ನವದೆಹಲಿ: ತನ್ನ ಪ್ರಯಾಣಿಕ ವಾಹನಗಳ ಮಾರಾಟ ಬೆಲೆಯನ್ನು ₹ 60 ಸಾವಿರದವರೆಗೆ ಹೆಚ್ಚಿಸಲು ಟಾಟಾ ಮೋಟರ್ಸ್ ನಿರ್ಧರಿಸಿದೆ.
ತಯಾರಿಕಾ ವೆಚ್ಚ ಹೆಚ್ಚಳ, ಬದಲಾದ ಮಾರುಕಟ್ಟೆ ಪರಿಸ್ಥಿತಿ, ಬಾಹ್ಯ ಆರ್ಥಿಕ ವಿದ್ಯಮಾನಗಳ ಕಾರಣಕ್ಕೆ ಏಪ್ರಿಲ್ 1ರಿಂದ ಈ ದರ ಹೆಚ್ಚಳ ಜಾರಿಗೆ ಬರಲಿದೆ ಎಂದು ಸಂಸ್ಥೆ ತಿಳಿಸಿದೆ.
ಸಂಸ್ಥೆಯ ಜೆನ್ ಎಕ್ಸ್ ನ್ಯಾನೊ ಕಾರಿನ ಆರಂಭಿಕ ಬೆಲೆ ₹ 2.28 ಲಕ್ಷ ಇದ್ದರೆ, ವಿಲಾಸಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್ಯುವಿ) ಹೆಕ್ಸಾದ ದೆಹಲಿ ಎಕ್ಸ್ಷೋರೂಂ ಬೆಲೆ ₹ 17.42 ಲಕ್ಷ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.