ADVERTISEMENT

ಗೃಹ ಬಳಕೆ ವಸ್ತುಗಳ ದುರಸ್ತಿಗೂ ಆ್ಯಪ್…

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 19:30 IST
Last Updated 11 ಜುಲೈ 2017, 19:30 IST
ಗೃಹ ಬಳಕೆ ವಸ್ತುಗಳ ದುರಸ್ತಿಗೂ ಆ್ಯಪ್…
ಗೃಹ ಬಳಕೆ ವಸ್ತುಗಳ ದುರಸ್ತಿಗೂ ಆ್ಯಪ್…   

ಮನೆಯಲ್ಲಿ ಅತಿಥಿಗಳು ಬರುವ ಸಮಯಕ್ಕೆ ಸರಿಯಾಗಿ ಏ.ಸಿ, ಮಿಕ್ಸರ್ ಕೆಟ್ಟು ಹೋಗಿ ಬಿಡುತ್ತವೆ, ತುರ್ತಾಗಿ ಯಾರಿಗಾದರೂ ಕರೆ ಮಾಡಬೇಕು ಎಂದಾಗ ಮೊಬೈಲ್ ಹ್ಯಾಂಗ್ ಆಗಿ ಬಿಡುತ್ತದೆ. ಮಕ್ಕಳ ಕಾರ್ಟೂನ್ ನೋಡುವಾಗಲೇ ಟಿ.ವಿ ಕೆಟ್ಟು ಹೋಗಿ ಬಿಡುತ್ತದೆ, ಸಂಜೆ ಗೃಹಿಣಿಯರು ಧಾರಾವಾಹಿಗಳನ್ನು ವೀಕ್ಷಿಸುವಾಗಲೇ ಟಿ.ವಿ ರಿಮೋಟ್ ಹಾಳಾಗಿ ಬೀಡುತ್ತದೆ! ಇತ್ತ ಚಾನೆಲ್ ಬದಲಿಸಲಾಗದೇ ಪರಿತಪಿಸುವ ಸ್ಥಿತಿ ಅವರದ್ದು. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು, ಯಾರಿಗೆ ಕರೆ ಮಾಡಬೇಕು ಎಂಬ ಗೊಂದಲ ಸಹಜವಾಗಿಯೇ ಇರುವಂತಹದು!

ಇಂತಹ ಸಂದರ್ಭದಲ್ಲಿ ‘ಹೆಲ್ಪ್‌ ಫಾರ್ ಶ್ಯೂರ್’ಗೆ ಕರೆ ಮಾಡುವುದು ಅಥವಾ ಆ್ಯಪ್ ಮೂಲಕ ಸಂಪರ್ಕಿಸಿದರೆ ಅವರು ತಾಂತ್ರಿಕ ಸಮಸ್ಯೆಗೆ ಪರಿಹಾರ ಹೇಳುತ್ತಾರೆ. ಸಮಸ್ಯೆ ಕ್ಲಿಷ್ಟಕರವಾಗಿದ್ದರೆ ತಮ್ಮ ಕಂಪೆನಿಯ ಕಾರ್ಯಕರ್ತರನ್ನು ಕಳುಹಿಸಿ ದುರಸ್ತಿ ಮಾಡಿಕೊಡುತ್ತಾರೆ.

‘ಹೆಲ್ಪ್‌ ಫಾರ್ ಶ್ಯೂರ್’ ಸಂಸ್ಥೆ ಬೆಂಗಳೂರು ಮೂಲದ ಸಂಸ್ಥೆ. ಗೃಹೋಪಯೋಗಿ ಸಾಧನಗಳು ಕೆಟ್ಟು ಹೋದರೆ ಅವುಗಳನ್ನು ರಿಪೇರಿ ಮಾಡಿಕೊಡುವುದೇ ಈ ಕಂಪೆನಿಯ ಮುಖ್ಯ ಕೆಲಸ. ಗ್ರಾಹಕರು ದೂರವಾಣಿ ಅಥವಾ ಹೆಲ್ಪ್‌ ಫಾರ್ ಶ್ಯೂರ್’ ಆ್ಯಪ್ ಮೂಲಕ ತಂತ್ರಜ್ಞರನ್ನು ಸಂಪರ್ಕಿಸಿ ಕೆಲವೇ ಕ್ಷಣದಲ್ಲಿ ಪರಿಹಾರ ಕಂಡುಕೊಳ್ಳಬಹುದು.
ಗೂಗಲ್ ಪ್ಲೇಸ್ಟೋರ್: helpforsure

ADVERTISEMENT

ಹೊಸ ಫೇಸ್‌ಬುಕ್‌ ಟಿವಿ…
200 ಕೋಟಿ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಇದೀಗ ಟಿ.ವಿ ಮತ್ತು ಕ್ರೀಡೆಗಳನ್ನು ನೇರ ಪ್ರಸಾರ ಮಾಡುವ ಸಿದ್ಧತೆ ನಡೆಸಿದೆ. ಇನ್ನು ಮುಂದೆ ಫೇಸ್‌ಬುಕ್‌ ಬಳಕೆದಾರರು ತಮ್ಮ ಖಾತೆಯಲ್ಲಿ ನೇರವಾಗಿ ಟಿವಿ ಮತ್ತು ಕ್ರೀಡೆ ವೀಕ್ಷಿಸಬಹುದು ಎಂದು ಫೇಸ್‌ಬುಕ್‌ ಕಂಪೆನಿಯ ಹಿರಿಯ ಅಧಿಕಾರಿ ನಿಕ್ ಗುರ್ಡಿನ್ ತಿಳಿಸಿದ್ದಾರೆ.

ಈ ಬಗ್ಗೆ ಕೆಲವು ಖಾಸಗಿ ಚಾನೆಲ್ ಗಳ ಜೊತೆಯಲ್ಲಿ ಮಾತುಕತೆ ನಡೆಸಲಾಗಿದೆ. ಇನ್ನು ಮುಂದೆ ಫೇಸ್‌ಬುಕ್‌ ಬಳಕೆದಾರರು ಟಿ.ವಿಗಳ ಮೊರೆ ಹೋಗುವ ಪ್ರಮೇಯವೇ ಬರುವುದಿಲ್ಲ. ಗ್ರಾಹಕರು ತಮ್ಮ ಖಾತೆಯ ಮೂಲಕವೇ ತಮ್ಮ ಇಷ್ಟದ ಕ್ರೀಡೆ, ಸಿನಿಮಾ, ಧಾರಾವಾಹಿಗಳ ನೇರ ಪ್ರಸಾರ ವೀಕ್ಷಿಸಬಹುದು. ಫೇಸ್‌ಬುಕ್‌ ಟಿ.ವಿ. ಲೈವ್ ಆಗುವುದಕ್ಕೆ ಸ್ವಲ್ಪ ಸಮಯ ಬೇಕು ಎಂದು ನಿಕ್ ಗುರ್ಡಿನ್ ಮಾಹಿತಿ ನೀಡಿದ್ದಾರೆ.

ಫೇಸ್‌ಬುಕ್‌ ಕಂಪೆನಿಯು ಧಾರಾವಾಹಿ ಹಕ್ಕು ಸ್ವಾಮ್ಯಕ್ಕೆ ಹಣ ನೀಡಲು ಸಿದ್ಧವಿದೆ. ಹಾಗೆಯೇ ಸಿನಿಮಾ ಮತ್ತು ಕ್ರೀಡೆಯ ನೇರ ಪ್ರಸಾರಕ್ಕೆ ಸಾಕಷ್ಟು ಹಣ ನೀಡಲಿದೆ. ಡಿಸ್ನಿ, ನೆಟ್‌ಪ್ಲೇಸ್, ಅಮೆಜಾನ್ ಟಿ.ವಿ ಚಾನೆಲ್‌ಗಳು, ಕಾರ್ಯಕ್ರಮಗಳ ನೇರ ಪ್ರಸಾರಕ್ಕೆ ಒಪ್ಪಿಗೆ ನೀಡಿವೆ. ಉಳಿದ ಚಾನೆಲ್‌ಗಳ ಜತೆಯಲ್ಲಿ ಮಾತುಕತೆ ನಡೆಯುತ್ತಿದ್ದು, ಅದು ಪೂರ್ಣವಾದ ಬಳಿಕ ಫೇಸ್‌ಬುಕ್‌ ಟಿ.ವಿ ಚಾನೆಲ್ ಆರಂಭವಾಗಲಿದೆ ಎಂದು ನಿಕ್ ಗುರ್ಡಿನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.