ADVERTISEMENT

ಗೃಹ ಸಾಲ ಬಡ್ಡಿದರ ಇಳಿಕೆ

ಪಿಟಿಐ
Published 15 ಮೇ 2017, 19:30 IST
Last Updated 15 ಮೇ 2017, 19:30 IST
ಗೃಹ ಸಾಲ ಬಡ್ಡಿದರ ಇಳಿಕೆ
ಗೃಹ ಸಾಲ ಬಡ್ಡಿದರ ಇಳಿಕೆ   

ನವದೆಹಲಿ: ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ ಲಿಮಿಟೆಡ್‌, ಗೃಹ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಶೇ 0.30ರಷ್ಟು ಇಳಿಸಿವೆ.

ಕೈಗೆಟುಕುವ ಮನೆಗಳ ಮಾರಾಟ ಉತ್ತೇಜಿಸಲು ₹ 30 ಲಕ್ಷವರೆಗಿನ ಸಾಲದ ಮೇಲಿನ ಬಡ್ಡಿ ದರ ಇಳಿಸಲಾಗಿದೆ. ಐಸಿಐಸಿಐ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ, ಮಹಿಳೆಯರಿಗೆ ಶೇ 8.35 ಮತ್ತು ಪುರುಷರಿಗೆ ಶೇ 8.40 ಬಡ್ಡಿ ದರದಲ್ಲಿ ಸಾಲ ವಿತರಿಸಿವೆ.

₹ 30 ರಿಂದ ₹ 75 ಲಕ್ಷವರೆಗಿನ ಗೃಹ ಸಾಲದ ಶೇ 8.50ರಷ್ಟು ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ₹ 75 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಬಡ್ಡಿ ದರ ಶೇ 8.75ದಿಂದ ಶೇ 8.55ಕ್ಕೆ ಇಳಿಯಲಿದೆ. ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಎಚ್‌ಡಿಎಫ್‌ಸಿ ತಿಳಿಸಿದೆ.

ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕಳೆದ ವಾರವೇ ಬಡ್ಡಿ ದರ ಕಡಿತ ಘೋಷಿಸಿತ್ತು. ಗೃಹ ಸಾಲ ಮಾರುಕಟ್ಟೆಯಲ್ಲಿ ಎಸ್‌ಬಿಐ ಶೇ 26ರಷ್ಟು ಪಾಲು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.