ADVERTISEMENT

ಜಿಯೊ: ಈಗ ದೇಶದ ಅತಿದೊಡ್ಡ ಟೆಲಿಕಾಂ ಜಾಲ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 19:30 IST
Last Updated 12 ಸೆಪ್ಟೆಂಬರ್ 2017, 19:30 IST

ಕಳೆದ ಸೆಪ್ಟೆಂಬರ್‌ನಲ್ಲಿ 4G Volte ನೆಟ್‌ವರ್ಕ್‌ನೊಂದಿಗೆ ಬಳಕೆಗೆ ಮುಕ್ತವಾದ ರಿಲಯನ್ಸ್‌ ಸಂಸ್ಥೆಯ ಜಿಯೊ ನೆಟ್‌ವರ್ಕ್‌ ಈಗ ದೇಶದ ಅತಿದೊಡ್ಡ ಮತ್ತು ಸಂಪೂರ್ಣ ಎಲ್‌ಟಿಇ ಪ್ರಸಾರ ವ್ಯಾಪ್ತಿಯನ್ನು ಹೊಂದಿರುವ ಮೊಬೈಲ್‌ ನೆಟ್‌ವರ್ಕ್‌ ಆಗಿದೆ. ಕೇವಲ ಒಂದೇ ವರ್ಷದಲ್ಲಿ ದೇಶದ ಅತಿದೊಡ್ಡ ಮೊಬೈಲ್‌ ನೆಟ್‌ವರ್ಕ್‌ ಸಂಸ್ಥೆಯಾಗಿ ಬೆಳೆದಿರುವುದು ಇದರ ವಿಶೇಷತೆಯಾಗಿದೆ.

ಕಡಿಮೆ ದರದಲ್ಲಿ ಡೇಟಾ ಒದಗಿಸುತ್ತಿರುವುದರಿಂದ, ಈಗ ವಿಶ್ವದಲ್ಲೇ ಅತಿಹೆಚ್ಚು ಗೂಗಲ್‌, ಯೂಟ್ಯೂಬ್, ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ ಬಳಕೆದಾರರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಅಲ್ಲದೆ ಪ್ರತಿ ತಿಂಗಳು 65 ಕೋಟಿ ಗಂಟೆಗಳಿಗಿಂತ ಹೆಚ್ಚು ವಿಡಿಯೊ ಸ್ಟ್ರೀಮಿಂಗ್ ಮಾಡಲಾಗುತ್ತಿದೆ.

20 ಕೋಟಿ ಜಿಬಿಯಷ್ಟು ಇದ್ದ ಮೊಬೈಲ್‌ ಡೇಟಾ ಬಳಕೆ ಈಗ 150ಕೋಟಿ ಜಿಬಿಗೆ ತಲುಪಿದೆ. ಇದರಲ್ಲಿ ಸುಮಾರು 125ಕೋಟಿ ಜಿಬಿಯನ್ನು ಜಿಯೊ ಗ್ರಾಹಕರೇ ಬಳಸುತ್ತಿದ್ದಾರೆ. ಜಿಯೊದ ವಿಶೇಷ ಕೊಡುಗೆಯಿಂದಾಗಿ ಡೇಟಾ ಬಳಕೆದಾರರಲ್ಲಿ 155ನೇ ಸ್ಥಾನದಲ್ಲಿದ್ದ ಭಾರತ ಈಗ ಮೊದಲ ಸ್ಥಾನದಲ್ಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ADVERTISEMENT

ಜಿಯೊ ತಿಂಗಳಿಗೆ 100 ಕೋಟಿ ಜಿಬಿಗೂ ಹೆಚ್ಚು ಡೇಟಾ ಪೂರೈಕೆ ಮತ್ತು ನಿರ್ವಹಣೆ ಮಾಡುತ್ತಿರುವ ವಿಶ್ವದ ಮೊದಲ ಹಾಗೂ ಏಕೈಕ ಎಕ್ಸಾಬೈಟ್ ಟೆಲಿಕಾಂ ಜಾಲವಾಗಿದೆ. ದೇಶದ ಇತರೆ ಟೆಲಿಕಾಂ ಸಂಸ್ಥೆಗಳಿಗೆ ಹೋಲಿಸಿದೆ ಇದು ಐದು ಪಟ್ಟು ಹೆಚ್ಚು. ಸಂಪೂರ್ಣ ಐಪಿ ಜಾಲವನ್ನು ಹೊಂದಿರುವ ಜಿಯೊದ ಎಲ್‌ಟಿಇ ನೆಟ್‌ವರ್ಕ್‌ ವ್ಯಾಪ್ತಿ 800 ಮೆಗಾಹರ್ಟ್ಸ್‌, 1800 ಮೆಗಾಹರ್ಟ್ಸ್‌, ಹಾಗೂ 2300 ಮೆಗಾಹರ್ಟ್ಸ್‌ ಬ್ಯಾಂಡ್‌ಗಳವರೆಗೆ ಇದೆ. ಜೊತೆಗೆ ಒಂದು ಲಕ್ಷಕ್ಕೂ ಹೆಚ್ಚು ಸೈಟ್‌ಗಳನ್ನು ಒಳಗೊಂಡಿದೆ.

ಇನ್ನು ಉಚಿತ ಕರೆಗಳ ಸೌಲಭ್ಯ ದೊರೆಯುತ್ತಿರುವುದರಿಂದ, ನಿತ್ಯ 250 ಕೋಟಿ ನಿಮಿಷಕ್ಕೂ ಹೆಚ್ಚು ವಾಯ್ಸ್‌ ಟ್ರಾಫಿಕ್‌ ಅನ್ನು ಜಿಯೊ ನಿರ್ವಹಣೆ ಮಾಡುತ್ತಿದೆ. ಪ್ರಸ್ತುತ 13ಕೋಟಿ ಅಧಿಕ ಜನ ಜಿಯೊ ಸಂಪರ್ಕ ಹೊಂದಿದ್ದಾರೆ. ಜಿಯೊ ದರಪಟ್ಟಿ ಕೂಡ ಕಡಿಮೆಯಾಗಿದ್ದು, ₹50ಕ್ಕಿಂತ ಕಡಿಮೆ ದರದಲ್ಲಿ ಜಿಬಿ ಡೇಟಾ ದೊರೆಯುತ್ತಿದೆ.

ವೇಗದಲ್ಲಿ ಸುಧಾರಣೆ
4ಜಿ ಜಾಲದ ವ್ಯಾಪ್ತಿ, ಬಳಕೆ ಹಾಗೂ ವೇಗದಲ್ಲಿ ಜಿಯೊ ನೆಟ್‌ವರ್ಕ್‌ ಅಗ್ರಸ್ಥಾನದಲ್ಲಿ ಇದೆ ಎಂದು ದೂರಸಂಪರ್ಕ ಜಾಲಗಳ ಗುಣಮಟ್ಟ ಪರೀಕ್ಷಿಸುವ ಟ್ರಾಯ್‌ ಸ್ಪೀಡ್‌ಟೆಸ್ಟ್‌ ಅಂತರ್ಜಾಲ ತಾಣ ತಿಳಿಸಿದೆ.

ಬ್ರಾಡ್‌ಬ್ಯಾಂಡ್ ಗ್ರಾಹಕರ ಸಂಖ್ಯೆ ಹೆಚ್ಚಳ
31 ಆಗಸ್ಟ್‌ 2016 ಅಂಕಿ ಅಂಶಗಳ ಪ್ರಕಾರ, ಭಾರತದ ಬ್ರಾಡ್‌ಬ್ಯಾಂಡ್ ಚಂದಾದಾರರ ಸಂಖ್ಯೆ ಸುಮಾರು 15.4 ಕೋಟಿ ಇತ್ತು. ಜಿಯೊ ಬಂದ ನಂತರ ಈ ಸಂಖ್ಯೆ ಹೆಚ್ಚಳವಾಗಿದೆ. ಜೂನ್ 30, 2017ರ ಟ್ರಾಯ್ ಅಂಕಿ-ಅಂಶಗಳ ಪ್ರಕಾರ ಬ್ರಾಡ್‌ಬ್ಯಾಂಡ್ ಚಂದಾದಾರರ ಸಂಖ್ಯೆ 28.2 ಕೋಟಿ. ಸರಳ ಟ್ಯಾರಿಫ್ಜಿಯೊಗಿಂತ ಮುಂಚೆ ಮಾರುಕಟ್ಟೆಯಲ್ಲಿ ಸುಮಾರು 16,000 ಟ್ಯಾರಿಫ್‌ ಪ್ಲ್ಯಾನ್‌ಗಳು ಇದ್ದವು. ಈಗ ಈ ಸಂಖ್ಯೆ ಕಡಿಮೆ ಆಗುತ್ತಿದೆ.

ಉತ್ತಮ ಮಾರುಕಟ್ಟೆ: ಜಿಯೊದಿಂದಾಗಿ ಗೂಗಲ್ ಮತ್ತು ಫೇಸ್‌ಬುಕ್‌ಗೆ 7ಕೋಟಿ ಹೊಸ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಪ್ರಸ್ತುತ ಈ ಸಂಸ್ಥೆಗಳಿಗೆ ಭಾರತ ಉತ್ತಮ ಮಾರುಕಟ್ಟೆ. 4ಜಿ ಸಾಧನಗಳ ಬಳಕೆ ಹೆಚ್ಚಳ 3ಜಿ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ 4ಜಿ ಸ್ಮಾರ್ಟ್‌ಫೋನ್‌ಗಳ ಬಳಕೆ ಶೇ 95ರಷ್ಟು ಹೆಚ್ಚಾಗಿದೆ. ಜಿಯೊ ಬಳಕೆಗೆ ಬಂದ ನಂತರ 4ಜಿ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ ಮೂರು ಪಟ್ಟು ಏರಿಕೆ ಆಗಿದೆ. ಇನ್ನು ರಿಲಯನ್ಸ್ ಸಂಸ್ಥೆ ಫೀಚರ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ನಂತರ 60 ಲಕ್ಷ ಫೋನ್‌ಗಳು ಮಾರಾಟವಾಗಿವೆ.

ಸಾಮಾನ್ಯರಿಗೂ ಸುಲಭವಾಗಿ  ಮತ್ತು ಕಡಿಮೆ ದರಕ್ಕೆ ಅಂತರ್ಜಾಲ ಲಭಿಸುವಂತೆ ಜಿಯೊ ಮಾಡಿದೆ. ಜಿಯೊ ದರ ಸಮರದಿಂದಾಗಿ ಇತರೆ ನೆಟವರ್ಕ್‌ ಸಂಸ್ಥೆಗಳೂ ಡೇಟಾ ಮತ್ತು ಕರೆ ಶುಲ್ಕವನ್ನು ಇಳಿಸಿವೆ. ಜಿಯೊದಿಂದಾಗಿ ವಕ್ತಿಯೊಬ್ಬ ವಾರದಲ್ಲಿ ಟಿ.ವಿ ವೀಕ್ಷಿಸುವ ಸಮಯಕ್ಕಿಂತ ಮೊಬೈಲ್ ಬಳಸಲು ವೆಚ್ಚಿಸುವ ಸಮಯ ಏಳು ಪಟ್ಟು ಹೆಚ್ಚಾಗಿದೆ.

ಕ್ಷಣಕ್ಕೆ 7 ಗ್ರಾಹಕರು
ಸೆಕೆಂಡಿಗೆ 7 ಗ್ರಾಹಕರಂತೆ ಕೇವಲ 170 ದಿನದಲ್ಲಿ 10 ಕೋಟಿ ಗ್ರಾಹಕರು ಜಿಯೊ ನೆಟ್‌ವರ್ಕ್‌ಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಪಡೆದ ಸಂಸ್ಥೆಯಾಗಿ ರಿಲಾಯನ್ಸ್ ಜಿಯೊ ದಾಖಲೆ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.