ADVERTISEMENT

ಟ್ರಯಂಫ್‌ ಮೋಟರ್‌ ಸೈಕಲ್ಸ್‌ ಷೋರೂಂ ಆರಂಭ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 19:30 IST
Last Updated 26 ಏಪ್ರಿಲ್ 2018, 19:30 IST
ಟ್ರ್ಯುಂಫ್‌ನ ಹೊಸ ಮಾಡೆಲ್‌ಗಳಾದ ಟ್ರ್ಯುಂಫ್‌ ಸ್ಪೀಡ್‌ ಮಾಸ್ಟರ್‌, ಟೈಗರ್‌ ಎಕ್ಸ್‌ಸಿಎಸ್‌ 800ನ್ನು ಟ್ರ್ಯುಂಫ್‌ ಮೋಟಾರ್‌ಸೈಕಲ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ವಿಮಲ್‌ ಸಂಬ್ಲಿ ಬಿಡುಗಡೆ ಮಾಡಿದರು. ಕೀರ್ತಿ ಟ್ರ್ಯುಂಫ್‌ ಮಂಗಳೂರು ಡೀಲರ್‌ ಪ್ರಿನ್ಸಿಪಲ್‌ ಸಂಜಯ್‌ ಎಂ, ರೂಪಾ, ಸಚಿನ್‌ ಇದ್ದರು.
ಟ್ರ್ಯುಂಫ್‌ನ ಹೊಸ ಮಾಡೆಲ್‌ಗಳಾದ ಟ್ರ್ಯುಂಫ್‌ ಸ್ಪೀಡ್‌ ಮಾಸ್ಟರ್‌, ಟೈಗರ್‌ ಎಕ್ಸ್‌ಸಿಎಸ್‌ 800ನ್ನು ಟ್ರ್ಯುಂಫ್‌ ಮೋಟಾರ್‌ಸೈಕಲ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ವಿಮಲ್‌ ಸಂಬ್ಲಿ ಬಿಡುಗಡೆ ಮಾಡಿದರು. ಕೀರ್ತಿ ಟ್ರ್ಯುಂಫ್‌ ಮಂಗಳೂರು ಡೀಲರ್‌ ಪ್ರಿನ್ಸಿಪಲ್‌ ಸಂಜಯ್‌ ಎಂ, ರೂಪಾ, ಸಚಿನ್‌ ಇದ್ದರು.   

ಮಂಗಳೂರು: ಐಷಾರಾಮಿ ಬೈಕ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಟ್ರಯಂಫ್‌ ಮೋಟರ್‌ಸೈಕಲ್ಸ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್‌, ಭಾರತದಲ್ಲಿ ತನ್ನ ಡೀಲರ್‌ಶಿಪ್‌ ವಿಸ್ತರಿಸುತ್ತಿದ್ದು, ನಗರದ ಪಡೀಲ್‌ನಲ್ಲಿ ತನ್ನ 16ನೇ ಷೋರೂಂ ಆರಂಭಿಸಿದೆ.

‘ದಕ್ಷಿಣ ಭಾರತದ 2ನೇ ಹಂತದ ನಗರಗಳ ಮಾರುಕಟ್ಟೆಗೆ ಐಷಾರಾಮಿ ಬ್ರ್ಯಾಂಡ್‌ನ ಬೈಕ್‌ಗಳು ಲಗ್ಗೆ ಇಡುತ್ತಿರುವುದರ ಲಕ್ಷಣ ಇದಾಗಿದೆ. ಮಂಗಳೂರಿನಲ್ಲಿ ಉತ್ತಮ ವಹಿವಾಟು ನಡೆಸುವ ವಿಶ್ವಾಸ ಇದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿಮಲ್‌ ಸಂಬ್ಲಿ ಅವರು ಗುರುವಾರ ಇಲ್ಲಿನ ಕೀರ್ತಿ ಟ್ರಯಂಫ್‌ ಷೋರೂಮ್‌ನಲ್ಲಿ ನಡೆದ
ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಂಗಳೂರು ಡೀಲರ್‌ಶಿಪ್‌ ಪ್ರಾರಂಭವು ದಕ್ಷಿಣ ಭಾರತದಲ್ಲಿಯೇ ಟ್ರಯಂಫ್‌ ವಿಸ್ತರಣೆಯನ್ನು ಮತ್ತಷ್ಟು ಬಲಗೊಳಿಸಲಿದೆ. ಸಂಸ್ಥೆಯ 5ನೇ ವರ್ಷಾಚರಣೆಯಲ್ಲಿ ಈ ಅತ್ಯಾಧುನಿಕ ಡೀಲರ್‌ಶಿಪ್‌ ಆರಂಭಿಸಿದ್ದೇವೆ. 2014 ಜನವರಿಯಲ್ಲಿ ತನ್ನ ಮೊದಲ ಡೀಲರ್‌ಶಿಪ್‌ ಪ್ರಾರಂಭಿಸಿದ ದಿನದಿಂದಲೂ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ. ಸದ್ಯಕ್ಕೆ 4,500ಕ್ಕೂ ಅಧಿಕ ಗ್ರಾಹಕರಿದ್ದಾರೆ. 53ಕ್ಕೂ ಹೆಚ್ಚು ಉದ್ಯಮ ಪುರಸ್ಕಾರಗಳನ್ನು ಗಳಿಸಿದೆ. ಐಷಾರಾಮಿ ಬೈಕ್‌ ಮಾರುಕಟ್ಟೆಯಲ್ಲಿ ಶೇ 19ರಷ್ಟು ಮಾರುಕಟ್ಟೆ ಪಾಲು ಹೊಂದಿದೆ’ ಎಂದರು.

ADVERTISEMENT

‘ಟ್ರಯಂಫ್‌ನಲ್ಲಿ  ಕ್ಲಾಸಿಕ್‌, ಅಡ್ವೆಂಚರ್‌, ರೋಡ್‌, ಸೂಪರ್‌ ಸ್ಪೋರ್ಟ್ಸ್‌, ಕ್ರೂಸೈರ್‌ ಹೀಗೆ 5 ಮಾದರಿಯ ಮೋಟಾರ್‌ ಬೈಕ್‌ಗಳಿವೆ. ₹7.50 ಲಕ್ಷದಿಂದ ಆರಂಭವಾಗಿ
₹ 23 ಲಕ್ಷದವರೆಗಿನ ಬೈಕ್‌ಗಳು ಇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.