ADVERTISEMENT

ಇಳಿಮುಖ ಹಾದಿಯಲ್ಲಿ ಚಿನ್ನ

​ಪ್ರಜಾವಾಣಿ ವಾರ್ತೆ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ಮುಂಬೈ/ನವದೆಹಲಿ(ಪಿಟಿಐ):  ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆಗೆ ಅಂಜಿದ ದೇಶದ ಪ್ರಮುಖ ಚಿನಿವಾರ ಪೇಟೆಗಳಲ್ಲಿನ ಚಿನ್ನ-ಬೆಳ್ಳಿ ಸಂಗ್ರಹಕಾರರು ತಮ್ಮಲ್ಲಿದ್ದ ಸರಕಿನ ಬಹುಭಾಗವನ್ನು ಮಾರಾಟ ಮಾಡಲು ಮುಂದಾಗುತ್ತಿರುವುದರಿಂದ ಎರಡೂ ಲೋಹಗಳ ಧಾರಣೆ ಸತತ ಎಂಟು ವಹಿವಾಟುಗಳಿಂದಲೂ ಇಳಿಮುಖ ಹಾದಿಯಲ್ಲಿಯೇ ಸಾಗಿದೆ.

ಬುಧವಾರದ ವಹಿವಾಟಿನಲ್ಲಿ 10 ಗ್ರಾಂ ಚಿನ್ನ ಮುಂಬೈನಲ್ಲಿ ₨105ರಷ್ಟು ತಗ್ಗಿದರೆ, ನವದೆಹಲಿಯಲ್ಲಿ ₨100ರಷ್ಟು ಕಡಿಮೆ ಆಯಿತು. ಸಿದ್ಧ ಬೆಳ್ಳಿಯೂ   ಮುಂಬೈನಲ್ಲಿ ₨150 ಮತ್ತು ದೆಹಲಿಯಲ್ಲಿ ₨50ರಷ್ಟು ಕಡಿಮೆ ಆಯಿತು. ಮುಂಬೈ ಧಾರಣೆ: 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ₨26,945ರಲ್ಲೂ, ಅಪರಂಜಿ ಚಿನ್ನ ₨27,095ರಲ್ಲೂ ವಹಿವಾಟು ನಡೆಸಿತು. ಬೆಳ್ಳಿ ಕೆ.ಜಿ.ಗೆ ₨38,850ರಂತೆ ಮಾರಾಟವಾಯಿತು.

ನವದೆಹಲಿ ಧಾರಣೆ: ಸ್ಟ್ಯಾಂಡರ್ಡ್ ಚಿನ್ನ ₨27,200, ಅಪರಂಜಿ  ₨27,350ಕ್ಕೂ ಇಳಿಯಿತು. ಕೆ.ಜಿ. ಬೆಳ್ಳಿ ₨38,800ರ ಲೆಕ್ಕದಲ್ಲಿ ಮಾರಾಟವಾಯಿತು.

2 ವಾರದ ಕನಿಷ್ಠ ದರ
ಲಂಡನ್‌ ವರದಿ:
ಅಮೆರಿಕದ ಕೇಂದ್ರ ಬ್ಯಾಂಕ್‌ ಬಡ್ಡಿದರದಲ್ಲಿ ಏರಿಕೆ ಮಾಡಲಿದೆ ಎಂಬ ಸುದ್ದಿಯು ಪರಿಣಾಮ ಅಂತರರಾಷ್ಟ್ರೀಯ ಚಿನಿವಾರ ಪೇಟೆ ಮೇಲೆ ಪರಿಣಾಮ ಬೀರಿದೆ. ಇದು ಬುಧವಾರದ ವಹಿವಾಟಿನಲ್ಲಿ ಚಿನ್ನದ ಧಾರಣೆ ಕಳೆದ ಎರಡು ವಾರಗಳ ಕನಿಷ್ಠ ಮಟ್ಟಕ್ಕೆ ಇಳಿಯುವಂತೆ ಮಾಡಿತು.

ಲಂಡನ್‌ ಚಿನಿವಾರಪೇಟೆಯಲ್ಲಿ ಔನ್ಸ್ ಚಿನ್ನ 1,184.37 ಅಮೆರಿಕನ್‌ ಡಾಲರ್‌ ಮಟ್ಟಕ್ಕಿಳಿಯಿತು. ಇದು ಮೇ 12ರ ನಂತರದ ಕನಿಷ್ಠ ಧಾರಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.