ADVERTISEMENT

ಇನ್ಫೊಸಿಸ್‌ ಲಾಭ ರೂ. 2,886 ಕೋಟಿ

ತ್ರೈಮಾಸಿಕ ಪ್ರಗತಿ ಶೇ 21.6; ಸಿಬ್ಬಂದಿ ನಿರ್ಗಮನ ಶೇ 19.5ಕ್ಕೇರಿಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2014, 19:30 IST
Last Updated 11 ಜುಲೈ 2014, 19:30 IST
ಇನ್ಫೊಸಿಸ್‌ ಲಾಭ ರೂ. 2,886 ಕೋಟಿ
ಇನ್ಫೊಸಿಸ್‌ ಲಾಭ ರೂ. 2,886 ಕೋಟಿ   

ಬೆಂಗಳೂರು(ಪಿಟಿಐ): ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪೆನಿ ‘ಇನ್ಫೊಸಿಸ್‌’ ಪ್ರಸಕ್ತ ಹಣಕಾಸು ವರ್ಷದ 1ನೇ ತ್ರೈಮಾಸಿಕದಲ್ಲಿ ರೂ. 2,886 ಕೋಟಿ ನಿವ್ವಳ ಲಾಭ ಗಳಿಕೆ ಯೊಂದಿಗೆ ಶೇ 21.6ರಷ್ಟು ಉತ್ತಮ ಪ್ರಗತಿ ದಾಖಲಿಸಿದೆ. 2013; 14ನೇ ಹಣಕಾಸು ವರ್ಷದ ಇದೇ ಅವಧಿ ಯಲ್ಲಿ ಕಂಪೆನಿ ರೂ. 2,374 ಕೋಟಿ ಲಾಭ ಗಳಿಸಿತ್ತು.

ಕಂಪೆನಿಯ ಸಭಾಂಗಣದಲ್ಲಿ ಶುಕ್ರ ವಾರ ಸುದ್ದಿಗೋಷ್ಠಿ ನಡೆಸಿದ ಇನ್ಫೊ ಸಿಸ್‌ನ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಶಿಬುಲಾಲ್‌, ಯೂರೋಪ್‌ ವಲಯದಲ್ಲಿನ ಚಟುವಟಿಕೆಗಳಲ್ಲಿ ಹೆಚ್ಚಳವಾಗಿದ್ದರಿಂದ ಹಾಗೂ ಕಂಪೆನಿಯ ಕಾರ್ಯನಿರ್ವಹಣಾ ಸಾಮರ್ಥ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಈ ಏಪ್ರಿಲ್‌, ಜೂನ್‌ ಅವಧಿಯಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದರು.

ವರಮಾನ ಶೇ 13 ವೃದ್ಧಿ
ಮೂರು ತಿಂಗಳಲ್ಲಿ ಕಂಪೆನಿಯ ವರಮಾನ ರೂ. 11,267 ಕೋಟಿಯಿಂದ ರೂ. 12,770 ಕೋಟಿಗೆ ಹೆಚ್ಚಿದೆ. ವರಮಾನದಲ್ಲಿ ವರ್ಷದಿಂದ ವರ್ಷಕ್ಕೆ ಶೇ 13.3ರಷ್ಟು ಪ್ರಗತಿಯಾಗಿದೆ ಎಂದು  ಸಂತಸ ವ್ಯಕ್ತಪಡಿಸಿದರು. ಉತ್ತಮ ಫಲಿತಾಂಶದ ಕಾರಣ ದಿಂದಾಗಿ ಕಂಪೆನಿ ಷೇರು ಮೌಲ್ಯ ಶುಕ್ರವಾರದ ಷೇರು ಪೇಟೆ ವಹಿವಾಟಿನಲ್ಲಿ ಶೇ 1ರಷ್ಟು ಹೆಚ್ಚಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 7ರಿಂದ 9ರಷ್ಟು ವರಮಾನ ಗಳಿಕೆ  ಆಗಲಿದೆ ಎಂಬ ವಿಶ್ವಾಸವನ್ನೂ ಇನ್ಫೊ ಸಿಸ್‌ ವ್ಯಕ್ತಪಡಿಸಿದೆ. ಆದರೆ, ಇದು ‘ನಾಸ್ಕಾಂ’ ಅಂದಾಜು ಮಾಡಿರುವ ಶೇ 13ರಿಂದ 15ರಷ್ಟು ಪ್ರಮಾಣದ ಐಟಿ ಉದ್ಯಮದ ಪ್ರಗತಿ ದರಕ್ಕಿಂತ ಬಹಳ ಕಡಿಮೆಯೇ ಇದೆ ಎಂಬುದು ಗಮನಾರ್ಹ.

ಸದ್ಯದಲ್ಲೇ ಕಂಪೆನಿಯಿಂದ ನಿರ್ಗಮಿ ಸಲಿರುವ ಶಿಬುಲಾಲ್‌, ತಮ್ಮ ಅಧಿ ಕಾರವಧಿಯ ಕಡೆಯ ತ್ರೈಮಾಸಿಕ ಫಲಿತಾಂಶ ಕುರಿತು ವಿವರ ನೀಡಿದರು.

ನಿಯೋಜಿತ ‘ಸಿಇಒ’ ವಿಶಾಲ್ ಸಿಕ್ಕಾ ಅವರನ್ನು ವರ್ಷಗಳಿಂದಲೂ ಬಲ್ಲೆ. ಅವರು ಉತ್ತಮ ತಂಡ ಕಟ್ಟಿ ಮುನ್ನಡೆ ಸುವಂತಹ ಅನುಭವಿ ಎಂದು ಶಿಬುಲಾಲ್‌ ಪ್ರಶಂಸಿಸಿದರು.

ಸಿಬ್ಬಂದಿ ನಿರ್ಗಮನ ‘ದಾಖಲೆ’!
ಏಪ್ರಿಲ್‌, ಮೇ, ಜೂನ್‌ನಲ್ಲಿ  ಹಿಂದೆಂದೂ ಕಾಣದಷ್ಟು ಗರಿಷ್ಠ ಪ್ರಮಾಣದಲ್ಲಿ ನೌಕರರು ಇನ್ಫೊಸಿಸ್‌ ನಿಂದ ನಿರ್ಗಮಿಸಿದ್ದಾರೆ. ಹಿಂದಿನ ಹಣ ಕಾಸು ವರ್ಷದ 1ನೇ ತ್ರೈಮಾಸಿಕದಲ್ಲಿ ಶೇ 16.9ರಷ್ಟಿದ್ದ ಸಿಬ್ಬಂದಿ ನಿರ್ಗಮನ ಪ್ರಮಾಣ, ಈ ಬಾರಿ ಶೇ 19.5ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ‘ಸಿಒಒ’ ಪ್ರವೀಣ್‌ ರಾವ್‌, ‘ನಿಜಕ್ಕೂ ಈ ಬೆಳವಣಿಗೆ ಕಳವಳಕಾರಿ. ಪ್ರತಿಭಾ ವಂತ ನೌಕರರನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.