ADVERTISEMENT

ಜಾಗತಿಕ ವಿದ್ಯಮಾನ, ಬಡ್ಡಿ ದರ ಕಡಿತದ ಪ್ರಭಾವ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 19:30 IST
Last Updated 4 ಡಿಸೆಂಬರ್ 2016, 19:30 IST
ಜಾಗತಿಕ ವಿದ್ಯಮಾನ, ಬಡ್ಡಿ ದರ ಕಡಿತದ ಪ್ರಭಾವ
ಜಾಗತಿಕ ವಿದ್ಯಮಾನ, ಬಡ್ಡಿ ದರ ಕಡಿತದ ಪ್ರಭಾವ   

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬಡ್ಡಿದರ ಕಡಿತ, ಕೈಗಾರಿಕಾ ಪ್ರಗತಿಯ ಸೂಚ್ಯಂಕ  ಹಾಗೂ ಪ್ರಮುಖ ಜಾಗತಿಕ ವಿದ್ಯಮಾನಗಳು ಈ ವಾರದ ಷೇರುಪೇಟೆಯ ಮೇಲೆ  ಪರಿಣಾಮ ಬೀರಲಿವೆ.

ನೋಟುಗಳ ರದ್ದು ಮಾಡಿದ ನಂತರ ಮೊದಲ ಬಾರಿಗೆ ಆರ್‌ಬಿಐನ ಆರ್ಥಿಕ ನೀತಿ ಪರಾಮರ್ಶೆ ಬುಧವಾರ ಹೊರಬೀಳಲಿದೆ. ಬಡ್ಡಿದರ ಕಡಿತ ಕುರಿತು ಆರ್‌ಬಿಐ ತೆಗೆದುಕೊಳ್ಳುವ ನಿರ್ಧಾರ ಷೇರುಪೇಟೆ ವಹಿವಾಟಿನ ಮಧ್ಯಗಾಮಿ ಪರಿಣಾಮಗಳನ್ನು ನಿರ್ಣಯಿಸಲಿದೆ.

ಸೋಮವಾರ ಪ್ರಕಟವಾಗಲಿರುವ ಕೈಗಾರಿಕಾ ಪ್ರಗತಿ ಸೂಚ್ಯಂಕ (ಪಿಎಂಐ) ವರದಿ ಷೇರುಪೇಟೆಯ ಮೇಲೆ ಪರಿಣಾಮ ಬೀರಲಿದೆ. ‘ಈ ವಾರ ಷೇರುಪೇಟೆ ವಹಿವಾಟು ಭಾರಿ ಏರಿಳಿತಗಳಿಂದ ಕೂಡಿರಲಿದ್ದು, ಹೂಡಿಕೆದಾರರ ಮೇಲಿನ ಮಾರಾಟ ಒತ್ತಡವನ್ನು ಎಷ್ಟರ ಮಟ್ಟಿಗೆ ನಿಭಾಯಿಸುತ್ತದೆ ಕಾಯ್ದು ನೋಡಬೇಕು’ ಎನ್ನುತ್ತಾರೆ ಹಿರಿಯ ಮಾರುಕಟ್ಟೆ ತಜ್ಞರು.

ಅಮೆರಿಕದ ಫೆಡರಲ್‌ ಬ್ಯಾಂಕ್‌ನ  ಬಡ್ಡಿದರ ಕಡಿತದ ಮೇಲೆ ಬಹುತೇಕ ಜಾಗತಿಕ ಮತ್ತು ದೇಶಿ ಹೂಡಿಕೆದಾರರ ಕಣ್ಣು ನೆಟ್ಟಿದೆ.ಐರೋಪ್ಯ ಒಕ್ಕೂಟದಲ್ಲಿ ಉಳಿಯವ ಇಲ್ಲವೇ  ಹೊರಬೀಳುವ ಕುರಿತು ಭಾನುವಾರ ರಾತ್ರಿ ಪ್ರಕಟವಾಗಲಿರುವ ಇಟಲಿಯ  ಜನಾಭಿಪ್ರಾಯ ಕೂಡ  ಷೇರುಪೇಟೆಯ  ಮೇಲೆ ಪರಿಣಾಮ ಬೀರುವ ಜಾಗತಿಕ ವಿದ್ಯಮಾನವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.