ADVERTISEMENT

ಇ–ಕಾಮರ್ಸ್‌ ವಿಮಾ ಪಾಲಿಸಿಗೆ ಹೇರಳ ಅವಕಾಶ

​ಪ್ರಜಾವಾಣಿ ವಾರ್ತೆ
Published 24 ಜುಲೈ 2016, 19:30 IST
Last Updated 24 ಜುಲೈ 2016, 19:30 IST

ನವದೆಹಲಿ (ಪಿಟಿಐ): ಇ–ಕಾಮರ್ಸ್‌ ಮೂಲಕ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುವುದು ಗ್ರಾಹಕರು ಸೇರಿದಂತೆ ಕಂಪೆನಿಗಳಿಗೂ ಲಾಭದಾಯಕವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇ–ಕಾಮರ್ಸ್‌ ವೇದಿಕೆಯ ಮೂಲಕ  ವಿಮಾ ಪಾಲಿಸಿಗಳ ಪರಿಣಾಮಕಾರಿ ಮಾರಾಟ ಮತ್ತು ಪಾರದರ್ಶಕತೆ ಕುರಿತು ಕಳೆದ ತಿಂಗಳು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ  (ಐಆರ್‌ಡಿಎಐ) ಮಾರ್ಗಸೂಚಿಗಳನ್ನು ನೀಡಿದೆ.

ಇ–ಕಾಮರ್ಸ್‌ ಮೂಲಕ ವಿಮಾ ಪಾಲಿಸಿ ಮಾರಾಟ ಕಡಿಮೆ ವೆಚ್ಚದಾಯಕವಾಗಿದ್ದು ಗ್ರಾಹಕರು ಮತ್ತು ವಿಮಾ ಕಂಪೆನಿಗಳ ನಡುವೆ ನೇರ ಸಂಪರ್ಕ ಕಲ್ಪಿಸುತ್ತದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.