ADVERTISEMENT

ಇ–ಕಾಮರ್ಸ್‌ ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2016, 19:30 IST
Last Updated 18 ಅಕ್ಟೋಬರ್ 2016, 19:30 IST
ಇ–ಕಾಮರ್ಸ್‌ ಖರೀದಿ ಜೋರು
ಇ–ಕಾಮರ್ಸ್‌ ಖರೀದಿ ಜೋರು   

ದೇಶದಲ್ಲಿ ಇ–ಕಾಮರ್ಸ್‌ ಮಾರುಕಟ್ಟೆ ನಿಧಾನಗತಿಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. 2017ರ ಹೊತ್ತಿಗೆ  ದೇಶದ ಡಿಜಿಟಲ್‌ ಕಾಮರ್ಸ್‌ ಮಾರುಕಟ್ಟೆ ₹8.44 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು  ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಮತ್ತು ಡೆಲಾಯ್ಟ್‌ ಕಂಪೆನಿ ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ.

ಹಬ್ಬದ ಸಂದರ್ಭವನ್ನೂ ಒಳಗೊಂಡು ಸದ್ಯ, ಅಮೆರಿಕ ಮೂಲದ ಅಮೆಜಾನ್‌ ಮತ್ತು  ಬೆಂಗಳೂರಿನ ಫ್ಲಿಪ್‌ಕಾರ್ಟ್‌, ದೆಹಲಿ ಮೂಲದ ಸ್ನ್ಯಾಪ್‌ಡೀಲ್‌ ಕಂಪೆನಿಗಳ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಿದೆ.

ಮುಂಚೂಣಿಯಲ್ಲಿ ಫ್ಲಿಪ್‌ಕಾರ್ಟ್‌
ಇ–ಕಾಮರ್ಸ್‌ ವಹಿವಾಟಿನಲ್ಲಿ 2019ರವರೆಗೂ ಫ್ಲಿಪ್‌ಕಾರ್ಟ್‌ ಅತಿ ದೊಡ್ಡ ಆನ್‌ಲೈನ್‌ ಕಂಪೆನಿಯಾಗಿ ಮುಂದುವರಿಯಲಿದೆ ಎಂದು ಬ್ಯಾಂಕ್‌ ಆಪ್‌ ಅಮೆರಿಕದ ಇತ್ತೀಚಿನ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.