ADVERTISEMENT

ಟ್ಯಾಕ್ಸಿ ಸೇವೆ ಇಲ್ಲ: ರಿಲಯನ್ಸ್‌ ಸ್ಪಷ್ಟನೆ

ಪಿಟಿಐ
Published 25 ಫೆಬ್ರುವರಿ 2017, 19:30 IST
Last Updated 25 ಫೆಬ್ರುವರಿ 2017, 19:30 IST
ಟ್ಯಾಕ್ಸಿ ಸೇವೆ ಇಲ್ಲ: ರಿಲಯನ್ಸ್‌ ಸ್ಪಷ್ಟನೆ
ಟ್ಯಾಕ್ಸಿ ಸೇವೆ ಇಲ್ಲ: ರಿಲಯನ್ಸ್‌ ಸ್ಪಷ್ಟನೆ   

ನವದೆಹಲಿ: ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಆರಂಭಿಸುವ ಯಾವುದೇ ಯೋಜನೆ ಇಲ್ಲ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪೆನಿ ಸ್ಪಷ್ಟಪಡಿಸಿದೆ.

‘ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಆರಂಭಿಸಲು ರಿಲಯನ್ಸ್‌ ಕಂಪೆನಿ 600 ಕಾರುಗಳನ್ನು ಖರೀದಿಸಲಿದೆ’ ಎಂದು ಆನ್‌ಲೈನ್‌ ಪತ್ರಿಕೆಯೊಂದು ಸುದ್ದಿ ಮಾಡಿರುವುದಕ್ಕೆ ಕಂಪೆನಿ ವಕ್ತಾರರೊಬ್ಬರು ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ಅಂತಹ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜಿಯೊ ಮನಿ: ನಗದು ರಹಿತವಾಗಿ ಟ್ಯಾಕ್ಸಿ ಹಣ ಪಾವತಿಗೆ ಸಂಬಂಧಿಸಿದಂತೆ ರಿಲಯನ್ಸ್ ಜಿಯೊ ಮನಿ ಮತ್ತು ಆ್ಯಪ್‌ ಆಧಾರಿತ ಕ್ಯಾಬ್‌ ಸೇವಾ ಸಂಸ್ಥೆ ಉಬರ್ ವಾರದ ಹಿಂದಷ್ಟೇ ಒಪ್ಪಂದ ಮಾಡಿಕೊಂಡಿದ್ದವು. ಪ್ರಯಾಣಿಕರು ಜಿಯೊಮನಿ ಬಳಸಿ ಉಬರ್‌ಗೆ ಹಣ ಪಾವತಿ ಮಾಡಲು  ಈ ಒಪ್ಪಂದ ನೆರವಾಗುತ್ತದೆ.

ADVERTISEMENT

ಈ ಒಪ್ಪಂದದ ಬಳಿಕ ರಿಲಯನ್ಸ್‌, ಟ್ಯಾಕ್ಸಿ ಸೇವೆ ಆರಂಭಿಸಲಿದೆ ಎನ್ನುವ ವದಂತಿ ದಟ್ಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.