ADVERTISEMENT

ತರಕಾರಿ ಸೇವನೆ ಮಾಹಿತಿಗೆ ವೆಜ್‌ಈಜೀ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 19:30 IST
Last Updated 21 ನವೆಂಬರ್ 2017, 19:30 IST
ತರಕಾರಿ ಸೇವನೆ ಮಾಹಿತಿಗೆ ವೆಜ್‌ಈಜೀ ಆ್ಯಪ್‌
ತರಕಾರಿ ಸೇವನೆ ಮಾಹಿತಿಗೆ ವೆಜ್‌ಈಜೀ ಆ್ಯಪ್‌   

ಆಸ್ಟ್ರೇಲಿಯಾದಲ್ಲಿ ಸಾಕಷ್ಟು ಜನರು ತರಕಾರಿ ಸೇವನೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಜನರಲ್ಲಿ ತರಕಾರಿ ಸೇವನೆ ಅಭಿರುಚಿ ಬೆಳೆಸುವ ಸಲುವಾಗಿ ವೆಜ್‌ಈಜೀ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಕರು ತರಕಾರಿ ಸೇವನೆ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಇದರಿಂದಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಕಾಮನ್‌ವೆಲ್ತ್‌ ಸೈಂಟಿಫಿಕ್‌ ಆ್ಯಂಡ್‌ ಇಂಡಸ್ಟ್ರೀಯಲ್ ರಿಸರ್ಚ್‌ ಆರ್ಗನೈಜೆಷನ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಮ್ಯಾನ್ನಿ ನೋಕ್ಸ್‌ ತಿಳಿಸಿದ್ದಾರೆ.

ಯುವಕರಲ್ಲಿ ತರಕಾರಿ ಸೇವನೆ ಬಗ್ಗೆ ಜಾಗೃತಿ ಮೂಡಿಸಲು ಈ ವೆಜ್‌ಈಜೀ ಆ್ಯಪ್‌ ವಿನ್ಯಾಸ ಮಾಡಲಾಗಿದೆ.  ಒಂದು ದಿನದಲ್ಲಿ ಮೂರು ವಿಧದ ತರಕಾರಿ ಸೇವನೆ  ಹಾಗೂ ರಾತ್ರಿಯ ಊಟಕ್ಕೆ ತರಕಾರಿ ಬಳಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಮ್ಯಾನ್ನಿ ನೋಕ್ಸ್‌ ಹೇಳಿದ್ದಾರೆ. ಬಳಕೆದಾರರು ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡರೆ ಸಾಕು ಅದು ಸ್ಮಾರ್ಟ್‌ಫೋನ್‌ ಮೂಲಕ ತರಕಾರಿ ಸೇವಿಸುವಂತೆ ನಿರ್ದೇಶನ ನೀಡುತ್ತದೆ. ಯಾವ ದಿನ ಯಾವ ತರಕಾರಿಯನ್ನು ಸೇವಿಸಬೇಕು ಎಂಬ ಮಾಹಿತಿಯನ್ನು ನೀಡುತ್ತದೆ.

ಮ್ಯಾನ್ನಿ ನೋಕ್ಸ್‌ ಸಂಶೋಧನಾ ತಂಡದವರು 2015 ರಿಂದ 2017ರ ಆಕ್ಟೋಬರ್‌ವರೆಗೂ 1.91 ಲಕ್ಷ ಯುವಕರನ್ನು ಸಂದರ್ಶನಕ್ಕೆ ಒಳಪಡಿಸಿದ್ದರು. ಇವರಲ್ಲಿ ಶೇ 80 ರಷ್ಟು ಜನರು ನಿಯಮಿತವಾಗಿ ತರಕಾರಿ ಸೇವನೆ ಮಾಡುತ್ತಿಲ್ಲ ಎಂಬುದು ತಿಳಿದುಬಂದಿದೆ. ಒತ್ತಡದ ಜೀವನ ಮತ್ತು ಸಮಯದ ಕೊರತೆಯೇ ಇದಕ್ಕೆ ಕಾರಣ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ ಎಂದು ಮ್ಯಾನ್ನಿ ನೋಕ್ಸ್‌ ಹೇಳಿದ್ದಾರೆ.

ADVERTISEMENT

ಗೂಗಲ್‌ ಪ್ಲೇಸ್ಟೋರ್:  VegEze app

ದಯವಿಟ್ಟು ತೊಂದರೆ ಕೊಡಬೇಡಿ
ಇನ್ನು ಮುಂದೆ ಆ್ಯಪಲ್‌ ಐಪೋನ್‌ಗಳಲ್ಲಿ ತೊಂದರೆ ಕೊಡಬೇಡಿ (Do-Not-Disturb ) ಎಂಬ ವೈಶಿಷ್ಟ್ಯ ಲಭ್ಯವಾಗಲಿದೆ ಎಂದು ಆ್ಯಪಲ್‌ ಕಂಪೆನಿ ತಿಳಿಸಿದೆ. ಆ್ಯಪಲ್‌ ಐಒಎಸ್‌ ಮಾದರಿಯ 11 ಅವತರಣಿಕೆಯ ಫೋನ್‌ಗಳಲ್ಲಿ ’ಡಿಎನ್‌ಡಿ’ (DND) ಟೂಲ್‌ ಸಿಗಲಿದೆ. ಈ ಬಗ್ಗೆ ಆ್ಯಪಲ್‌ ಕಂಪೆನಿ ಭಾರತೀಯ ದೂರಸಂಪರ್ಕ ಪ್ರಾದಿಕಾರದ ಜೊತೆ ಚರ್ಚೆ ಮಾಡಿದ್ದು ಇನ್ನು ಕೆಲವೇ ದಿನಗಳಲ್ಲಿ ಈ ಸೌಲಭ್ಯವು ಗ್ರಾಹಕರಿಗೆ ದೊರೆಯಲಿದೆ.

ಐಫೋನ್‌ ಬಳಕೆದಾರರಿಗೆ ಇನ್ನು ಮುಂದೆ ವಾಣಿಜ್ಯ ಕರೆಗಳು ಮತ್ತು ಎಸ್‌ಎಂಎಸ್‌ ಗಳು ಬರುವುದಿಲ್ಲ. ಅಂದರೆ ಕರೆಗಳು ಕಾಲ್‌ ಲಾಗ್‌ನಲ್ಲಿ ಮತ್ತು ಎಸ್‌ಎಂಎಸ್‌ಗಳು ಇನ್‌ ಬಾಕ್ಸ್‌ನಲ್ಲಿ ಇರುತ್ತವೆ. ಬಳಕೆದಾರರು ತಮಗೆ ಇಷ್ಟ ಬಂದ ಕರೆಗಳನ್ನು ಆಲಿಸುವ ಮತ್ತು ಮೆಸೆಜ್‌ ನೋಡುವ ಆಯ್ಕೆಯ ಅವಕಾಶ ಕಲ್ಪಿಸಲಾಗಿದೆ.

ಮೆಸೆಂಜರ್‌ಗೂ ಬಂತು ಅನ್ವೇಷಕ ಟ್ಯಾಬ್‌
ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್‌ ತನ್ನ ಮೆಸೆಂಜರ್‌ ಆ್ಯಪ್‌ನಲ್ಲಿ ಅನ್ವೇಷಕ ಟ್ಯಾಬ್‌ ಅನ್ನು ಶೀಘ್ರದಲ್ಲೇ ಅಳವಡಿಸಲಾಗುವುದು ಎಂದು ಹೇಳಿದೆ. ಭಾರತೀಯ ಮೆಸೆಂಜರ್‌ ಬಳಕೆದಾರರೂ ಈ ಪ್ರಯೋಜನವನ್ನು ಪಡೆಯಬಹುದು.

ಮೆಸೆಂಜರ್‌ ಮುಖಪುಟದಲ್ಲಿ ಅಳವಡಿಸಿರುವ ಅನ್ವೇಷಕ ಟ್ಯಾಬ್‌ ಮೂಲಕ ಬಳಕೆದಾರರು, ಸಂದರ್ಶಕರ ಮಾಹಿತಿ, ವಾಣಿಜ್ಯ , ಮನರಂಜನೆ ಮಾಹಿತಿಯನ್ನು ಈ ನೂತನ ಟ್ಯಾಬ್‌ ಮೂಲಕ ಪಡೆಯಬಹುದು.

ವಾಣಿಜ್ಯ ವಿಸ್ತರಣೆಗೆ ‘ಜಸ್ಟ್‌ ಬಿಜಿನೆಸಸ್‌’ ಆ್ಯಪ್‌
ವಾಣಿಜ್ಯ ಚಟುವಟಿಕೆಗಳನ್ನು ಜಾಗತಿಕವಾಗಿ ವಿಸ್ತರಿಸುವವರ ಅನುಕೂಲಕ್ಕಾಗಿ ’ಜಸ್ಟ್‌ ಬಿಜಿನೆಸಸ್‌’ ಅನ್ನು ವಿನ್ಯಾಸ ಮಾಡಲಾಗಿದೆ. ಈ ಮೊಬೈಲ್‌ ಅಪ್ಲಿಕೇಷನ್‌  ಆಂಡ್ರಾಯ್ಡ್‌ ಮತ್ತು ಐಒಎಸ್ ಮಾದರಿಯಲ್ಲಿ ಲಭ್ಯವಿದೆ. ವ್ಯಾಪಾರಸ್ಥರು, ಸಣ್ಣ ಉದ್ದಿಮೆದಾರರು ಈ ಜಸ್ಟ್‌ ಬಿಜಿನೆಸಸ್‌ ಮೂಲಕ ಸರಳವಾಗಿ ವಾಣಿಜ್ಯ ಮಾಹಿತಿ ಪಡೆಯಬಹುದು ಮತ್ತು ಹಂಚಿಕೊಳ್ಳಬಹುದು.

ಬಳಕೆದಾರರು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ನಂತರ ಅಕೌಂಟ್‌ವೊಂದನ್ನು ಸೃಷ್ಟಿಮಾಡಿಕೊಳ್ಳಬೇಕು. ಇದರಲ್ಲಿ ಕೊಳ್ಳುವವರು ಮತ್ತು ಮಾರುವವರು ಎಂಬ ಎರಡು ವಿಭಾಗಗಳಿವೆ. ಗ್ರಾಹಕರು ಕೊಳ್ಳುವವರ, ಉತ್ಪಾದಕರು ಮಾರುವವರ ವಿಭಾಗದಲ್ಲಿ ಖಾತೆ ತೆರೆದು ಕೊಳ್ಳಬೇಕು. ಷೇರು ಮಾಹಿತಿ, ಪೇಟೆ ಸಮಾಚರ, ಸರಕುಗಳ ಮಾಹಿತಿ, ಗುಣಮಟ್ಟ, ಸರಕುಗಳ ಉತ್ಪಾದನೆ, ಕಚ್ಛಾ ಸರಕುಗಳ ಲಭ್ಯತೆ, ತಂತ್ರಜ್ಞಾನ ವಿನಿಮಯ, ಮಾನವ ಸಂಪನ್ಮೂಲ, ಆಮದು, ರಫ್ತು ಸೇರಿದಂತೆ ವ್ಯಾಪಾರ ವಹಿವಾಟಿನ ಎಲ್ಲ ಮಾಹಿತಿ ಈ ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ದೊರೆಯಲಿದೆ.

ಗೂಗಲ್‌ ಪ್ಲೇಸ್ಟೋರ್: Just Businesses' App

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.