ADVERTISEMENT

ಇ–ಕಾಮರ್ಸ್ ಮಾರುಕಟ್ಟೆ 2015ಕ್ಕೆ ₨3.7 ಲಕ್ಷ ಕೋಟಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 19:30 IST
Last Updated 24 ಅಕ್ಟೋಬರ್ 2014, 19:30 IST

ನವದೆಹಲಿ(ಪಿಟಿಐ): ಏಷ್ಯಾ ಪೆಸಿಫಿಕ್‌ ವಲಯದಲ್ಲಿ ಭಾರತದ ಇ–ಕಾಮರ್ಸ್‌ ಮಾರುಕಟ್ಟೆ ಅತಿ ವೇಗದಲ್ಲಿ ಬೆಳೆಯು ತ್ತಿದ್ದು, 2015ಕ್ಕೆ ₨3.70 ಲಕ್ಷ ಕೋಟಿ ತಲುಪುವ ಸಾಧ್ಯತೆ ಇದೆ.

ಭಾರತದಲ್ಲಿ ‘ಡಿಜಿಟಲ್‌ ಕಾಮರ್ಸ್‌’ ಇನ್ನೂ ಆರಂಭದ ಹಂತದಲ್ಲಿದೆ­ಯಾ ದರೂ ಅತಿ ವೇಗವಾಗಿ ವೃದ್ಧಿ  ಕಾಣುತ್ತಿದೆ ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆ ಗಾರ್ಟ್‌ನರ್‌ನ ಸಂಶೋಧನಾ ನಿರ್ದೇಶಕ ಪ್ರವೀಣ್‌ ಸೆಣಗಾರ್‌ ಹೇಳಿದ್ದಾರೆ. ಸದ್ಯ ದೇಶದ ಇ–ಕಾಮರ್ಸ್‌ ಮಾರು ಕಟ್ಟೆ ಗಾತ್ರ ₨2.13
ಲಕ್ಷ ಕೋಟಿಯ ಷ್ಟಿದೆ. ವರ್ಷಕ್ಕೆ ಶೇ 60–70ರ ಪ್ರಮಾಣದಲ್ಲಿ ವೃದ್ಧಿಸುತ್ತಿದೆ. ಹೀಗಿದ್ದರೂ ಇದು ಒಟ್ಟಾರೆ ಚಿಲ್ಲರೆ ಮಾರುಕಟ್ಟೆಯ ಶೇ 4ರಷ್ಟು ಮಾತ್ರವೇ ಇದೆ ಎಂದು ಅವರು ತಿಳಿಸಿದ್ದಾರೆ.

ಮೊಬೈಲ್ ಕಾಮರ್ಸ್‌ ಮೂಲಕ ಷಾಪಿಂಗ್‌ ಹೆಚ್ಚುತ್ತಿದೆ. ಹೀಗಾಗಿ ಗ್ರಾಹಕ ಬಳಕೆ ವಸ್ತುಗಳು, ಆಹಾರ ಮತ್ತು ಪಾನೀಯ ಕಂಪೆನಿಗಳು ಮೊಬೈಲ್‌ ಕಾಮರ್ಸ್‌ ಮೇಲೆ ಹೂಡಿಕೆ ಮಾಡಲು ಆರಂಭಿಸಿವೆ. ಒಟ್ಟಾರೆ ಡಿಜಿಟಲ್‌ ಕಾಮರ್ಸ್‌ ವಹಿವಾಟಿನಲ್ಲಿ ಶೇ 5ರಷ್ಟು ಮಾತ್ರ ಮೊಬೈಲ್‌ ಮೂಲಕ ವಹಿವಾಟು       ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.