ADVERTISEMENT

ಕಾಫಿ ಉತ್ಪಾದನೆ ಇಳಿಕೆ ಸಂಭವ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 19:30 IST
Last Updated 4 ಡಿಸೆಂಬರ್ 2016, 19:30 IST
ಕಾಫಿ ಉತ್ಪಾದನೆ ಇಳಿಕೆ ಸಂಭವ
ಕಾಫಿ ಉತ್ಪಾದನೆ ಇಳಿಕೆ ಸಂಭವ   

ನವದೆಹಲಿ : ಭಾರತದ ಕಾಫಿ ಉತ್ಪಾದನೆ ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ಶೇ 12 ರಷ್ಟು ಇಳಿಕೆ ಕಾಣಲಿದ್ದು, ಒಟ್ಟಾರೆ 51 ಲಕ್ಷ ಬ್ಯಾಗ್‌ (1 ಬ್ಯಾಗ್‌ನಲ್ಲಿ 60 ಕೆ.ಜಿ ಇರುತ್ತದೆ) ಉತ್ಪಾದನೆಯಾಗುವ ಅಂದಾಜು ಮಾಡಲಾಗಿದೆ. ಕಳೆದ ಮಾರುಕಟ್ಟೆ ವರ್ಷದಲ್ಲಿ (ಅಕ್ಟೋಬರ್‌–ಸೆಪ್ಟೆಂಬರ್ ಅವಧಿ) 58 ಲಕ್ಷ ಬ್ಯಾಗ್‌ಗಳಷ್ಟು ಉತ್ಪಾದನೆ ಆಗಿತ್ತು.

ಅತಿ ಹೆಚ್ಚು ಕಾಫಿ ಉತ್ಪಾದನೆ ಆಗುವ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಒಣ ಹವೆಯ ಪ್ರಭಾವದಿಂದ ಇಳುವರಿ ತಗ್ಗಿದೆ. ಹೀಗಾಗಿ ಈ ಬಾರಿ ಉತ್ಪಾದನೆ ಕಡಿಮೆಯಾಗುವ ನಿರೀಕ್ಷೆ ಮಾಡಲಾಗಿದೆ ಎಂದು ಅಮೆರಿಕದ ಕೃಷಿ ಇಲಾಖೆ (ಯುಎಸ್‌ಡಿಎ) ವರದಿ ತಿಳಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಅರೇಬಿಕಾ ಮತ್ತು ರೋಬಸ್ಟಾಕ್ಕೆ ಉತ್ತಮ ಬೆಲೆ ಬಂದಿದೆ. ಹೀಗಾಗಿ ದೇಶಿ ಮಾರುಕಟ್ಟೆಯಲ್ಲಿಯೂ ಗರಿಷ್ಠ ಬೆಲೆಗೆ ಮಾರಾಟವಾಗುತ್ತಿದೆ. ಉತ್ತಮ ಬೆಲೆ ಇರುವುದರಿಂದ ರಫ್ತು ವಹಿವಾಟು ಹೆಚ್ಚಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.