಗ್, ಆಹಾರ ಮತ್ತು ಪಾನೀಯ ಬುಕ್ಕಿಂಗ್ ಮತ್ತು ಹಣ ಪಾವತಿ ಮಾಡಬಹುದು. ಇದಕ್ಕಾಗಿ ಬೇರೆ ಬೇರೆ ಆ್ಯಪ್‌ಗಳನ್ನು ಬಳಸುವ ಅವಶ್ಯಕತೆ ಇರುವುದಿಲ್ಲ ಎಂದು ಆನ್ ಆ್ಯಪ್ ಕಂಪೆನಿಯ ಮುಖ್ಯಸ್ಥ ನರೇಂದ್ರ ಶಂಕರ್ ಅವರು ಆನ್ ಆ್ಯಪ್‌ನ ವೈಶಿಷ್ಟ್ಯಗಳನ್ನು ಪಟ್ಟಿ ಮಾಡಿದ್ದಾರೆ.
ಗೂಗಲ್ ಪ್ಲೇಸ್ಟೋರ್: onapp

ಮಾಹಿತಿ ಗೌಪ್ಯತೆಯ ಆ್ಯಪ್…
ಇಂದಿನ ಸ್ಮಾರ್ಟ್‌ಫೋನ್‌ ಯುಗದಲ್ಲಿ ಎಲ್ಲರೂ ತಮ್ಮ ಖಾಸಗಿ ಮಾಹಿತಿಯನ್ನು ಸ್ಮಾರ್ಟ್‌ಫೋನ್‌ನಲ್ಲಿ ಇಟ್ಟುಕೊಂಡಿರುತ್ತಾರೆ. ಫೋನ್‌ ಪಾಸ್‌ವರ್ಡ್‌ ನೀಡಿದ್ದರೂ ಕೆಲವರು ಅದನ್ನು ಹ್ಯಾಕ್ ಮಾಡಿ ಮಾಹಿತಿ ಕದಿಯುತ್ತಾರೆ. ಖಾಸಗಿ ಮಾಹಿತಿ ಸೋರಿಕೆಯಾಗದಂತೆ ಹಾಗೂ ಕದಿಯುವುದನ್ನು ತಪ್ಪಿಸುವ ಸಲುವಾಗಿ ಅಮೆರಿಕದ ಸಾಫ್ಟ್‌ವೇರ್‌ ತಂತ್ರಜ್ಞರು ಖಾಸಗಿ ಮಾಹಿತಿ ಗೌಪ್ಯತೆಯ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಈ ಆ್ಯಪ್‌ಗೆ ಸ್ಲೀಪ್ ಮಾನಿಟರಿಂಗ್ ಆ್ಯಪ್ ಎಂದು ಹೆಸರಿಡಲಾಗಿದೆ. ಅಮೆರಿಕದ ಕಾರ್ನೆಜ್ ಮೆಲ್ಲನ್ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಜಾಸನ್ ಹಾಗ್ ಅವರ ನೇತೃತ್ವದ ತಂಡ ಈ ಆ್ಯಪ್ ಅಭಿವೃದ್ಧಿಪಡಿಸಿದೆ.

ADVERTISEMENT

ಬಳಕೆದಾರರು ಈ ಆ್ಯಪ್ ಅನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಬಳಕೆ ಮಾಡಬಹುದು. ಮೊಬೈಲ್ ನಲ್ಲಿ ಈ ಆ್ಯಪ್ ಇದ್ದರೆ ಸಾಕು, ಬಳಕೆದಾರನ ಮಾಹಿತಿ ಮೂರನೇ ವ್ಯಕ್ತಿಗೆ ಸೋರಿಕೆಯಾಗುವುದಿಲ್ಲ ಎಂದು ಜಾಸನ್ ಹಾಗ್ ಹೇಳುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಆ್ಯಪ್ ಮಾರುಕಟ್ಟೆ ಪ್ರವೇಶಿಸಲಿದೆ. ತದನಂತರವೇ ಅದರ ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆ ತಿಳಿಯಬಹುದು.
ಗೂಗಲ್ ಪ್ಲೇಸ್ಟೋರ್: sleep monitoring

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.