ನವದೆಹಲಿ : ದೇಶದ ಪ್ರಮುಖ ಕಂಪೆನಿಗಳು ಪ್ರಕಟಿಸಲಿರುವ ತ್ರೈಮಾಸಿಕ ಹಣಕಾಸು ಸಾಧನೆಯು ಈ ವಾರ ಷೇರುಪೇಟೆಯ ಭವಿಷ್ಯ ನಿರ್ಧರಿಸಲಿದೆ. ಈ ವಾರ ಎಚ್ಡಿಎಫ್ಸಿ ಬ್ಯಾಂಕ್, ಎನ್ಟಿಪಿಸಿ, ಐಟಿಸಿ, ಮಾರುತಿ ಸುಜುಕಿಯಂತಹ ಪ್ರಮುಖ ಕಂಪೆನಿಗಳು ತಮ್ಮ ಎರಡನೇ ತ್ರೈಮಾಸಿಕ (ಜುಲೈ–ಸೆಪ್ಟೆಂಬರ್) ಅವಧಿಯ ಹಣಕಾಸು ವಹಿವಾಟಿನ ಫಲಿತಾಂಶ ಪ್ರಕಟಿಸಲಿವೆ.
ಹೀಗಾಗಿ ಈ ವಾರ ಷೇರುಪೇಟೆ ವಿವಿಧ ಕಂಪೆನಿಗಳ ತ್ರೈಮಾಸಿಕ ಫಲಿತಾಂಶದ ಮೇಲೆ ಅವಲಂಬಿತವಾಗಿರಲಿದ್ದು ಹೆಚ್ಚು ಏರಿಳಿತ ಕಾಣುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಅದಾನಿ ಪವರ್, ಆ್ಯಕ್ಸಿಸ್ ಬ್ಯಾಂಕ್, ಐಡಿಯಾ ಸೆಲ್ಯುಲರ್, ಏಷಿಯನ್ ಪೇಂಟ್ಸ್, ರಿಲಯನ್ಸ್ ಕ್ಯಾಪಿಟಲ್, ಭಾರ್ತಿ ಏರ್ಟೆಲ್, ಡಾ.ರೆಡ್ಡೀಸ್ ಲ್ಯಾಬ್, ಹೀರೊ ಮೋಟೊ ಕಾರ್ಪ್, ಹಿಂದೂಸ್ತಾನ್ ಲೀವರ್ ಲಿಮಿಡೆಟ್ (ಎಚ್ಯುಎಲ್) ಐಒಸಿ, ಒಎನ್ಜಿಸಿ ಕೂಡ ಆರ್ಥಿಕ ಸಾಧನೆ ಮಂಡಿಸಲಿವೆ.
ಈ ಸಂಗತಿ ಹೊರತುಪಡಿಸಿದರೆ ವಿದೇಶಿ ಹೂಡಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ, ನವೆಂಬರ್ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ವಿದ್ಯಮಾನಗಳು ಮಾರುಕಟ್ಟೆ ಏರಿಳಿತಕ್ಕೆ ಕಾರಣವಾಗಲಿವೆ ಎಂದು ಅಂದಾಜಿಸಲಾಗಿದೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.