ADVERTISEMENT

ತಿಂಗಳಾಂತ್ಯಕ್ಕೆ ಪೇಟಿಎಂ ಬ್ಯಾಂಕ್‌

ಐಎಎನ್ಎಸ್
Published 18 ಮಾರ್ಚ್ 2017, 19:30 IST
Last Updated 18 ಮಾರ್ಚ್ 2017, 19:30 IST
ತಿಂಗಳಾಂತ್ಯಕ್ಕೆ ಪೇಟಿಎಂ ಬ್ಯಾಂಕ್‌
ತಿಂಗಳಾಂತ್ಯಕ್ಕೆ ಪೇಟಿಎಂ ಬ್ಯಾಂಕ್‌   

ಮುಂಬೈ: ‘ಮೊಬೈಲ್‌ ವಾಲೆಟ್‌ ವಹಿವಾಟು, ಪೇಮೆಂಟ್ಸ್‌ ಬ್ಯಾಂಕ್‌ ಸ್ಥಾಪಿಸುವುದರ ಪೂರ್ವಭಾವಿ ಸಿದ್ಧತೆಯಾಗಿದೆ’ ಎಂದು ಪೇಟಿಎಂ ಸ್ಥಾಪಕ ವಿಜಯ್‌ ಶೇಖರ್‌ ಶರ್ಮಾ ತಿಳಿಸಿದ್ದಾರೆ.

‘ಈ ತಿಂಗಳಾಂತ್ಯಕ್ಕೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅಸ್ತಿತ್ವಕ್ಕೆ ಬರಲಿದೆ. ಅದೇ ನಮ್ಮ ಮುಖ್ಯ ವಹಿವಾಟು ಆಗಿರಲಿದೆ’ ಎಂದು ಅವರು ಹೇಳಿದ್ದಾರೆ. ಇಲ್ಲಿ ನಡೆದ ಸಮಾರಂಭವೊಂದರಲ್ಲಿ ಅವರು ಮಾತನಾಡಿದರು.

‘ಸಾಂಪ್ರದಾಯಿಕ ಬ್ಯಾಂಕ್‌ಗಳ ಜತೆಗೆ  ಸ್ಪರ್ಧೆಗೆ ಇಳಿಯುವ ಉದ್ದೇಶ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಇಲ್ಲ. ನಮ್ಮ ಬ್ಯಾಂಕಿಂಗ್‌ ಸೇವೆ ಹೊಸ ಮಾದರಿಯಲ್ಲಿ ಇರಲಿದೆ.  ಇದುವರೆಗೆ ಬ್ಯಾಂಕಿಂಗ್‌ ಸೌಲಭ್ಯದಿಂದ ವಂಚಿತರಾದವರನ್ನು ಬ್ಯಾಂಕ್‌ ವ್ಯಾಪ್ತಿಗೆ ತರುವುದು ನಮ್ಮ ಉದ್ದೇಶವಾಗಿದೆ. 2020ರ ವೇಳೆಗೆ 50 ಕೋಟಿ ಗ್ರಾಹಕರನ್ನು ತಲುಪುವ  ಗುರಿ ನಿಗದಿಪಡಿಸಲಾಗಿದೆ.

‘ನವೋದ್ಯಮಗಳನ್ನು (ಸ್ಟಾರ್ಟ್‌ಅಪ್‌)  ಸ್ಥಾಪಿಸಲು ಮುಂದಾಗುತ್ತಿರುವ ಉತ್ಸಾಹಿ ಉದ್ಯಮಿಗಳಿಂದ ಅವರಲ್ಲಿನ ಪ್ರತಿಭೆ ಹೊರ ಬರುತ್ತಿದೆ. ತಂತ್ರಜ್ಞಾನವನ್ನು ಯಾವತ್ತೂ ಹಗುರವಾಗಿ ಪರಿಗಣಿಸಬಾರದು.  ಮುಂದಿನ ಎರಡು – ಮೂರು ವರ್ಷಗಳಲ್ಲಿ ದೇಶದಲ್ಲಿ  ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ 40ರಿಂದ 50 ಕೋಟಿಗಳಿಗೆ ತಲುಪಲಿದೆ.

ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಜನರಿಗೆ ತಲುಪದಿರಲು ತಂತ್ರಜ್ಞಾನದ ವೆಚ್ಚ ಕಾರಣವಲ್ಲ. ಅದೊಂದು ದೂರಸಂಪರ್ಕ ಜಾಲದ ಸಮಸ್ಯೆಯಾಗಿದೆ’ ಎಂದು ಶರ್ಮಾ ವಿಶ್ಲೇಷಿಸಿದ್ದಾರೆ.

ADVERTISEMENT

*
ಉದ್ದಿಮೆ ವಹಿವಾಟನ್ನು ದುರ್ಬಲಗೊಳಿಸಬಹುದೇ ಹೊರತು ತಂತ್ರಜ್ಞಾನವನ್ನಲ್ಲ. ತಂತ್ರಜ್ಞಾನವು ಸುನಾಮಿ ಇದ್ದಂತೆ.
-ವಿಜಯ್‌ ಶೇಖರ್‌ ಶರ್ಮಾ,
ಪೇಟಿಎಂ ಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.