ADVERTISEMENT

ದೇನಾ ಬ್ಯಾಂಕ್‌ ಸಾಲ ಉತ್ಸವ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಬೆಂಗಳೂರು: ಗೃಹ ಮತ್ತು ವಾಹನ ಖರೀದಿ ಸಾಲ ಉತ್ತೇಜಿಸಲು ದೇನಾ ಬ್ಯಾಂಕ್‌, ನವೆಂಬರ್‌ ತಿಂಗಳ ಅಂತ್ಯದವರೆಗೆ ‘ದೇನಾ ರಿಟೇಲ್‌ ಸಾಲ ಉತ್ಸವ’ ಹಮ್ಮಿಕೊಂಡಿದೆ.

ಈ ಸಾಲ ಉತ್ಸವದ ಸಂದರ್ಭದಲ್ಲಿ, ಬ್ಯಾಂಕ್‌ ₹ 75 ಲಕ್ಷವರೆಗಿನ ಗೃಹ ಸಾಲವನ್ನು ಶೇ 8.25 ಬಡ್ಡಿ ಮತ್ತು ಕಾರ್‌ ಖರೀದಿ ಸಾಲವನ್ನು ಶೇ 9ರ ಬಡ್ಡಿ ದರದಲ್ಲಿ ವಿತರಿಸಲಿದೆ. ಮಹಿಳೆಯರಿಗೆ ಕಾರ್‌ ಸಾಲವನ್ನು ಶೇ 8.90ರ ಬಡ್ಡಿ ದರದಲ್ಲಿ ವಿತರಿಸಲಾಗುವುದು. ಈ ಉತ್ಸವದ ವೇಳೆಯಲ್ಲಿ ಸಾಲ ಮಂಜೂರಾತಿ ಮತ್ತು ದಾಖಲೆ ಪ್ರಕ್ರಿಯೆ ಶುಲ್ಕ ವಿಧಿಸುವುದಿಲ್ಲ.

ಆಸಕ್ತರು ದೇನಾ ಬ್ಯಾಂಕ್‌ನ ಯಾವುದೇ ಶಾಖೆಯನ್ನು ಸಂ‍ಪರ್ಕಿಸಬಹುದು ಎಂದು ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.