ADVERTISEMENT

ಎಚ್‌ಎಎಲ್‌ಗೆ ₹17,900 ಕೋಟಿ ವರಮಾನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 19:23 IST
Last Updated 14 ಜುಲೈ 2017, 19:23 IST
ಎಚ್‌ಎಎಲ್‌  ವ್ಯವಸ್ಥಾಪಕ ನಿರ್ದೇಶಕ ಟಿ. ಸುವರ್ಣರಾಜು ಮತ್ತು  ರಕ್ಷಣಾ ಇಲಾಖೆ ಕಾರ್ಯದರ್ಶಿ ಅಶೋಕ್‌ ಗುಪ್ತಾ  ಒಪ್ಪಂದ ಪತ್ರಕ್ಕೆ ಸಹಿ ಮಾಡಿದರು.
ಎಚ್‌ಎಎಲ್‌ ವ್ಯವಸ್ಥಾಪಕ ನಿರ್ದೇಶಕ ಟಿ. ಸುವರ್ಣರಾಜು ಮತ್ತು ರಕ್ಷಣಾ ಇಲಾಖೆ ಕಾರ್ಯದರ್ಶಿ ಅಶೋಕ್‌ ಗುಪ್ತಾ ಒಪ್ಪಂದ ಪತ್ರಕ್ಕೆ ಸಹಿ ಮಾಡಿದರು.   

ಬೆಂಗಳೂರು: ಸೇನಾ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಆಧುನಿಕರಣಕ್ಕೆ ಸಂಬಂಧಿಸಿದಂತೆ ಹಿಂದೂಸ್ತಾನ್‌ ಏರೋನಾಟಿಕಲ್‌ ಲಿಮಿಟೆಡ್‌ (ಎಚ್‌ಎಎಲ್‌) ಮತ್ತು ರಕ್ಷಣಾ ಇಲಾಖೆ ನಡುವೆ ಒಪ್ಪಂದ ಆಗಿದೆ.‘ಈ

ಒಪ್ಪಂದದಿಂದ ಎಚ್‌ಎಎಲ್‌ಗೆ 2017–18 ರ ಸಾಲಿನಲ್ಲಿ ₹ 17,900 ಕೋಟಿ ವರಮಾನ ಬರಲಿದೆ’ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಟಿ. ಸುವರ್ಣರಾಜು ತಿಳಿಸಿದ್ದಾರೆ.

‘ರಕ್ಷಣಾ ಇಲಾಖೆ ಇಷ್ಟು ದೊಡ್ಡ ಮೊತ್ತದ ಒಪ್ಪಂದ ಮಾಡಿಕೊಂಡಿರುವುದು ಇದೇ ಮೊದಲು. ಕಂಪೆನಿಯು ₹ 1300 ಕೋಟಿಯನ್ನು ಆಧುನೀಕರಣ, ಸೌರ ವಿದ್ಯುತ್‌ ಘಟಕಗಳನ್ನು ಅಳವಡಿಸಲು ಬಳಸಲಿದೆ.

ADVERTISEMENT

‘ಭಾರತದಲ್ಲಿಯೇ ತಯಾರಿಸಿ ಯೋಜನೆಯಡಿ ಎಚ್‌ಟಿಟಿ–40 ತರಬೇತಿ ಹೆಲಿಕಾಪ್ಟರ್‌, ಎಲ್‌ಸಿಎಚ್‌ ಮತ್ತು ಎಲ್‌ಯುಎಚ್‌ ಹೆಲಿಕಾಪ್ಟರ್‌ಗಳು,ಡಿಒ–20 ನಾಗರಿಕ ಬಳಕೆಯ ವಿಮಾನ, ಜಾಗ್ವಾರ್‌ ಡಾರಿನ್‌–3, ಮಿರಾಜ್‌ 2000 ಯುದ್ಧ ವಿಮಾನಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.