ADVERTISEMENT

ಎಲ್‌ಪಿಜಿ ಕೊಳವೆ ಮಾರ್ಗ ಪೂರ್ಣ

ಮಂಗಳೂರಿನಿಂದ ಬೆಂಗಳೂರುವರೆಗೆ 358 ಕಿ.ಮೀ ಉದ್ದದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2017, 19:30 IST
Last Updated 15 ಜನವರಿ 2017, 19:30 IST
ಮಂಗಳೂರು – ಬೆಂಗಳೂರು ಎಲ್‌ಪಿಜಿ ಕೊಳವೆ ಮಾರ್ಗ ಅಳವಡಿಕೆ ನೋಟ
ಮಂಗಳೂರು – ಬೆಂಗಳೂರು ಎಲ್‌ಪಿಜಿ ಕೊಳವೆ ಮಾರ್ಗ ಅಳವಡಿಕೆ ನೋಟ   

ಬೆಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಅಡುಗೆ ಅನಿಲ (ಎಲ್‌ಪಿಜಿ) ಪೂರೈಸುವ ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿಯನ್ನು ಏಸ್‌ ಪೈಪ್‌ಲೈನ್‌ ಕಾಂಟ್ರ್ಯಾಕ್ಟ್‌ ಪ್ರೈವೇಟ್‌ ಲಿಮಿಟೆಡ್‌ ಪೂರ್ಣಗೊಳಿಸಿದೆ.

ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್ನಿನ  (ಎಚ್‌ಪಿಸಿಎಲ್‌)  ಈ ಯೋಜನೆಯಡಿ 358 ಕಿ.ಮೀಗಳಷ್ಟು  ಉದ್ದ ಕೊಳವೆಗಳನ್ನು ಅಳವಡಿಸುವ ಕಾಮಗಾರಿಯ ವೆಚ್ಚ
₹ 838 ಕೋಟಿಗಳಷ್ಟಿದೆ.

‘ತೈಲ ಹಾಗೂ ಅನಿಲ ಉದ್ದಿಮೆಯ ಪಾಲಿಗೆ ಇದೊಂದು ವಿಶಿಷ್ಟ ಯೋಜನೆಯಾಗಿತ್ತು. ಪಶ್ಚಿಮ ಘಟ್ಟ, ರಬ್ಬರ್‌ ಮತ್ತು ಕಾಫಿ ತೋಟಗಳ ಮೂಲಕ ಹಾದು ಹೋಗಿರುವ ಈ ಕೊಳವೆ ಮಾರ್ಗ ಅಳವಡಿಕೆಯು ಸವಾಲಿನ ಕೆಲಸವಾಗಿತ್ತು.  ದಾಖಲೆ ಅವಧಿಯಲ್ಲಿ ಇದನ್ನು ಪೂರ್ಣಗೊಳಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಎಲ್‌ಪಿಜಿ ಪೂರೈಕೆಯು ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುವ ಸೌಲಭ್ಯ ಅಳವಡಿಸಲಾಗಿದೆ’ ಎಂದು ಏಸ್‌ ಪೈಪ್‌ಲೈನ್‌ನ ವ್ಯವಸ್ಥಾಪಕ ನಿರ್ದೇಶಕ ಅನೂಪ್‌ ಸಿಂಗ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಇರುವ ಎಲ್‌ಪಿಜಿ ವಿತರಣಾ ಕೇಂದ್ರದಿಂದ ಪ್ರತಿ ಗಂಟೆಗೆ ಪೂರೈಸುವ ಎಲ್‌ಪಿಜಿಯು 9 ಟ್ಯಾಂಕರ್‌ಗಳಿಗೆ ಸಮನಾಗಿದೆ. ಇದರಿಂದ ಹೆದ್ದಾರಿಯಲ್ಲಿ  ಎಲ್‌ಪಿಜಿ ಟ್ಯಾಂಕರ್‌ಗಳ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.