ADVERTISEMENT

ಇನ್ಫೊಸಿಸ್‌ಗೆ ರಿತಿಕಾ ಸೂರಿ ರಾಜೀನಾಮೆ

ಪಿಟಿಐ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST
ಇನ್ಫೊಸಿಸ್‌ಗೆ ರಿತಿಕಾ  ಸೂರಿ ರಾಜೀನಾಮೆ
ಇನ್ಫೊಸಿಸ್‌ಗೆ ರಿತಿಕಾ ಸೂರಿ ರಾಜೀನಾಮೆ   

ನವದೆಹಲಿ:  ಸಾಫ್ಟ್‌ವೇರ್‌ ದೈತ್ಯ ಸಂಸ್ಥೆ ಇನ್ಫೊಸಿಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ  ರಿತಿಕಾ ಸೂರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೆ ಕಾರಣ ನೀಡಲಾಗಿಲ್ಲ. ಇಸ್ರೇಲ್‌ನ ತಂತ್ರಜ್ಞಾನ ಸಂಸ್ಥೆ ಪನಯಾದ ವಿವಾದಾತ್ಮಕ ಸ್ವಾಧೀನ ಪ್ರಕ್ರಿಯೆಯಲ್ಲಿ ಇವರು  ಮುಂಚೂಣಿಯಲ್ಲಿದ್ದರು.

ಈ ಸಂಸ್ಥೆ ಖರೀದಿಸಲು ಇನ್ಫೊಸಿಸ್‌ ಅಗತ್ಯಕ್ಕಿಂತ ಹೆಚ್ಚು ಹಣ ಪಾವತಿಸಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಆರೋಪಗಳ ಕುರಿತು ಆಂತರಿಕ ತನಿಖೆ ನಡೆಸಲು ಇನ್ಫೊಸಿಸ್‌, ಗಿಬ್ಸನ್‌ ಡನ್‌ ಆ್ಯಂಡ್‌ ಕಂಟ್ರೋಲ್‌ ರಿಸ್ಕ್ಸ್‌ (ಜಿಡಿಸಿಆರ್‌) ಸಂಸ್ಥೆಯನ್ನು  ನೇಮಿಸಿತ್ತು.

ಈ ಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಸ್ವಾಧೀನ ಪ್ರಕ್ರಿಯೆಯಲ್ಲಿ ಹಿತಾಸಕ್ತಿ ಸಂಘರ್ಷ ಅಥವಾ ಲಂಚ ಪಾವತಿಸಲಾಗಿಲ್ಲ ಎಂದು ಸಂಸ್ಥೆಯು ವರದಿ ನೀಡಿತ್ತು. ಎಸ್‌ಎಪಿ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕಿಯಾಗಿದ್ದ ಸೂರಿ ಅವರನ್ನು ಇನ್ಫೊಸಿಸ್‌ ಸಿಇಒ ವಿಶಾಲ್ ಸಿಕ್ಕಾ ಅವರು ಸಂಸ್ಥೆಗೆ ಕರೆತಂದಿದ್ದರು.

ADVERTISEMENT

ಸ್ಟಾರ್ಟ್‌ಅಪ್‌ಗಳಲ್ಲಿ ಬಂಡವಾಳ ತೊಡಗಿಸುವ ಉದ್ದೇಶಕ್ಕೆ ₹ 3,250 ಕೋಟಿಗಳ ನಿಧಿ ಸ್ಥಾಪಿಸಲು ಇವರು ಸಂಸ್ಥೆಗೆ ನೆರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.