ADVERTISEMENT

ಕಂಪೆನಿಗಳ ಮಾರುಕಟ್ಟೆ ಮೌಲ್ಯ ಏರಿಕೆ

8 ಕಂಪೆನಿಗೆ ರೂ. 55,171 ಕೋಟಿ ಗಳಿಕೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 19:30 IST
Last Updated 22 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ): ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ಪ್ರಮುಖ 10 ಕಂಪೆನಿಗಳಲ್ಲಿ ಎಂಟು ಕಂಪೆನಿಗಳು ಕಳೆದ ವಾರ ತಮ್ಮ ಮಾರುಕಟ್ಟೆ ಮೌಲ್ಯವನ್ನು ಒಟ್ಟಾರೆ ರೂ. 55,171 ಕೋಟಿಗಳಷ್ಟು ಹೆಚ್ಚಿಸಿಕೊಂಡಿವೆ.

ಟಿಸಿಎಸ್‌, ಒಎನ್‌ಜಿಸಿ, ಆರ್‌ಐಎಲ್‌, ಕೋಲ್‌ ಇಂಡಿಯಾ, ಎಚ್‌ಡಿಎಫ್‌ಸಿ, ಸಿಐಎಲ್‌, ಐಸಿಐಸಿಐ ಬ್ಯಾಂಕ್‌ ಮತ್ತು ಇನ್ಫೊಸಿಸ್‌ ಷೇರು ಮೌಲ್ಯ ಏರಿಕೆ ಆಗಿದೆ.

ಇನ್ನೊಂದೆಡೆ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಮತ್ತು ಐಟಿಸಿ ಮಾತ್ರ ಮಾರುಕಟ್ಟೆ ಮೌಲ್ಯವನ್ನು ಸಾಕಷ್ಟು ಕಳೆದುಕೊಂಡಿವೆ.
ಸಾಫ್ಟ್‌ವೇರ್‌ ಸೇವೆಗಳನ್ನು ರಫ್ತು ಮಾಡುವ ದೇಶದ ಅತಿದೊಡ್ಡ ಕಂಪೆನಿ ‘ಟಿಸಿಎಸ್‌’ ಮಾರುಕಟ್ಟೆ ಮೌಲ್ಯ ರೂ. 10,430 ಕೋಟಿಯಷ್ಟು ಏರಿಕೆ ಆಗಿದ್ದು, ಒಟ್ಟು ಮೌಲ್ಯ ರೂ. 4,91,435 ಕೋಟಿಗೆ ತಲುಪಿದೆ. ಡಿ. 12ರ ಅಂತ್ಯಕ್ಕೆ ಟಿಸಿಎಸ್‌ ರೂ. 24,043­ ಕೋಟಿಗಳಷ್ಟು ಮೌಲ್ಯ ಕಳೆದುಕೊಂಡಿದ್ದರಿಂದ ಒಟ್ಟು ಮೌಲ್ಯ ರೂ. 4,81,004 ­ಕೋಟಿಗೆ ತಗ್ಗಿತ್ತು.

ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ಅತಿ ಹೆಚ್ಚಿನ ಗಳಿಕೆ ಕಂಡುಕೊಂಡಿದೆ. ಇದರ  ಮಾರುಕಟ್ಟೆ ಮೌಲ್ಯ ರೂ. 10,566 ಕೋಟಿಯಷ್ಟು ಹೆಚ್ಚಿದ್ದು, ಒಟ್ಟು ಮೌಲ್ಯ ರೂ. 2,98,843 ಕೋಟಿಗೆ ಏರಿಕೆ ಆಗಿದೆ.

ಡಿ.12ರ ವಾರಾಂತ್ಯಕ್ಕೆ ಒಟ್ಟಾರೆ ಒಎನ್‌ಜಿಸಿ ಮಾರುಕಟ್ಟೆ ಮೌಲ್ಯ ರೂ. 2,88,277­ ಕೋಟಿಯಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT