ADVERTISEMENT

‘ಗ್ರೂಪ್ ಸೆಲ್ಫಿ’ಯ ಒಪ್ಪೊ ಮೊಬೈಲ್‌

‘ಎಫ್ 3 ಪ್ಲಸ್’ ಬಿಡುಗಡೆ

​ಕೇಶವ ಜಿ.ಝಿಂಗಾಡೆ
Published 24 ಮಾರ್ಚ್ 2017, 19:30 IST
Last Updated 24 ಮಾರ್ಚ್ 2017, 19:30 IST
ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಒಪ್ಪೊ,ಎಫ್ 3 ಪ್ಲಸ್ ಮೊಬೈಲ್ ಬಿಡುಗಡೆ ಮಾಡಲಾಯಿತು
ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಒಪ್ಪೊ,ಎಫ್ 3 ಪ್ಲಸ್ ಮೊಬೈಲ್ ಬಿಡುಗಡೆ ಮಾಡಲಾಯಿತು   

ನವದೆಹಲಿ:  ಚೀನಾದ  ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆ ಒಪ್ಪೊ, ಗುಂಪಿನ ಸೆಲ್ಫಿ ತೆಗೆದುಕೊಳ್ಳಲೆಂದೇ ವಿಶೇಷವಾಗಿ ಅಭಿವೃದ್ಧಿಪಡಿಸಿರುವ ಡ್ಯುಯೆಲ್‌ ಕ್ಯಾಮೆರಾದ ‘ಎಫ್3 ಪ್ಲಸ್’ ಸ್ಮಾರ್ಟ್‌ಫೋನ್‌  ಪರಿಚಯಿಸಿದೆ.

ಸಂಸ್ಥೆಯ ಹೊಸ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿರುವ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ಗುರುವಾರ ಇಲ್ಲಿ ದೇಶಿ ಮಾರುಕಟ್ಟೆಗೆ ಈ ಮೊಬೈಲ್‌ ಬಿಡುಗಡೆ ಮಾಡಿದರು. ‘ಸೆಲ್ಫಿಗೆ ಸಂವಾದಿಯಾಗಿ ‘ಗ್ರೂಪಿ’ ವಿಶೇಷತೆಯ ವಿಶಿಷ್ಟ ಮೊಬೈಲ್‌ ಇದಾಗಿದೆ’ ಎಂದು ದೀಪಿಕಾ ಬಣ್ಣಿಸಿದರು.

‘ಬಂಧುಗಳು, ಸ್ನೇಹಿತರ ಜತೆಗೆ ತೆಗೆಯಿಸಿಕೊಳ್ಳುವ ಸೆಲ್ಫಿ ಅನುಭವಕ್ಕೆ ಇನ್ನಷ್ಟು ಮೆರುಗು ನೀಡುವ ಉದ್ದೇಶದಿಂದಲೇ ಈ  ಎಫ್3 ಪ್ಲಸ್  ಮೊಬೈಲ್‌ ಅಭಿವೃದ್ಧಿಪಡಿಸಲಾಗಿದೆ. ಗುಂಪು ಸೆಲ್ಫಿ ಲೋಕದಲ್ಲಿ ಇದು ಹೊಸ ಅಲೆಯನ್ನೇ ಸೃಷ್ಟಿಸಲಿದೆ’  ಎಂದು ಒಪ್ಪೊ ಇಂಡಿಯಾ ಅಧ್ಯಕ್ಷ ಸ್ಕೈ ಲಿ ಹೇಳಿದರು.

ADVERTISEMENT

ಮಾರ್ಚ್‌ 31ರವರೆಗೆ ಮುಂಗಡ ಕಾದಿರಿಸಬಹುದು. ಏಪ್ರಿಲ್‌ 1ರಿಂದ ದೇಶದಾದ್ಯಂತ ಖರೀದಿಗೆ ಲಭ್ಯ ಇರಲಿದೆ. ಬೆಲೆ ₹ 30,990.
ಖ್ಯಾತ ಛಾಯಾಗ್ರಾಹಕ ಡಬೂ ರತ್ನಾನಿ ಅವರು  ಸೆಲ್ಫಿ ವೈಶಿಷ್ಟ್ಯಗಳ ಬಗ್ಗೆ  ವಿವರಣೆ ನೀಡಿದರು.  ಈ ಮೊಬೈಲ್‌ನಲ್ಲಿ  ಗುಂಪು ಸೆಲ್ಫಿ ಮೂಲಕ ಹೆಚ್ಚು ಜನರನ್ನು ಸೆರೆ ಹಿಡಿಯಬಹುದಾಗಿದೆ.

ಗುಂಪಿನ ಜತೆ ಸೆಲ್ಫಿ  ತೆಗೆದುಕೊಳ್ಳುವಾಗ ಮೂವರಿಗಿಂತ ಹೆಚ್ಚಿನವರಿದ್ದರೆ ‘ಗ್ರೂಪ್‌ ಸೆಲ್ಫಿ’ ಮೋಡ್‌ಗೆ ಬದಲಾಗಲು ಮೊಬೈಲ್‌ನಲ್ಲಿ ಸೂಚನೆ ಬರುತ್ತದೆ.   ಸುಸ್ಪಷ್ಟ ಸೆಲ್ಫಿ  ಸೆರೆ ಹಿಡಿಯಲು  ವಿನೂತನ ತಂತ್ರಜ್ಞಾನ ಒಳಗೊಂಡಿದೆ. ರಿಯರ್ ಕ್ಯಾಮೆರಾ ವೃತ್ತಿಪರ ಛಾಯಾಗ್ರಹಣದ ಅನುಭವವನ್ನೂ  ನೀಡಲಿದೆ’ ಎಂದು ಸ್ಕೈ ಲೀ  ವಿವರಿಸಿದರು.

ಮೊಬೈಲ್ ತಾಂತ್ರಿಕ ವಿಶೇಷತೆಗಳು
* ಪರದೆ ಗಾತ್ರ : 6 ಇಂಚು
* ಫ್ರಂಟ್ ಕ್ಯಾಮೆರಾ
* 16 ಮೆಗಾಪಿಕ್ಸೆಲ್
* ಕ್ಯಾಮೆರಾ–2: 8-ಮೆಗಾಪಿಕ್ಸಲ್, 120 ಡಿಗ್ರಿ ವೈಡ್  ಆ್ಯಂಗಲ್, ರಿಯರ್ ಕ್ಯಾಮರಾ: 16 ಮೆಗಾಪಿಕ್ಸೆಲ್
* ಸ್ಪರ್ಶದ ಮೂಲಕ ಚಾಲನೆ: 0.2 ಸೆಕೆಂಡುಗಳಲ್ಲಿ ಬೆರಳಗುರುತು ಗುರುತಿಸುವಿಕೆ
* ರ್‍ಯಾಮ್‌: 4ಜಿಬಿ
* ರೊಮ್: 64 ಜಿಬಿ  (256 ಜಿಬಿವರೆಗೆ ವಿಸ್ತರಣೆ)
* ಪ್ರೊಸೆಸರ್: ಕ್ವಾಲ್‍ಕಾಮ್ ಎಂಎಸ್‍ಎಂ 8976 ಪ್ರೊ
* ಸಿಮ್ ಕಾರ್ಡ್  : ಡ್ಯುಯಲ್ ನ್ಯಾನೊ 4ಜಿ ಸಿಮ್
* ನಾಲ್ಕು ಪಟ್ಟು ಹೆಚ್ಚು ವೇಗದ ವಿಒಒಸಿ ಫ್ಲಾಷ್‌ ಚಾರ್ಜ್
* ಚಿನ್ನ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯ
(ಸಂಸ್ಥೆಯ ಆಹ್ವಾನದ ಮೇರೆಗೆ ವರದಿಗಾರ, ನವದೆಹಲಿಗೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.