ADVERTISEMENT

ಎಸ್‌ಬಿಐನಿಂದ ಗ್ರಾಮ ದತ್ತು

​ಪ್ರಜಾವಾಣಿ ವಾರ್ತೆ
Published 22 ಜುಲೈ 2014, 19:30 IST
Last Updated 22 ಜುಲೈ 2014, 19:30 IST

ರಾಯಚೂರು : ಭಾರತೀಯ ಸ್ಟೇಟ್‌ ಬ್ಯಾಂಕ್‌  ಗ್ರಾಮ ದತ್ತು ಯೋಜನೆ ಯಡಿ ಮಾನ್ವಿ ತಾಲ್ಲೂಕಿನ ಚಿಕ್ಕಕೊಟ್ನೇಕಲ್‌ ಗ್ರಾಮ­ವನ್ನು  ದತ್ತು ತೆಗೆದುಕೊಂಡಿದೆ.

ಹೊಸ ಬೇಸಾಯ ಪದ್ಧತಿ, ಡೈರಿ ಅಭಿವೃದ್ಧಿ ಮೂಲಕ ಗ್ರಾಮೀಣ ಅಭಿವೃದ್ಧಿಗೆ ರೈತರಿಗೆ ಸೂಕ್ತ ಮಾರ್ಗದರ್ಶನ ಮತ್ತು ಹಣಕಾಸಿನ ನೆರವು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಹಯೋಗದಿಂದ ಬಿ.ಟಿ ಹತ್ತಿ ಬೆಳೆಯ ಕುರಿತು ರೈತರಿಗೆ ಮಾಹಿತಿ ನೀಡುವ ಸಲವಾಗಿ ಕಾರ್ಯಕ್ರಮ   ಆಯೋಜಿಸಲು ಕೂಡ ನಿರ್ಧರಿಸ ಲಾಗಿದೆ ಎಂದು ಎಸ್‌ಬಿಐನ ಉಪ ವ್ಯವಸ್ಥಾಪಕ ನಿರ್ದೇಶಕ  ಅಶ್ವಿನಿ ಮೆಹ್ರಾ ಅವರು ತಿಳಿಸಿದ್ದಾರೆ.ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಾಗನಗೌಡರ್‌ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.