ADVERTISEMENT

ಈರುಳ್ಳಿ ರಫ್ತು ಶೇ 7 ಇಳಿಕೆ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST
ಈರುಳ್ಳಿ ರಫ್ತು ಶೇ 7 ಇಳಿಕೆ
ಈರುಳ್ಳಿ ರಫ್ತು ಶೇ 7 ಇಳಿಕೆ   

ನವದೆಹಲಿ (ಪಿಟಿಐ): ಈರುಳ್ಳಿ ರಫ್ತು ವಹಿವಾಟು 2015–16ನೇ ಸಾಲಿನ ಏಪ್ರಿಲ್‌–ಜನವರಿ ಅವಧಿಯಲ್ಲಿ 8.88 ಲಕ್ಷ ಟನ್‌ಗಳಿಂದ 8.28 ಲಕ್ಷ ಟನ್‌ಗಳಿಗೆ (ಶೇ 6.75ರಷ್ಟು ) ಇಳಿಕೆಯಾಗಿದೆ.

ಮೌಲ್ಯದ ಲೆಕ್ಕದಲ್ಲಿ ರಫ್ತು ವಹಿವಾಟು ₹1,598 ಕೋಟಿಗಳಿಂದ ₹2,162 ಕೋಟಿಗಳಿಗೆ ಶೇ 35ರಷ್ಟು ಏರಿಕೆಯಾಗಿದೆ ಎಂದು ‘ನಾಫೆಡ್‌’ ಮಾಹಿತಿ ನೀಡಿದೆ.

ಕನಿಷ್ಠ ರಫ್ತು ದರವನ್ನು (ಎಂಇಪಿ)  ಜೂನ್‌ನಲ್ಲಿ 425   ಡಾಲರ್‌ಗಳಿಗೆ ಮತ್ತು ಆಗಸ್ಟ್‌ನಲ್ಲಿ 700 ಡಾಲರ್‌ಗಳಿಗೆ ಏರಿಕೆ ಮಾಡಲಾಗಿದೆ. ಇದರಿಂದ ರಫ್ತು ತಗ್ಗಿದೆ. ಅಕಾಲಿಕ ಮತ್ತು ಆಲಿಕಲ್ಲು ಮಳೆಯಿಂದ ದೇಶಿ ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ತಗ್ಗಿತ್ತು. ಹೀಗಾಗಿ ರಫ್ತು ನಿಯಂತ್ರಿಸಲು ಕನಿಷ್ಠ ರಫ್ತು ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.

ನವದೆಹಲಿಯಲ್ಲಿ ಚಿಲ್ಲರೆ ಮಾರಾಟ ದರ ಕೆ.ಜಿಗೆ ₹20 ರಿಂದ ₹25ರಷ್ಟಿದೆ.

ಮಹಾರಾಷ್ಟ್ರ, ಕರ್ನಾಟಕ ಮತ್ತು ಮಧ್ಯಪ್ರದೇಶ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.